1
ಬಾನಂಗಳದ ಕಾರ್ಗತ್ತಲಲಿ ಚಕ ಚಕನೆ ಹೊಳೆಯುವ
ನಕ್ಷತ್ರಗಳ ಮಧ್ಯೆ ಮಿನುಗುವ ಚಂದಿರ.
2
ಉರಿ ಬಿಸಿಲಲಿ ಬಳಲಿದ ಭೂಮಿ ತಣ್ಣಗಾಗಲು ಚಡಪಡಿಸುತಿರೆ ಒಮ್ಮೆಲೇ ಜೋರಾಗಿ ಸುರಿವ ಮುಂಗಾರು.
3
ಹರಿವ ನದಿಗೆ ಒಮ್ಮೆಲೇ ಉನ್ಮಾದವ ಹೆಚ್ಚಿಸಿ ವೇಗವಾಗಿ ಹರಿದು ಸಮುದ್ರ ಸೇರಿ ನಲಿಯಲು ದೊರೆಯುವ ತಿರುವು.
4
ಹೂ ಬಿಸಿಲಲಿ ಅರಳಿದ ಕೆಂದಾವರೆಯ ಮಿಲನ ಸ್ಪರ್ಷದುಲ್ಲಾಸಕೆ ಹಾರಿ ಬರುವ ದುಂಬಿ ನೀ.
5
ಬೆಳದಿಂಗಳಲಿ ಮೈದುಂಬಿ ನರ್ತಿಸುತ ಮಿಲನದೊಳಿರುವ
ಸರ್ಪಗಳ ಕಂಡು ಬೆಚ್ಚಿ ಚಡಪಡಿಸಿದ ಹಾವಾಡಿಗ.
6
ಮೈಕೊರೆಯುವ ಛಳಿಯಲಿ ಗಡ ಗಡನೆ ನಡುಗುವ
ಚಡಪಡಿಕೆಯ ದೂರಾಗಿಸಲು ಅವತರಿಸುವ ಅಗ್ನಿಕುಂಡ
----ಸಿದ್ದು ಯಾಪಲಪರವಿ
No comments:
Post a Comment