*ನಿಲ್ಲದ ಕನಸುಗಳು*
ಮೈತುಂಬ ತುಂಬಿ ತುಳುಕುವ ಕನಸುಗಳು
ಬರೀ ಬಣ್ಣ ತುಂಬಿ ಅಂದಗೊಳಿಸಿ
ನೋಡುತ ನೋಡುತ್ತ ನೋಡುತ್ತಾ
ನನಸಾಗಿಸಲು ಹಂಬಲಿಸುತಿದೆ ಜೀವ
ಅಹೋರಾತ್ರಿ
ಕಳೆದುಕೊಳ್ಳಬಾರದೆಂಬ ಸಾತ್ವಿಕ ಹಟ
ಅಗೋಚರ ಸುಪ್ತ ಮನಸಿನ
ಮಂಗನಾಟಕೆ ಕುಣಿಯುತ
ನಲಿಯುತಿದೆ ಜೀವ ಮರೆಯುತ ನೋವ
ಬಾ ಎಂದರೆ ಬರಲಾದೀತೆ ಬೇಡ ಎಂದರೆ
ದೂರಾದೀತೆ ದೂರಲಾದೀತೆ ?
ಹುಟ್ಟುತಿರುವ ಹತ್ತು ಹಲವು ಪ್ರಶ್ನೆಗಳಿಗೆ
ನಿರುತ್ತರವೇ ಉತ್ತರ
ಆದರೂ ದಿನಕೊಂದು ಹೊಸ ಕನಸಿನ
ಬೆನ್ನೇರಿ ಸಾಗುವುದೇ ಬದುಕಿನ ಬವಣೆ
ಉಸಿರು ನಿಲುವವರೆಗೆ ಹಸಿರು ಬಾಡುವವರೆಗೆ
ಬದುಕ ಒರೆಗೆ ಹಚ್ಚುತ ಕಿಚ್ಚು ಉಳಿಸುತ
ಹೊಸ ಕನಸುಗಳ ಕಟ್ಟಿ ಹಾಡುತ ಸಾಗುವುದೇ
ಜೀ
ವ
ನ
---ಸಿದ್ದು ಯಾಪಲಪರವಿ
No comments:
Post a Comment