ಒಲವಿನೋಲೆ-೧೮
ಹಲೋ ಚಿನ್ನು,
ತುಂಬ ದಿನಗಳಿಂದ ಬರೆಯಲಾಗಲಿಲ್ಲ.ಕಾರಣ ಕೊಡುವುದು ಬಲು ಕಷ್ಟ ಬರಹ-ಬದುಕಿನ ಹಾಗೆ.
ಓಡಾಟ ನಿಲ್ಲುವುದಿಲ್ಲ ಅನಿಸಿದೆ.ಗಡಿಯಾರದ ಪೆಂಡೊಲಮ್ ಹಾಗೆ.
ಓಡಾಡುವುದು meaningless ಅನಿಸಿದರೂ ಅರ್ಥ ಹುಡುಕುವುದು ಜಾಣತನ ಅಲ್ಲ,ಅಲ್ಲಿ ಅರ್ಥ ಇರಬೇಕಲ್ಲ.
ಆದರೂ ಹುಡುಕುವ ಹುಡುಗಾಟ ನಿಂತಿಲ್ಲ. ಬೇರೆಯವರಿಗೆ ಬಿಡು.
ಕಟ್ಟಿಕೊಂಡವರಿಗೆ ಒಗಟಾಗಿದ್ದೇನೆ.
ಯಾಕೋ ಒಗಟು ಬಿಡಿಸುವುದು ಬೇಡ ಎನಿಸಿದೆ. ಮೊದಲು ನಾನು ಬಿಡಿಸಿಕೊಳ್ಳುತ್ತೇನೆ.
ಬದುಕು ನನ್ನ ಪಾಲಿಗೆ ಸ್ವಲ್ಪ ಭಿನ್ನವಾಗಿ ಕಾಣಿಸಿ ಅರ್ಥವಾಗುವ ಸಡಗರದ ಸಂಕ್ರಮಣವಿದು.
ಕಾಯುವಿಕೆ ಹೆಚ್ಚು meaningful ಅನಿಸತೊಡಗಿದೆ.
I missed so many things, many things tantalised with me but tolerated... have to tolerate.
ಪುಸ್ತಕ ಬಿಡುಗಡೆಗೆ ಬೆಂಗಳೂರಿಗೆ ಬಂದೆ. ನನ್ನ ಪುಸ್ತಕದ ಕೆಲಸ ತಾರ್ಕಿಕ ಅಂತ್ಯ ಕಂಡಿದೆ.
ಕೊಂಚ ಸಮಾಧಾನ.
ಎಲ್ಲವೂ ಪೂರ್ಣ ಪರಿಪೂರ್ಣ ಮಾಡಲಾಗುವುದಿಲ್ಲ ಎಂಬ ಅಳುಕಿತ್ತು.
ಮೂರು ತಿಂಗಳು ಪಟ್ಟು ಹಿಡಿದು ಕುಳಿತು ಬರೆದೆ. ಎಲ್ಲರೂ ಸಹಿಸಿಕೊಂಡರು. ಅದರಲ್ಲೂ ಮನೆಯಲ್ಲಿ ಸಂಗಾತಿ ರೇಖಾ, ಜುಗಲ್ ಬರಹಕ್ಕೆ ಸಾಂಗತ್ಯದ ಸಾತ್ ನೀಡಿದ ಕಾವ್ಯಶ್ರೀ ಅವರ ಸಹಕಾರ ನೆನೆಯುವೆ.
ಪ್ರಕಾಶಕ ಮಿತ್ರ ವಿ.ಎಂ.ಮಂಜುನಾಥ, ಕುಂಚನೂರ ಆನಂದ, ಮಾರ್ಗದರ್ಶಕರಾದ ಪ್ರೊ.ರಂಗನಾಥ ಸರ್ ಹಾಗೂ ಅನೇಕರು ನನ್ನ ಹುಚ್ಚಾಟಗಳನ್ನು ಏನೋ ಸಾಧಿಸಬಹುದು ಎಂಬ ಭರವಸೆಯಿಂದ ಸಹಿಸಿಕೊಂಡಿದ್ದಾರೆ.
ಭರವಸೆಗಳು ಬದುಕಿ ಬೆಳೆಯಬೇಕು. ಹಾಗೆಯೇ ಉಳಿಯಬಾರದು.
Everything waits for its own time zone but we have to accelerate it continuously.
ಒಂದು assignment ಮುಗಿದ ಕೂಡಲೇ ಖಾಲಿ ಖಾಲಿ ಅನಿಸಿಬಿಡುತ್ತೆ. ಮತ್ತೊಂದು ಹೊಸ ತುಡಿತ. ತಲ್ಲಣ.
ಸಂಸ್ಥೆಯ ಕೆಲಸವೂ ನಡೆದಿದೆ. ಮುಗಿದಾಗ ಹೊಸ ಗೆಲುವು.
ಸಂಕ್ರಮಣದ ಶುಭಾಶಯಗಳು. ಎಲ್ಲರಿಗೂ.
ಪ್ರೀತಿಯಿಂದ
ನಿನ್ನ
ಅಲೆಮಾರಿ
( ಸಿದ್ದು ಯಾಪಲಪರವಿ )
೧೫-೧-೨೦೧೮.
No comments:
Post a Comment