Friday, June 15, 2018

ಮನಸು ಮಾಡಬೇಕು ಅಷ್ಟೇ

*ಜಾಯ್ ಫುಲ್ ಲಿವಿಂಗ್*

*ಮನಸಿಗೆ ಹೇಳೋ ಮನಸು ಮಾಡಬೇಕು ಅಷ್ಟೇ*

'ಮನಸು ಮಾಡಬೇಕು ಅಷ್ಟೇ' ಇದು ತುಂಬ ಸರಳವಾಗಿ ಹೇಳುವ ಸೂತ್ರ ಆದರೆ ಮನಸು ಮಾಡುವುದು ಅಷ್ಟೇ ಕಷ್ಟ.

ನಮ್ಮ ಅನೇಕ ವಿಫಲತೆಗಳಿಗೆ ಮನಸು ಮಾಡದಿರುವುದೇ ಕಾರಣ.
ನಾವದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದಾಗ ಸಣ್ಣ ಸೂತ್ರದ ದೊಡ್ಡ ಮಹಿಮೆ ಅರಿವಿಗೆ ಬರುತ್ತದೆ.

*ಅಯ್ಯೋ ಆರಾಮಿರಲಿಲ್ಲ, ತುಂಬಾ ಬಿಜಿ ಇದ್ದೆ, ವಿಪರೀತ ಜನ, ಸುಸ್ತಾಗಿದ್ದೆ, ಯಾಕೋ ಬೇಡ ಅನಿಸ್ತು, ಅಲ್ಲಿ ಸಂತೆಯಷ್ಟು ಗದ್ದಲ, ಉದಾಸೀನ, ಜೊತೆಗೆ ಯಾರೂ ಇರಲಿಲ್ಲ, ಮಗು ಅಳ್ತಾ ಇತ್ತು, ಮನೆಯಲ್ಲಿ ವಯಸ್ಸಾದವರು, ಹಣ ಇರಲಿಲ್ಲ, ನಿದ್ದೆ ಬಂದ್ಬಿಡ್ತು, ಇದರಿಂದ ಏನ್ ಪ್ರಯೋಜನ, ಯಾರಿಗೂ ಉಪಯೋಗವಿಲ್ಲ, ಮನಸಿಗೆ ತಾಪವಾಗಿತ್ತು...* ಹೀಗೆ ಕೊಡಲು ಸಾವಿರ ಕಾರಣಗಳು.

ಒಟ್ಟಾರೆ ಹೇಳೋದಾದ್ರೆ ಮಾಡೋ ಕೆಲ್ಸ ಪೂರಾ ಆಗಲಿಲ್ಲ.

ಮನುಷ್ಯ ಸ್ವಾರ್ತಿ, ಕೇವಲ ಸ್ವಾರ್ತ ಹಾಗೂ ಮನಸು ಮಾಡದೇ ಇರುವದಕೆ ಇಂತಾ ನೂರಾರು ಕಾರಣ ಹೇಳುತ್ತಾನೆ. ಬುದ್ದಿವಂತ ಪ್ರಾಣಿ. ಕೆಲಸ ಆಗದೇ ಇರುವುದಕೆ ಕಾರಣ ಹುಡುಕುವಷ್ಟಂತೂ ಜಾಣ.

ನಮ್ಮ ನೀಚಾತಿನೀಚತನಕೆ ಕಂಡವರೆಲ್ಲ ಬಲಿ.
ನಮಗೆ ದೊರಕುವ ಶಿಕ್ಷಣ, ಅರಿವು, ವಿಕಾಸ ಅಂದ್ರೆ ಇಷ್ಟೇ. ನಮ್ಮನ್ನು ನಾವು ಒಳಗೆ ಹಾಕಿಕೊಳ್ಳೋದು.
ಸಕಾರಣ ಹುಡುಕಿ ಕೊಡುವುದು. ಅದನ್ನು ಕೇಳಿಸಿಕೊಂಡವರಿಗೂ ಗೊತ್ತು. ಇದು ಶುದ್ದ ಸುಳ್ಳೆಂದು. ಆದರೂ ಒಪ್ಪಿಕೊಳ್ಳುತ್ತಾರೆ; ಅವರೂ ಸುಳ್ಳರಾಗಿರುವ ಕಾರಣಕೆ.

ತನಗೆ ಬೇಕಾದರೆ ಮಾತ್ರ ಮಾಡುವ ಮನುಶ್ಯ ತನ್ನ ಮನಸಿನ ಮಾತನಷ್ಟೇ ಆಲಿಸುತ್ತಾನೆ, ಬೇರೆಯವರು ಹೇಳಿದಕ್ಕೆ ತಲೆಯನ್ನಂತೂ ಆಡಿಸುತ್ತಾನೆ.

ನನ್ನ ಮುಂದೆ ಮಾಡಲು ನೂರೆಂಟು ಯೋಜನೆ, ಯೋಚನೆಗಳು. ತಲೆ ಗುಂಯ್ ಅನ್ನುತ್ತೆ. ಕಾಲನ ಕರೆ ಬಂದಾಗ ಓಡಿ ಹೋಗಲೇಬೇಕೆಂದು ಗೊತ್ತಿದ್ದರೂ ಮುಂದೂಡತ್ತಲೇ ಇದ್ದೇನೆ.
ಕಾರಣ ಇಷ್ಟೇ *ಮನಸು* ಮಾಡಿರುವುದಿಲ್ಲ.

ಆತ್ಮವಂಚನೆ ಮಾಡಿಕೊಳ್ಳುತ್ತ ನಾಚಿಕೆ ಇಲ್ಲದೆ ಏನೂ ಆಗಿಯೇ ಇಲ್ಲ ಎಂಬಂತೆ ನಡೆದುಬಿಡುತ್ತೇವೆ.

*ಊಟ,ನಿದ್ದೆ, ಮೈತುನ* ಬಿಟ್ಟಿರುವುದಿಲ್ಲ ನೋಡಿ. ಅವು ಬಿಟ್ರೆ ದೇಹ ಕೇಳಲ್ಲ. ಬೇಕೂ ಅಂತ ಹಟ ಮಾಡಿ ಒದೆಯುತ್ತೆ.

ಮನಸಿಗೆ ಬೇಕಾದ ಓದು, ಬರಹ, ದ್ಯಾನ ಮಾಡಲಿಕ್ಕೆ ಲೆಕ್ಕ ಹಾಕೋ ಮನಸಿಗೆ ಒದ್ದು ಬುದ್ದಿ ಹೇಳೋರು ಯಾರು?

*ಮನಸು ಮಾಡೋ ಮಗನೇ ಎಂದು ಮನಸು ಮನಸಿಗೆ ಜಾಡಿಸಿ ಒದೆಯೋವರೆಗೆ ಮನಸು* ಮಾಡುವದೇ ಇಲ್ಲ.

ಮನಸು ಮಾಡದೇ ತಪ್ಪಿಸಿಕೊಂಡು ಹೇಳಿದ ಕಾರಣಗಳನ್ನು ನೆನಪಿಸಿಕೊಂಡು ಮತ್ತೆ ಹಾಗೆ ಮಾಡದಂತೆ ಮನಸಿಗೆ ನಾವೇ ತಿಳಿಸಿ ಹೇಳೋಣ.

   *ಸಿದ್ದು ಯಾಪಲಪರವಿ*

No comments:

Post a Comment