Monday, July 24, 2017

ಒಲವ ಸಿರಿ

ಒಲವಸಿರಿಯ ಹಂಗಿಲ್ಲದ ಅರಮನೆ

ದೇಹಗಳ ಮಿಲನವನು ತೀಟೆಯನಲಾಗದು
ಎಲ್ಲವನೂ ಮೀರಿದ ಭಾವಸ್ಪಂದನೆಯ
ಪರಮಸುಖದ ಸಾಧನ
ಈ ಕಾಮದೋಕುಳಿ ತೃಪ್ತಿಯಿಂದ
ಅನುಭವಿಸುವ ಕಲೆಗಾರಿಕೆ
ಇರದಿರೆ ಎಲ್ಲವೂ ಶೂನ್ಯ

ದೇವರು  ಪರಮಸುಖದ ಪರಿಮಳವ
ಗಂಡಿಗೆ ಹೆಣ್ಣಲಿ ಹೆಣ್ಣಿಗೆ ಗಂಡಲಿ ಬೆಸದು
ಹೊಸೆದಿರುವ ಪರಿಯ ಅರಿಯಲು
ಶಾಸ್ತ್ರಗಳ ಹಂಗಿಲ್ಲ

ಪ್ರತಿ ಅಂಗುಲದಿ ಅಡಿಯಿಂದ ಮುಡಿಯವರೆಗೆ , ಕಣಕಣದಲಿ ಇನ್ನಿಲ್ಲದ ಮೃದು ಲಾಸ್ಯ
ಕೈಕಾಲು , ಮೈಯಿಗೆ ಮೈ , ತುಟಿಗೆ ತುಟಿ , ಬೆರಳುಗಳ ಮೀಟುವಿಕೆ , ಬಿಸಿಯಪ್ಪುಗೆಯ ಹಿಡಿತ ,
ನಾಲಿಗೆಯ ಸಂಚಾರದ ಹರಿದಾಟ

ಇಡೀ ರಾತ್ರಿ ನಿಲ್ಲದ ಚಲ್ಲಾಟ ಎಲ್ಲೇ ಮೀಟಿದರೂ
ಹಿತಕಾರಿ ಮಿಡಿತ ನವಿರು ನರಳಾಟ ,
ಚೀರಾಟ ಮಿಲನದಾಟ ಮೇರೆ
ಮುಟ್ಟುವತನಕ

ತುಟಿಯಲಿ ಜೇನು ಹಂಚಲು ಹೀರಲು
ಮೃದು ಎದೆಲಯಗಳ ಹಿಡಿದು
ಹಾಲ ಹೀರುವ ತಲ್ಲಣಕೆ ನಿಮಿರುವ
ತೊಟ್ಟುಗಳ ತಂಟೆ ಹಾಗೆ ಮುಂದುವರೆಸಲು

ಮರ್ಧನದ ಮರ್ಮಕೆ ಇನ್ನಿಲ್ಲದ ಬೆಡಗು
ಸಾಕೆನಿಸದ ಹಿಚುಕಾಟ ನೋವಿನಲೂ
ನಲಿವ ಹಬ್ಬದೂಟ
ಪ್ರತಿ ಕ್ಷಣದಲಿಯೂ ನೂರ್ಮಡಿಸುವ
ಉನ್ಮಾದ ಅರಳುವ ಮೈ ಕೆರಳುವ

ಮನಸೆಂಬ ಕುದುರೆಗೆ ಇಲ್ಲದ ಲಂಗು
ಲಗಾಮು ಜಿಗಿದಾಟಕೂ ಕೊನೆಯೆಂಬುದಿಲ್ಲ

ಬದುಕಲಿ ದೇಹಸುಖದ ತಂಗುದಾಣ
ಉಡುಗೆ-ತೊಡುಗೆಗಳಿಗೂ ಮೀರಿದ
ಸಿರಿಸಂಪತ್ತು ಈ ಬೆತ್ತಲೆಯ ಕತ್ತಲಗೆ

ಏಕಾಂತದ ಈ ಮುಲುಕಾಟದಲಿ ಸಪ್ತಸ್ವರಗಳ
ತಾಳಕೆ ನಲಿದು ಕುಣಿಯುವ ರತಿ-ಮನ್ಮಥರ
ಲಯಗಾರಿಕೆ ದೇವನೊಬ್ಬನೇ ಮನಃಸಾಕ್ಷಿ
ಅಲ್ಲಿ ಇಲ್ಲಿ ಎಲ್ಲಿಯೂ ಹುಡುಕಲಾಗದು
ಹುಡುಕಿದರೂ ಸಿಗಲಾರದ ಚರಮಸುಖ
ಎಲ್ಲ ಮುಗಿದ ಮೇಲೆ ನಾವು
ಒಬ್ಬರೇ ಇಬ್ಬರಲ್ಲವೇ ಅಲ್ಲ

ಅಬ್ಬರವಿಲ್ಲದ ಈ ಪರಮಸುಖ
ದೇಹವೆಂಬ ದೇವಾ
ಲಯದಲಿರುವಾಗ ಎಲ್ಲಿಯೂ
ಹುಡುಕುವದು ಬೇಡ ಸಖಿ

ಒಲವ ಬದುಕಲಿ ಬಡತನವೆಂಬುದಿಲ್ಲ
ಹಣದ ಹಂಗಿಲ್ಲದ ಖಾಲಿಯಾಗದ
ಯಾರೂ ಲೂಟಿ ಮಾಡದ ಖಜಾನೆಯ
ಕವಿ-ಸಿರಿಯ ಒಡೆಯರು
ನಾ
ನೀ
ನೀ
ನಾ

---ಸಿದ್ದು ಯಾಪಲಪರವಿ

No comments:

Post a Comment