Wednesday, June 6, 2018

ನಿಜಗುಣಾನಂದರು‌

*ಪೂಜ್ಯ ನಿಜಗುಣಾನಂದರು*

ಅಪ್ಪಟ ಬಸವತತ್ವ ನಿಷ್ಠರು, ಆಧ್ಯಾತ್ಮ‌‌ ಚಿಂತಕರೂ ಆದ ಪೂಜ್ಯ ನಿಜಗುಣಾನಂದ ಸ್ವಾಮಿಗಳ‌ ಒಡನಾಟಕೀಗ ಎರಡು ದಶಕಗಳ ಸಂಭ್ರಮ.

ಸಿಂಧನೂರಿನಲ್ಲಿ ಆಯೋಜಿಸಿದ್ದ ಪ್ರವಚನ ಆಲಿಸಿದೆ. ತುಂಬಾ ಖುಷಿಯಾಯಿತು. ಅಷ್ಟಾಂಗ ಯೋಗ ಸೂತ್ರ ಆಧರಿಸಿ ಶಿವಯೋಗದ ವಿಶೇಷತೆಯನ್ನು ಅರ್ಥಪೂರ್ಣವಾಗಿ ವಿವರಿಸಿದರು.

ಹರಿತ,ಮೊನಚು ಮಾತುಗಳಿಗೆ ಹೆಸರಾದ ಅವರಿಂದ ಆಧ್ಯಾತ್ಮಿಕ ಹಿನ್ನೆಲೆಯ ಚಿಂತನೆಗಳ ಕೇಳಿ ಹರ್ಷಿತನಾದೆ.

ಕ್ರಿಯಾಯೋಗ, ರಾಜಯೋಗ ಪರಿಚಯವಾದ ಮೇಲೆ ಶಿವಯೋಗದ ವಿಸ್ತಾರ ಅನುಭವಕೆ ಬಂತು.

ಪೂಜ್ಯರೀಗ ತುಂಬಾ ಪ್ರಬುದ್ಧರಾಗಿದ್ದಾರೆ ಅನಿಸಿತು. ಆದ್ಯಾತ್ಮದಂತಹ ಜಟಿಲ ವಿಷಯವನ್ನು ಜನಸಾಮಾನ್ಯರಿಗೆ ಅರ್ಥವಾಗುವ ಸರಳೋಪಾಯ ಕಂಡು ಹಿಡಿದಿದ್ದಾರೆ.

ಶಿವಯೋಗ ಹಾಗೂ ವಚನಗಳ‌ ವಿಶ್ಲೇಷಣೆ ಕೇಳಿ ಪುಳಕಗೊಂಡೆ.

ತಡರಾತ್ರಿವರೆಗಿನ ಚರ್ಚೆಯಲಿ ಅನೇಕ ವಿಷಯಗಳನ್ನು ಅರಿಯುವ ಅವಕಾಶ ದಕ್ಕಿತು.ಬಸವಾದಿ ಶರಣರು ಕೊಟ್ಟ ಕೊಡುಗೆಯನು ಲಿಂಗಾಯತರು ತಿಳಿಯದೇ ಹಾಳು ಮಾಡಿಕೊಳ್ಳುತ್ತಾರೆ ಎಂಬ ವಿಶಾದ.

ವಚನಗಳ‌ ಆಳದಲಿ‌‌ ಅಡಗಿರುವ ಆಧ್ಯಾತ್ಮಿಕ ಸಂಗತಿಗಳನ್ನು ಗ್ರಹಿಸದೇ ಕೇವಲ *ಸಾಮಾಜಿಕ ಚಳುವಳಿ* ರೂಪದಲ್ಲಿ ನೋಡುತ್ತಿರುವುದು ದೊಡ್ಡ ಅಪಾಯ.

ಬಸವಣ್ಣ ಕೊಟ್ಟ ಜ್ಞಾನ, ಅಲ್ಲಮ ತೋರಿದ ಬಯಲು, ಅಕ್ಕ ನಡೆದ ಹಾದಿ, ಶರಣರೆಲ್ಲರ ಅನುಭಾವದ ನಮ್ಮ ಗ್ರಹಿಕೆಯೇ ಸರಿಯಿಲ್ಲ.

ತಮ್ಮ ಖಡಕ್ ಪ್ರವಚನಗಳ ಮೂಲಕ ಅದನ್ನು ತಿಳಿಸುವ ಕಾಯಕದಲ್ಲಿರುವ ಪೂಜ್ಯರ ಜ್ಞಾನಕ್ಕೆ ಶರಣು.

*ಸಾವಿರಾರು ವಚನಗಳ‌ನು ಹರಳು‌ಹುರಿದಂತೆ ಅಭಿವ್ಯಕ್ತಿಸುವ ನಿಮ್ಮ ತಾಕತ್ತು ಬಡಿದೆಬ್ಬಿಸುವಂತಹದು*.

ನೀವು ಸಾಧಕರಾಗಿಯೂ ಬೆಳೆಯುವ ಅವಕಾಶವನ್ನು ಸಮಾಜ ಕಲ್ಪಿಸಬೇಕು ಕೂಡಾ.

ಖಾಸಗಿ ಮಾತು ಮಂಥನಗಳ‌ಲಿನ ಆಧ್ಯಾತ್ಮಿಕ ಅನುಸಂಧಾನ‌‌ ನನ್ನ ಪುಳಕಿಸಿದೆ.

*ಯಾವುದೇ ದಿವ್ಯ ಚೇತನ ಆತ್ಮಗಳ ಮಿಲನಿಸುತ್ತದೆ*.

ಮತ್ತೆ ಮತ್ತೆ ಇದೇ ಶರಣ ಮಾರ್ಗದಿ ಸಾಗುತಲೇ ಇರೋಣ.



ಶಿ
ವಾ

ಓಂ

*ಓಂಕಾರ ನಿನಾದಿಸುತಲಿರಲಿ*

    *ಸಿದ್ದು ಯಾಪಲಪರವಿ*

No comments:

Post a Comment