*ತುಂಟ ಮನಸಿಗೊಂದು ತಂಟೆ*
ಅರೆ ನೀ ಇಲ್ಲಿರುವಾಗ ಅವಳಲ್ಲಿಯೂ
ಇರುವುದಾವ ನ್ಯಾಯ ಅಂದರೆ ಹೇಗೆ
ನೀ ನನ್ನೊಡನೆ ಸುತ್ತಿ ಸುಳಿಯುತಲಿರುವಾಗ 
ಅವಳದೇನು ಕಿರಿಕಿರಿ ಅಂದರೆ ಹೇಗೆ 
ಮನಸಿನ ಚಂಚಲವಿದಲ್ಲ ಅಂದರೂ
ಮತ್ತೇನೋ ಚಡಪಡಿಕೆ ಇದೆಂದರೆ ಹೇಗೆ
ಏನಾದರೂ ಇರಲೇಬೇಕಲ್ಲ ವಿನಾ
ಕಾರಣ ಅದು ಹೇಗೆ ಎಂದರೆ ಹೇಗೆ
ಇದು ಹೀಗೆಯೇ ಆಗೋದು ಒಳಗೊಂದು ಹೊರಗೊಂದು ಅನಬಾರದೆಂದರೆ ಹೇಗೆ
ಅವಳು ಇರಲಿ ಬಿಡು ನಿನ್ನ ಒಡನೆ 
ಅಂದರೆ ಸುಮ್ಮನಿರಲಾರೆನೆಂದರೆ ಹೇಗೆ
ಅಯ್ಯೋ ಇದೇನೋ ಇವಳೂ ಅವಳೂ
ಅದಕೋ ಇದಕೋ ಇರಲೆಂದರೆ ಹೇಗೆ
ಅವಳಿವಳ ಗೊಂದಲದ ಸಂಗಗಳ ಅನು
ಸಂಧಾನದಲಿ ಅನುಮಾನ ಬೇಡವೆಂದರೆ ಹೇಗೆ
ಅನುಮಾನ ಅವಮಾನ ಅನ್ನದೇ ಸುಮ್ಮನೇ
ಗುಮ್ಮನ ಹಾಗಿದ್ದರೆ ಗುದ್ದುತೀನಿ ಅಂದರೆ ಹೇಗೆ
ಅವಳಿರುವುದು ಇವಳಿಗೆ ಇವಳಿರುವುದು 
ಅವಳಿಗೆ ಬೇಡವೆಂಬುದ ಎಲ್ಲಿಯೂ ಹೇಳದೇ 
ಇರು ಹೀಗೆ ಹಾಗೆ ಹೇಗೇಗೋ ತುಂಟ ಮನಸಿನ
ತುಡುಗು ತಂಟೆಯ ಲೆಕ್ಕಿಸಿದರೂ ಲೆಕ್ಕಿಸದ 
ಹಾ
ಗೆ.
 
 
 
 Posts
Posts
 
 
No comments:
Post a Comment