*ಭಾವ-ಗಾನ-ಧ್ಯಾನಗಳ ಸಮಾಗಮ: Sa Re Ga Ma Pa little champs*
ನನ್ನನ್ನು ಹಿಡಿದಿಟ್ಟು , ಅಳಿಸಿ , ನಗಿಸಿ ಗಂಟಲು ಬಿಗಿಯುವುವಂತೆ ಮಾಡುವ ದೃಶ್ಯ.
ಆಗೀಗ ಬರೆಯುತ್ತೇನೆ , ಕಾವ್ಯ ಮೊದಲ ಆಯ್ಕೆ. ಮೂವತ್ತು ವರ್ಷಗಳ ಸಾಧನೆಯ ನಂತರ ಈಗ ಕೊಂಚ ಹಿಡಿತ. ಆದರೆ ಸಂಪೂರ್ಣ ಅಲ್ಲ.
ಸಂಗೀತಕ್ಕೆ ಕಾವ್ಯ-ಸಾಹಿತ್ಯ ಜೀವಾಳ.
ಪಂಚಾಕ್ಷರ ಗವಾಯಿಗಳ ಆಶ್ರಮದ ನನ್ನ ಸಂಪರ್ಕ. ಪೂಜ್ಯ ಪುಟ್ಟರಾಜ ಗವಾಯಿಗಳ ಮೇಲಿನ ಶೃದ್ಧೆ ಸಂಗೀತ ಆಸಕ್ತಿಯನ್ನು ಹೆಚ್ಚಿಸಿದೆ.
ಗಾನ-ಧ್ಯಾನ ಪೂರಕ.
ನನ್ನ ತರಬೇತಿಯಲ್ಲಿಯೂ ಹೇಳುವೆ ' ಸಾಧನೆಗೆ , ಖುಷಿಗೆ ಗಾನ-ಧ್ಯಾನ ಮುಖ್ಯ'.
ಸಂಗೀತ ಎಲ್ಲರಿಗೂ ಅರ್ಥವಾಗುವ, ಎಲ್ಲರನ್ನೂ ಆಕರ್ಷಿಸುವ *universal language*.
ಅರಸಿಕನ ಮನಸನೂ ಅರಳಿಸುವ ತಾಕತ್ತು.
ಇನ್ನು ಕೊಂಚ ತಿಳಿದಿದ್ದರೆ ಮುಗಿದೇ ಹೋಯಿತು.
*ಸ್ವರ್ಗ ಸುಖ,ಹೊಸ ಲೋಕ ದರ್ಶನ*.
Weekend ನಲ್ಲಿ ಊರಲ್ಲಿದ್ದರೆ ಆನಂದದಿ ನಗುತ್ತ-ಅಳುತ್ತ ಅನುಭವಿಸುವ ಪರಮಾನಂದವೇ little champs.
Zee ಕನ್ನಡವರು ತುಂಬ ಜಾಣರು , ಜನರ ನಾಡಿಮಿಡಿತ ಬಲ್ಲವರು.
ವೈಭವೀಕರಿಸಿ ಎಲ್ಲದನ್ನು ಉಣ ಬಡಿಸುತ್ತಾರೆ.
ಅದರಲ್ಲೂ ಮಕ್ಕಳಿದ್ದರೆ ಎಲ್ಲವೂ ಅಂದ-ಚಂದ.
ಇಲ್ಲಿ ಎತ್ತರಕ್ಕೆ ಏರಿದ ಸಾಧಕರು involve ಆಗಿ ಮಕ್ಕಳ ಜೊತೆ ಭಾವನಾತ್ಮಕ ವಾತಾವರಣ ಸೃಷ್ಟಿಸುತ್ತಾರೆ.
ನಿರೂಪಕಿ ಅನುಶ್ರೀ ಪ್ರಮುಖ ಆಕರ್ಷಣೆ. ಕೊಂಚ ಅತೀ ಅನಿಸಿದರೂ ಸಾಮಾನ್ಯರ ಗಮನ ಸೆಳೆಯಲು ಅನಿವಾರ್ಯ ಕೂಡಾ ! Just commercial !!
VP- ವಿಜಯಪ್ರಕಾಶ ಹಾಗೂ ಅರ್ಜುನ ಜನ್ಯ , ಜುರಿಗಳು , ವಾರದ ಅತಿಥಿ ಹಾಗೂ ಹಂಸಲೇಖ ಎಲ್ಲರೂ wonderful and ultimate. ಅವರದು ಮಕ್ಕಳೊಡನೆ ಮುದ್ದು ಮಕ್ಕಳಾಗಿ ಬೆರೆಯುವ ಅನನ್ಯತೆ.
ಮಕ್ಕಳ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಕೋಟಿಗಟ್ಟಲೆ ಹಣ ಸುರಿದು , ಕೋಟಿಗಟ್ಟಲೆ ಜನರಿಗೆ ತಲುಪಿಸಿ , ಕೋಟಿಗಟ್ಟಲೆ ಗಳಿಸುವ ರಾಘವೇಂದ್ರ ಹುಣಸೂರ ತಂಡದವರ ಪರಿಕಲ್ಪನೆ ಅನುಪಮ.
ಸಂಗೀತದ ಯಶಸ್ವಿ ಪಯಣ ಹಾಗೂ ಒಳಪಟ್ಟುಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಆಗಾಗ ವಿವರಿಸುವದು ಇನ್ನೂ ವಿಶೇಷ.
ಸುಮ್ಮನೇ ಹಾಡನ್ನು enjoy ಮಾಡುವ ನಾವು ಹಿಂದಿರುವ ಶ್ರಮದ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ.
ಹಾಡಿಗೆ ಇರಬೇಕಾದ ಧ್ಯಾನಸ್ಥ ಸಾಧನೆ ಕುರಿತು ಹೇಳುವುದು , ಕೆಲವು ಘಟನೆಗಳ ಭಾವುಕ ಸಂಗತಿಗಳನ್ನು ಸಿನಿಮೀಯವಾಗಿ ತೋರಿಸಿ ಅಳುವಂತೆ ಮಾಡುವುದು, ಅದಕ್ಕೆ ಬೇಕಾಗುವ ರೀತಿಯಲ್ಲಿ script ತಯಾರಿಸಿ , ಅದನ್ನು ಅಷ್ಟೇ ರಸವತ್ತಾಗಿ present ಮಾಡುವುದು ಎಲ್ಲರನ್ನೂ ಬೇರೆ ಜಗತ್ತಿಗೆ ಕೊಂಡೊಯ್ಯುತ್ತದೆ.
ಹಣದ ವ್ಯವಹಾರ ಇದ್ದರೂ ಹೆಚ್ಚು involvement ಇರುವುದರಿಂದ commercial ಅನಿಸುವುದಿಲ್ಲ.
ಗ್ರಾಮೀಣ , ಅಸಹಾಯಕ ಪ್ರತಿಭೆಗಳಿಗೆ ಸೂಕ್ತ , ನಿಷ್ಪಕ್ಷಪಾತ ವೇದಿಕೆಯೂ ಹೌದು.
' ಅಯ್ಯೋ time waste ' ಎಂದು ಗೊಣಗದೇ , ನಿಜವಾಗ್ಲೂ ಬಿಡುವಿದ್ದರೆ ಈ ಕಾರ್ಯಕ್ರಮ ನೋಡಿ .
ಬೆಟ್ಟಿಂಗ್ ದಂಧೆ ಸೃಷ್ಟಿ ಮಾಡುವ ಕ್ರಿಕೆಟ್ ಆಟ ನೋಡುವ ನಾವು ಕೊಂಚ ಭಿನ್ನವಾಗಿ ಖುಷಿ ಕೊಟ್ಟು ಮೈಮರೆಸುವ ಕಾರ್ಯಕ್ರಮಗಳ ಕಡೆ ತಿರುಗಿ ನೋಡೋಣ. ಇಲ್ಲದಿದ್ದರೆ ಎಲ್ಲವೂ *Waste*.
---ಸಿದ್ದು ಯಾಪಲಪರವಿ.
No comments:
Post a Comment