ಒಲವಿನೋಲೆ-೧೯
ಹಲೋ ಚಿನ್ನು,
ಒಗಟು ಬಿಡಿಸುವ ಜೀವಪಯಣದಲಿ ಅನೇಕ ಒಗಟುಗಳು.
ಹೊಯ್ದಾಟ ನಿಂತಾಗ ಅನೇಕ ಒಗಟುಗಳಿಗೆ ಉತ್ತರ ಸಾಧ್ಯ.
ನಾವೇ ಹೆಣೆದುಕೊಂಡ ಬಲೆಯಲಿ ನಾವೇ ಸಿಕ್ಕು ಒದ್ದಾಡುತ್ತೇವೆ.
ಒಳಹೋಗುವುದು ಬಹಳ ಸುಲಭ ಆದರೆ ಹೋಗುವ ದಾರಿ ಗೊತ್ತಿರುವ ನಾವೇ ಹೊರಬರಲು ಚಡಪಡಿಸುವುದೂ ಕೂಡಾ ಒಗಟೇ.
ಕಾರಣ ತುಂಬ ಆಸೆಪಟ್ಟು ತಿಂದು ಕರಗಿಸಲಾಗದೇ ಒದ್ದಾಡಿದಂತೆ.
ಮಾನವೀಯ ಸಂಬಂಧಗಳು ವಿಚಿತ್ರ. ಅರ್ಥವಾಗಿರದ ಅನೇಕ ಸಂಗತಿಗಳು ಅರ್ಥವಾಗಿಬಿಡುತ್ತವೆ.
ಜೊತೆಗೆ ಬರುವವರು ನಮ್ಮ ಹಾಗೇ ಇರಲಿ ಎಂದು ಬಯಸುವದೇ ನಿರಾಸೆಗೆ ಮೂಲ ಕಾರಣ.
ಬರುವುದೇನೋ ಬರುತ್ತಾರೆ ತುಂಬಾ ಕಿರಿ ಕಿರಿ ಎನಿಸಿದರೇ ಹೇಳದೇ ಕೇಳದೇ ಬಿಟ್ಟು ಪರಾರಿಯಾಗುತ್ತಾರೆ.
ಸಂಬಂಧಗಳಿಗೆ ಇರಬಹುದಾದ ಮಿತಿಯನ್ನು ನಾವೇ ತಡುವಿ ವೈಯಕ್ತಿಕ ಅವಲೋಕನದ ಮೂಲಕ ಮಿತಿ ಹೇರಿಕೊಳ್ಳಬೇಕು.
ಪ್ರತಿಯೊಂದಕ್ಕೂ ತನ್ನದೇ ಆದ *ಎಲಾಸ್ಟಿಕ್ ಲಿಮಿಟ್* ಇರುತ್ತದೆ.
ಆ ಲಿಮಿಟ್ ಹರಿಯುವವರೆಗೆ ಮಾತ್ರ ಎಳೆದಾಡಬೇಕು.
ತುಂಬಾ ಎಳೆದಾಡಿಕೊಂಡು ಹರಿದರೆ ಎಲಾಸ್ಟಿಕ್ ತನ್ನ ಶಕ್ತಿ ಕಳೆದುಕೊಂಡು ನಿಸ್ತೇಜವಾಗುತ್ತದೆ.
ಹರಿದುಹೋದ ಎಲಾಸ್ಟಿಕ್ ತನ್ನ ಬೆಲೆ ಕಳೆದುಕೊಂಡು ಬಿಡುತ್ತೆ.
ಯಾವುದೋ ಕಾರಣಕ್ಕೆ, ಏನೋ ಲೆಕ್ಕ ಹಾಕಿ, ಏನೋ ಹೇಳಲು ಹೋಗಿ ಬಂಧನಗಳು ಸಡಿಲವಾಗುವ ಮುನ್ನ ಎಚ್ಚತ್ತುಕೊಂಡು bondage just ಉಳಿಸಿಕೊಳ್ಳೋಣ ಕೊಂಚ ರಾಜಿಯಾಗಿ.
ಮುಂದೆ ಹಂತ ಹಂತವಾಗಿ ಕಾಲ ಎಲ್ಲವನ್ನೂ ಸರಿ ಮಾಡುವವರೆಗೆ ಕಾಯೋಣ.
ನಿನ್ನ ಪ್ರೀತಿಯ
*ಅಲೆಮಾರಿ*
( ಸಿದ್ದು ಯಾಪಲಪರವಿ)
No comments:
Post a Comment