Friday, May 25, 2018

ಪ್ರೊ.ಆರ್.ಎಂ.ರಂಗನಾಥ

*ಹುಟ್ಟು ಹಬ್ಬದ ಶುಭಾಶಯಗಳು*

Many happy returns of the day to *Prof.R.M.Ranganath* ( Former Registrar, Bangalore University.and Syndicate member, Bangalore North University).

ಇಡೀ ಬದುಕನ್ನು ಸಂತರ ಹಾಗೆ ಸವೆಸುತ್ತ ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ನಿರಂತರ ತಮ್ಮನ್ನು ತೊಡಗಿಸಿಕೊಂಡಿರುವ, ಸಸ್ಯಶಾಸ್ತ್ರ ವಿಜ್ಞಾನಿ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಆರ್.ಎಂ.ರಂಗನಾಥ ಅವರದು ಆದರ್ಶ ಬದುಕು.

ಇಂದು 67ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ತಮ್ಮನ್ನು ಗೌರವಪೂರ್ವಕವಾಗಿ ಅಭಿನಂದಿಸುತ್ತೇನೆ.

ನಿಮ್ಮ ನಿಸ್ವಾರ್ಥ ಧೋರಣೆ ನಮಗೆಲ್ಲ ಅನುಕರಣೀಯ.

ವಿಶ್ವವಿದ್ಯಾಲಯದ ಕುಲಪತಿಯಾಗುವ ಅರ್ಹತೆ ಇದ್ದರೂ, ವಿಶ್ವವಿದ್ಯಾಲಯಗಳಿಗೆ ಆ ಸುಯೋಗ ಒದಗಿಬರಲಿಲ್ಲ.

ಇಡೀ ದೇಶ ಸುತ್ತಿ ಉನ್ನತ ಶಿಕ್ಷಣದ ಏಳ್ಗೆಗಾಗಿ ಮಾರ್ಗದರ್ಶನ ನೀಡುವ ನಿಮ್ಮ ಬತ್ತದ ಉತ್ಸಾಹ ಅಭಿನಂದನೀಯ.

ತಮ್ಮ ಕೃತಿಯನ್ನು ಅಧ್ಯಯನ ಮಾಡುತ್ತಿರುವ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸುದೈವಿಗಳು.

ಇಂದಿಗೂ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಯೋಜನಾ ವರದಿ ಬರೆಯುತ್ತ ಶಿಕ್ಷಣದ ಉನ್ನತೀಕರಣಕ್ಕಾಗಿ ದುಡಿಯುತ್ತಲಿದ್ದೀರಿ.

ವೈಯಕ್ತಿಕವಾಗಿ ನನ್ನ ಮಾರ್ಗದರ್ಶಕರು, ಹಿತೈಷಿಗಳಾಗಿ ನೀಡುತ್ತಿರುವ ನೆರವಿಗೆ ಬರೀ Thanks ಅಂದರೆ ಸಾಲದು.

*ನಿಸ್ವಾರ್ಥಕೆ ಉಪಮೇಯ. ಸಹನೆ ಉಪಮಾತೀತ*

ಮೇಲ್ನೋಟಕ್ಕೆ ಒಂಟಿಪಯಣ. ಆದರೆ ಹಾರೈಸಲು ಸಾವಿರ ಕಾಣದ ಕೈಗಳು. ಮೌನದ ಹಿಂದಿನ ಮಾತು.
ಶಬ್ದಗಳ ಹಿಂದಿನ ನಿಶಬ್ದ ಅರ್ಥಮಾಡಿಕೊಳ್ಳುವ ತಾಕತ್ತು ನಿಮ್ಮದು.

ಒಂಟಿತನವನು ಏಕಾಂತವಾಗಿಸಿ, ಬಯಸಿದ ಮನಸುಗಳಿಗೆ ಆತ್ಮಸಾಂಗತ್ಯ ನೀಡುವ ನೀವು ಈ *ಮತಲಬ್ ಕಿ ದುನಿಯಾದಲಿ* ಕಳೆದುಹೋಗುವುದಿಲ್ಲ.

ನೋಯಿಸಿದವರ, ಕಾಡಿದವರ ಅಲ್ಲಿಯೇ ಮರೆತು, ಮತ್ತೆ ನೆರವಾಗಬೇಕೆಂಬ ಬತ್ತದ ತುಡಿತವ ಯಾರೂ ಕಸಿಯಲಾಗದು.

ಬೆಂಗಳೂರು ಮತ್ತು ಕೋಶಿಸ್ ಚಿಂತಕರ ಚಾವಡಿಯ ವಿಸ್ಮಯ.

ರಾಜಕೀಯ, ಸಾಹಿತ್ಯ, ಶಿಕ್ಷಣ, ಸಿನಿಮಾ ಹಾಗೂ ಆಧ್ಯಾತ್ಮ ಚಿಂತನೆಗಳ ಸುತ್ತ ಹೊಸ ಹೊಳವು ಹುಡುಕುವ ಹುಮ್ಮಸ್ಸು.

ಹೆಗಲಿಗೊಂದು ಲ್ಯಾಪ್‌ಟಾಪ್, ಓಡಾಡಲು ಭೂಪಾಲನ್ ಆಟೋ, ಕೋಶಿಸ್ ಕಾಫಿ, ಗೂಗಲ್ ಸಂಚಾರವೇ ನಿಮ್ಮ ಸಂಸಾರ.

ಆಗೀಗ ತೊಂದರೆ ಕೊಡಲು ನನ್ನಂಥವರು.

ಹೀಗೆ ನಮ್ಮಂತವರನು ಸಹಿಸುತ ನೂರು ಕಾಲ ಆರೋಗ್ಯವಾಗಿ ಬಾಳುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಹಿತೈಷಿಗಳೆಲ್ಲರ ಪರವಾಗಿ ಬೇಡುವೆ.

       *ಸಿದ್ದು ಯಾಪಲಪರವಿ*

No comments:

Post a Comment