ನಾನು ಮತ್ತು ಎಂದೂ ಮರೆಯಾಗದೆ ಅಪ್ಪ
ಕಳೆದುಕೊಂಡವರ ಕುರಿತು ಬರೆಯುವಾಗ ತುಂಬಾ ನೋವಾಗುತ್ತೆ . ಅದರಲ್ಲೂ ಬದುಕು ಹಾಗೂ ಅಸ್ತಿತ್ವ ಕೊಟ್ಟ ' ಅಪ್ಪ ' .
ನಾವು ಸಹಜವಾಗಿ ಈ ಭೂಮಿಗೆ ಬಂದಿದ್ದೇವೆ ಅಪ್ಪ ಬರೀ ನೆಪ ಎಂಬ ವಾಸ್ತವದ ಸಿದ್ಧಾಂತ ಅಪ್ಪನ ವಿಚಾರವಾಗಿ ಸರಿಹೊಂದುವುದಿಲ್ಲ.
ಅಪ್ಪನನ್ನೂ ಬೇರೆಯವರಿಗಿಂತ ಸರಿಯಾಗಿ ಗ್ರಹಿಸಿದ್ದೇನೆ ಎಂಬ ಗರ್ವ. ಸರಿಸುಮಾರು ಐವತ್ತು ವರ್ಷ ಕಳೆದರೂ ನಾಲ್ವತ್ತು ವರುಷಗಳ ಒಡನಾಟ ಒಡಲೊಳಿದೆ.
ಬಾಯಲ್ಲಿ ಬಂಗಾರದ ಚಮಚೆ ಇಟ್ಟುಕೊಂಡು ಹುಟ್ಟಿದ್ದರೂ ಮುಂದೆ ಅನುಭವಿಸಿದ್ದು ಬರೀ ನೋವು-ಸಂಕಷ್ಟ. ವ್ಯಾಪಾರದಲ್ಲಿನ ಹಾನಿ , ಕುಟುಂಬದ ಆಸ್ತಿ ವಿಭವಿಜನೆಯ ಅಸಮಾನತೆ ಹೀಗೆ ಹತ್ತಾರು ಸವಾಲುಗಳನ್ನು ತುಂಬಾ ಸಮಾಧಾನದಿಂದಲೇ ನಿಭಾಯಿಸಿದ.
ಬಾಲ್ಯದ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ನನಗೆ ಪಾಲಕರ ಒಡನಾಟ ಕಡಿಮೆ ಆದರೂ ನಂತರದ ಕಾಲೇಜು ದಿನಗಳಲ್ಲಿ he became my best friend ಮುಂದಿನ ಎಲ್ಲ ಆರ್ಥಿಕ ಸಂಕಷ್ಟಕ್ಕೆ ನಾನು ನೆರವಾಗಲಿಲ್ಲ ಅದೂ ಸಾಧ್ಯವಾಗಲಿಲ್ಲ ಎಂಬ ನೋವು ಈಗಲೂ ನನ್ನಲಿ ಉಳಿದಿದೆ.
ನನಗೆ ಆರ್ಥಿಕವಾಗಿ ಹೆಚ್ಚು ನೆರವು ನೀಡದೇ strict ಆಗಿ ಬೆಳೆಸಲು ಇದ್ದ ಅನೇಕ ಕಾರಣಗಳನ್ನು ಕೊಂಚ ಸಿಟ್ಟಿನಿಂದ ಸಕಾರಾತ್ಮಕವಾಗಿ ಸ್ವೀಕರಿಸಿದೆ . ಅದು ದೊಡ್ಡ ಪಾಠವಾದರೂ finance management ನಲ್ಲಿ ನಾನು ಎಚ್ಚತ್ತುಕೊಳ್ಳದೇ ತುಂಬಾ ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಯಿತು.
I have my own reservations about finance management even today. ನನಗೆ ಬದುಕು ಸಾಗಬೇಕು ಅಷ್ಟೇ. ತುಂಬಾ plan ಅಗತ್ಯವಿಲ್ಲ ಎಂಬ ಕೆಟ್ಟ ಧೋರಣೆ. I may be wrong also.
ಆದರೆ ಅಪ್ಪ ಹಾಗಲ್ಲ ದೇವರಿಗೆ ಹಾಕುವ ಹಣವನ್ನು ಕಟ್ಟಿ ಇಡುತ್ತಿದ್ದ ಯಾವುದೇ ಕಾರಣಕ್ಕೂ ಬೇರೆ ಕೆಲಸಕ್ಕೆ ಬಳಸುತ್ತಿರಲಿಲ್ಲ. ಎಂತಹ ಕಠಿಣ ಸಂದರ್ಭದಲ್ಲಿಯೂ ನನಗೆ ಹೆಚ್ಚು ಹಣ ಕಳಿಸಲೇ ಇಲ್ಲ ಹೀಗಾಗಿ ವಿದ್ಯಾರ್ಥಿಯಾಗಿದ್ದಾಗ ತುಂಬಾ ಎಚ್ಚರಿಕೆಯಿಂದ ಖರ್ಚು ಮಾಡುತ್ತಿದ್ದೆ even tour ಹೋಗಲಿಲ್ಲ.
ಉದ್ಯೋಗ ಸೇರಿದ ಮೇಲೆ ಹಣ ಗಳಿಸುವ ವೃತ್ತಿ ಹಾಗೂ ಪ್ರವೃತ್ತಿ ನನಗೆ ಬರಲಿಲ್ಲ I totally neglected and accepted the suffering.
ಈ ಕುರಿತು ಇದ್ದ ಸಿಟ್ಟನ್ನು ಅಪ್ಪ ಆತ್ಮೀಯರ ಮೂಲಕ ಹೇಳಿಸಿದರೂ ಕೇಳಿಸಿಕೊಳ್ಳುವ ಸ್ಥಿತಿಯನ್ನು ನಾನು ದಾಟಿದ್ದೆ.
ತುಂಬಾ ಸಂಕಷ್ಟಗಳ ಸಂದರ್ಭದಲ್ಲಿ ಒಮ್ಮೆ ಕೇಳಿದೆ ನೇರವಾಗಿ impossible ಅಂದ. ನನಗೆ ದುಃಖವಾಯಿತಾದರೂ positive ಆಗಿ ಸ್ವೀಕರಿಸಿ ಅದೇ ಸ್ನೇಹವನ್ನು ಮುಂದುವರೆಸಿ ಪಾಠ ಕಲಿತುಕೊಂಡೆ.
'ನಿಮ್ಮದು ಪೂರ್ವಜರ ಆಸ್ತಿ ಅಪ್ಪನ ಮೇಲೆ ಕೇಸು ಹಾಕಿ ನಿನ್ನ ಪಾಲು ಕೇಳು ' ಅಂದ ಕೆಲವರ ಸಲಹೆಯನ್ನು ತಿರಸ್ಕರಿಸಿದೆ. ನನ್ನ ಸಹನೆ ಹಾಗೂ ವಿವೇಚನೆಗೆ ನಾನು ಸದಾ ಋಣಿ .
ಈ ನನ್ನ ನಿರ್ಧಾರ ಅಪ್ಪನಿಗೆ ಗೊತ್ತಾಯಿತಾದರೂ ಈ ಕುರಿತು ನಾವಿಬ್ಬರೂ ಚರ್ಚಿಸಲೇ ಇಲ್ಲ.
'ಒಂದು ಬಿರುಗಾಳಿಯ ಕಥೆ' ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಉದ್ಯಮಿ ವಿಜಯ್ ಸಂಕೇಶ್ವರ ಅವರು ನನ್ನ ಕುರಿತು ವ್ಯಕ್ತಪಡಿಸಿದ ಮೆಚ್ಚುಗೆ ಕಂಡು ಬೆರಗಾದರು. ನನ್ನ ಮಗ ಲಕ್ಷ್ಮಿ ಪುತ್ರನಾಗದಿದ್ದರೂ ಸರಸ್ವತಿಯ ಮೂಲಕ ಹೆಸರು ಮಾಡಿದ್ದಾನೆ ಎಂದು ಅವರಿಗೆ convince ಆಯಿತು.
He was very friendly with my mother. ಅವ್ವ ಹೋದ ಮೇಲೆ ತುಂಬಾ ಒಂಟಿತನದಿಂದ ಒದ್ದಾಡಿದ್ದು ನನಗೆ ಅರ್ಥವಾಯ್ತಾದರೂ ಇಷ್ಟು ಬೇಗನೆ ಹೋಗಬಹುದು ಅಂದುಕೊಂಡಿರಲಿಲ್ಲ.
He was very normal and healthy but he decided to go away. ವಿದೇಶಕ್ಕೆ ಹೋಗಲು passport ಬಂದಿತ್ತು ಆದರೆ ಹೋಗಲಾಗಲಿಲ್ಲ . ಹೆಣ್ಣು ಮಕ್ಕಳ ಬಗ್ಗೆ ಚಿಂತೆಯೂ ಇತ್ತು ಆ ಜವಾಬ್ದಾರಿಯನ್ನು ತುಂಬಾ balance ಮಾಡಿದ ಒದ್ದಾಟ ಈಗ ಅರ್ಥವಾಗಿದೆ but I fulfill all his incomplete desires without sharing with others , it's my strong promise to him.
I totally miss you ಅಪ್ಪ.
You have left so many values and valuable things with me...
---ಸಿದ್ದು ಯಾಪಲಪರವಿ
No comments:
Post a Comment