*ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳು*
ನುಡಿದಂತೆ ನಡೆಯುವ ಪರಮಾತ್ಮನನ್ನು ತೋರಿಸುವ ಪುಣ್ಯಾತ್ಮರು.
ಈ ದೇಶದಲ್ಲಿ ನೂರಾರು ಮತ ಪಂಥಗಳಿವೆ ಲಕ್ಷಾಂತರ ಸಾಧು ಸಂತರಿದ್ದಾರೆ ಎಲ್ಲದಕ್ಕೂ ಸಾಕಾಗುವಷ್ಟು ಜನರ ಸಂಖ್ಯೆಯೂ ಇದೆ.
ಧರ್ಮ ನಿರಂತರವಾಗಿ ಚಲಾವಣೆಯಲ್ಲಿರುತ್ತದೆ ,ಧರ್ಮ ,ಜಾತಿಗಳ ಹೆಸರಿನಲ್ಲಿ ಏನೆಲ್ಲಾ ಮಾಡಬಹುದಾದ ದೇಶ ನಮ್ಮದು.
ಮೋಕ್ಷದ ನೆಪದಲ್ಲಿ ದೇವರ ಹುಡುಕಾಟದಲ್ಲಿರುವವರಿಗೆ ದೇವರನ್ನು ತೋರಿತ್ತೇವೆಂದು ಅನೇಕರು ತಾವೇ ದೇವರೆಂದು ನಂಬಿಸಿಬಿಡುತ್ತಾರೆ.
ನಂಬಿದವರನ್ನು ಶೋಷಣೆ ಮಾಡುತ್ತಾ ಬಯಲಾಗಿಬಿಡುತ್ತಾರೆ.
ಕೃಷ್ಣ ಬುದ್ಧ ಮಾಹಾವೀರ ಏಸು ಪೈಗಂಬರ ಹಾಗೂ ಬಸವಾದಿ ಶರಣರು ಧರ್ಮ ಹಾಗೂ ಆಧ್ಯಾತ್ಮಕ್ಕೆ ಇರುವ ವ್ಯತ್ಯಾಸವನ್ನು ಸಾರಿ ಹೇಳಿದ್ದಾರೆ.
ಆದರೂ ನಾವು ಧಾರ್ಮಿಕ ಏಜಂಟುರುಗಳ ಮೂಲಕವೇ ದೇವರನ್ನು ಹುಡುಕುವ ಅಂಧಕಾರದಲ್ಲಿದ್ದೇವೆ.
ಆದರೆ ಪರಮ ಪೂಜ್ಯ ಸಿದ್ಧೇಶ್ವರ ಮಾಹಾಸ್ವಾಮಿಗಳು ತಮ್ಮ ಪ್ರವಚನಗಳ ಮೂಲಕ ದೇವರನ್ನು ಕಾಣುವ ಸನ್ಮಾರ್ಗ ತೋರುತ್ತಲಿದ್ದಾರೆ.
ಘಮಘಮಿಸುವ ಪರಿಮಳದಂತೆ ,ಹಿತವಾಗಿ ಬೀಸುವ ತಂಗಾಳಿಯಂತೆ ನಿರ್ಲಿಪ್ತ ಭಾವದಿ ಶಬ್ದ ಗಳು ಅರಳುತ್ತಾ ಮನಸ್ಸನ್ನು ಪ್ರವೇಶಿಸುತ್ತವೆ.
----ಸಿದ್ದು ಯಾಪಲಪರವಿ.
No comments:
Post a Comment