Thursday, May 10, 2018

ನಿಶ್ಚಿಂತನಾಗಿರು

*ನಿಶ್ಚಿಂತನಾಗಿರಲು*

ಬದುಕೇ ನೀನು ಭೀಕರ
ಅಲ್ಲ ನಾವು ಹಾಗಂತ ಭ್ರಮಿಸಿ
ಪರಿಭಾವಿಸುತ್ತೇವೆ

ರಾಜಮಾರ್ಗದಲಿ ನಡೆಯುವ ಛಲದಲಿ
ಅನಿರೀಕ್ಷಿತ ತಿರುವು ತರುವ
ಆಘಾತಗಳ ಗಾಳಕೆ ಸಿಗದೆ ಸಾಗಲಾದೀತೆ ?

ಒಂಟಿಗೈಯ ಚಪ್ಪಾಳೆಯಲಿ ಸದ್ದಿಲ್ಲವಾದರೂ
ಸದ್ದಿಗೆ ಹೊಣೆ ಯಾರು ?

ಜೋಡಿ ಕೈ ಚಪ್ಪಾಳೆ ಸದ್ದಿಗೆ ಮುದಪಟ್ಟ
ಮೂರ್ಖ ನಾ

ನಂಬಿಗೆ ಗಟ್ಟಿಯಾಗಿ ಒಟಗುಟ್ಟೆ ಮನದಾಳದ
ಮಿಲನದಾಸೆಯ ನಂಬಿ ಕೆಟ್ಟವರಿಲ್ಲ ಎನ್ನುತ್ತಲೇ
ಕೆಟ್ಟೆನಲ್ಲ

ಈಗಲೂ ಅದೇ ನಂಬಿಗೆಯೇ ನನ್ನ ಬಿಗಿ
ಅಲುಗಿಸಲಾಗದು ನಿನ್ನಿಂದ

ಕಾಲನ ಹಾದಿಯಲಿ ಕೊನತನಕ ಕೊಂಡೊಯ್ಯುವೆ
ಎಂದವರು ಮಾರ್ಗ ಮಧ್ಯೆದಿ ತೊರೆದು ಹೋದರೆ
ಮರುಗಬೇಡ

ಅವರಿಗೆ ಅವರದೇ ಆದ ತವಕ-ತಲ್ಲಣಗಳು
ನಕಾರಾತ್ಮಕ ನಡುಕ ಬೇಡ ಬಿಸಿಯ ಬದುಕಲಿ

ನಂಬಿ ನಿನ್ನನೇ ನಂಬಿ ನಡೆ ಯಾರದೇ
ಹಂಗಿಲ್ಲದೆ ಮಹಾರಾಜ ಮಾರ್ಗದಲಿ
ದಡ ಸೇರುವೆ ನಿಶ್ಚಿಂತನಾಗಿ.

---ಸಿದ್ದು ಯಾಪಲಪರವಿ

No comments:

Post a Comment