*ಚಾಲನೆಯೂ ಧ್ಯಾನಸ್ಥ ಹಂತ*
ಓದು-ಬರಹ-ಕಾಮದಷ್ಟೇ ಡ್ರೈವಿಂಗ್ ಕೂಡಾ ಪರಮಧ್ಯಾನ. ಒಂಚೂರು ಎಚ್ಚರ ತಪ್ಪಿದರೆ ನಮ್ಮ ಕಥೆ ಮುಗಿಯಿತು.
ರಸ್ತೆ ಮೇಲೆ ನಿಗಾ ಇಟ್ಟು ಗಾಡಿ ಓಡಿಸುವ ಚಾಲಕರ ನಿಷ್ಠೆಯನ್ನು ನಾನು ಅಪಾರವಾಗಿ ಗೌರವಿಸುತ್ತೇನೆ.
ಹತ್ತಾರು ವರ್ಷದಲ್ಲಿ ಲಕ್ಷಾಂತರ ಮೈಲು ಕಾರು ಓಡಿಸಿ ಏಕಾಗ್ರತೆಯ ಮಹತ್ವ ಜೀರ್ಣಿಸಿಕೊಂಡಿದ್ದೇನೆ.
ಕಾರು ಓಡಿಸುವ passion ಹೆಚ್ಚಾಗಿ ಕಾರು ಇಟ್ಟುಕೊಂಡಿದ್ದೆ. ಅಗತ್ಯ, ಅನಗತ್ಯ ಲೆಕ್ಕಿಸಿರಲಿಲ್ಲ.
ಈಗ ಮೊಬೈಲ್ ದುನಿಯಾದಲ್ಲಿ ಏಕಾಗ್ರತೆಗೆ ಹೊಡೆತ ಬೀಳುವ ಕಾರಣದಿಂದ ಡ್ರೈವರ್ ಬೇಕೆನಿಸುತ್ತದೆ.
ಪ್ರೀ ಇದ್ದರೆ ಇಷ್ಟವಾದ ಹಾಡುಗಳು, ಗೆಳೆಯರು ಜೊತೆಗಿದ್ದರೆ ನೂರಾರು ಮೈಲು ಸರಾಗವಾಗಿ ಓಡಿಸುತ್ತೇನೆ.
ಆದರೆ ಈಗ ಇವೆಲ್ಲ expensive hobbies ಅನಿಸಿ ಸುಮ್ಮನಾಗುತ್ತೇನೆ. ಇವು ಲಕ್ಸರಿ ಅಲ್ಲ.ಅನಿವಾರ್ಯ.
ನೂರಾರು ಕಂಪನಿಗಳ ಉದ್ಯಮ ಇದಾಗಿದೆ.ಕಾರ್ ಕಾರ್ ಎಲ್ನೋಡಿ ಕಾರ್ ಈಗ ಇಂಡಿಯಾದ ಹಾಡಾಗಿದೆ.
ನಿನ್ನೆ ಐದು ತಾಸು ಏಕಾಗ್ರತೆಯಿಂದ ಓಡಿಸಿದ ಸಡಗರ.
ಮಗಳ ಫೊಟೋ ನೋಡಿ ಬರೆಯಬೇಕೆನಿಸಿತು.
*ಸಿದ್ದು ಯಾಪಲಪರವಿ*
No comments:
Post a Comment