ಕನ್ನಡಕದ ಕಳವಳ
ತೆಗೆದು ಇಡು ಕಪ್ಪು ಕನ್ನಡಕ
ಅರಿಯುವುದು ಕಠಿಣ ಕಂಗಳಲಿ
ಕಂಗೊಳಿಸುವ ಕನಸುಗಳ
ಇಣುಕಿ ನೋಡುವೆ ಅಡಗಿ
ಕುಳಿತಿರುವ ನನ್ನ
ನಾ
***
ಅನಿರೀಕ್ಷಿತ ಬೆರಗಿನಿಂದ ನೋಡಿ
ಬೆಂಡಾಡೆ
ಗತಕಾಲದ ವೈಭವಗಳ ಸಿಹಿ-ಕಹಿ
ಮೆಲ್ಲುತ ಮೌನವಾದೆ
***
ನಗು ಮೊಗ ಚಿಮ್ಮುವ
ಜೀವನೋತ್ಸಾಹ
ಕಲಿಯುವ ಕನವರಿಕೆ
ಚಡಪಡಿಸುತಿದೆ ಮನ
ಏನೋ ಹೇಳಲು
***
ಅದುಮಿಡುವೆ ಅರಳುತಿರುವ
ನೂರಾರು ಭಾವನೆಗಳ
ಹೇಳಿದರೆ ಕಳೆದುಹೋಗುವ
ತಳಮಳ
---ಸಿದ್ದು ಯಾಪಲಪರವಿ
No comments:
Post a Comment