Friday, July 14, 2017

ನಾನೊಂದು ಪದಕೋಶ ಅಷ್ಟೇ

ನಾನೊಂದು dictionary ಆಗಬೇಕು ಅಷ್ಟೇ

'ಅವರು ಯಾಕೋ ನನ್ನನ್ನು ಮಾತನಾಡಿಸುತ್ತಿಲ್ಲ , ಅವರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯುತ್ತಿಲ್ಲ , ನಾನು ಅಷ್ಟೊಂದು unimportant ಆಗಿಬಿಟ್ಟೆನಾ ?'

ಅಂದೆಲ್ಲ ಒಮ್ಮೊಮ್ಮೆ ನಾವು ಕೊರಗುತ್ತೇವೆ , ಹಾಗೆ ಚಿಂತೆ ಮಾಡುವುದರಿಂದ ನಮ್ಮ ಮಹತ್ವ ಹೆಚ್ಚಾಗದೇ ಮಾನಸಿಕ ನೆಮ್ಮದಿ ಹಾಳಾಗುತ್ತದೆ.
ನಮ್ಮ ನೆಮ್ಮದಿ ಹಾಳಾಗಲು ನಾವೇ ಕಾರಣ ಎಂಬ ಸತ್ಯ ಮರೆಯುತ್ತೇವೆ.

ನಮ್ಮ ಮೌಲ್ಯ ಎನ್ನುವುದು ನಾವು ಅಂದುಕೊಂಡಂತೆ ಇರುವುದಿಲ್ಲ , ಅದು ಬೇರೆಯವರ ಅಗತ್ಯದ ಮೇಲೆ ನಿಂತಿರುತ್ತದೆ.

ಹತ್ತು-ಹಲವು ಕಾರಣಗಳಿಂದ ಅನೇಕರು ನಮ್ಮ ಮೇಲೆ ಅವಲಂಬಿತರಾಗಿದ್ದು ಸಕಾಲದಲ್ಲಿ ಸಲಹೆಗಳನ್ನು ಪಡೆದಿರುತ್ತಾರೆ , ಈಗ ಪಡೆಯುತ್ತಿಲ್ಲ ಎಂದರೆ ಅವರಿಗೆ ಅರ್ಥವಾಗುತ್ತಿದೆ ಎಂದರ್ಥ ಅದಕ್ಕೆ ಬೇಸರ ಬೇಡವೇ ಬೇಡ . ನಾವು ಓದುವ ಪುಸ್ತಕದಲ್ಲಿ ಕೆಲವು ಸಂಗತಿಗಳು ಅರ್ಥವಾಗಲಿಲ್ಲ ಅಂದಾಗ ಮಾತ್ರ dictionary ನೋಡುತ್ತೇವೆ ಇಲ್ಲದಿದ್ದರೆ ಇಲ್ಲ.

ನಾವು ಹಾಗೆ dictionary ಅಂದುಕೊಳ್ಳಬೇಕು , ಅರ್ಥವಾಗದಿದ್ದಾಗ approach ಆಗುತ್ತಾರೆ ಬಿಡಿ .

ವಿನಾಕಾರಣ ಒತ್ತಡ ಬದಿಗಿರಿಸಿ ಬಹುಪಯೋಗಿ ' ಪದಕೋಶ'ದ ಹಾಗೆ ಸುಮ್ಮನೇ ಒಂದು ಕಡೆ ಶಾಂತವಾಗಿರೋಣ ಎಲ್ಲ ಚಿಂತೆ ಬಿಟ್ಟು .

---ಸಿದ್ದು ಯಾಪಲಪರವಿ

No comments:

Post a Comment