Saturday, June 9, 2018

ನಾಯಕತ್ವ ಕೊರತೆ

*ಹದೆಗೆಟ್ಟ ರಾಜಕಾರಣಕೆ ನಿಸ್ವಾರ್ಥ ನಾಯಕರ ಕೊರತೆ*

ಇಂದಿನ ರಾಜಕಾರಣದ ಏಕಪಕ್ಷೀಯ, ಏಕಜಾತಿಯ  ಕುಟುಂಬ, ಸ್ವಾರ್ಥ, ಗುಲಾಮಿ ಸಂಸ್ಕೃತಿಯ ಸ್ವರೂಪಕೆ ಇನ್ನಿಲ್ಲದ ಮರುಕ.

ಜಾತ್ಯತೀತ ನೆಪದಲ್ಲಿ ರಾಷ್ಟ್ರೀಯ ಪಕ್ಷವೊಂದು ತನ್ನ ಯೋಗ್ಯತೆ ಮರೆತು ಅಡಿಯಾಳಾದದ್ದು ನೋಡಿದರೆ ಅಯ್ಯೋ ಅನಿಸದೇ ಇನ್ನೇನು?

ಆಂತರಿಕ ಪ್ರಜಾಪ್ರಭುತ್ವ ಇಲ್ಲದ ರಾಜಕೀಯ ಪಕ್ಷಗಳನ್ನು ರಾಜಕೀಯದಲ್ಲಿರುವವರು ಸಾರಾಸಗಟವಾಗಿ ತಿರಸ್ಕರಿಸಬೇಕು.

ರಾಜಕೀಯ ಅನಿವಾರ್ಯತೆ ನೆಪದಲ್ಲಿ ತಮ್ಮ ಘನತೆಯನ್ನೇ ಕಳೆದುಕೊಳ್ಳಬಾರದು. ಅಂತಹ ದುಸ್ಥಿತಿಗೆ ಕರ್ನಾಟಕ ಕಾರಣವಾದದ್ದು ವಿಷಾದನೀಯ.

ರಾಷ್ಟ್ರೀಯ ಪಕ್ಷಗಳ ಸ್ಥಿತಿಯೂ ಅಷ್ಟೇ.

ಅಲ್ಲಿ ಮುಖ್ಯ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದವರು ಮುಖ್ಯ ಮಂತ್ರಿಯಾಗಬಾರದೆಂಬ ಏಕೋದ್ಯೇಶ ಇಟ್ಟುಕೊಂಡೇ ಒಳಸಂಚು ಮಾಡಿದ್ದರಿಂದ ಬಹುಮತ ತಲುಪಲಿಲ್ಲ.

ಆ ಒಳಸಂಚು ರೂಪಿಸಿದ *ಸ್ವಪಕ್ಷೀಯರು* ಯಾರೆಂದು ಗೊತ್ತಿದ್ದರೂ ಲೋಕಸಭಾ ಚುನಾವಣೆ ದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಳ್ಳವ ಅನಿವಾರ್ಯತೆ.
                
                   ***

ಈ ಹಿನ್ನೆಲೆಯಲ್ಲಿ *ಎಂ.ಬಿ.ಪಾಟೀಲರ* ಈಗಿನ ನಡೆ ಅಭಿನಂದನಾರ್ಹ.

ಇಡೀ ರಾಜ್ಯ, ಅದರಲ್ಲೂ ಉತ್ತರ ಕರ್ನಾಟಕ ರಾಜಕೀಯ ನಾಯಕರ ಕೊರತೆಯಿಂದ ಬಳಲುತ್ತಿದೆ.

ಮೂರು ದಶಕಗಳಿಂದ ಅಧಿಕಾರದಲ್ಲಿರುವ ಕೆಲವು *ಹಿರಿ-ನೆರೆ‌* ತಲೆಯ ನಾಯಕರು ತಮ್ಮ ಪಕ್ಷ ಅಧಿಕಾರ ಹಿಡಿದಾಗಲೆಲ್ಲ ಕೇವಲ ಮಂತ್ರಿಯಾಗುತ್ತಾರೆ, ನಾಯಕರಾಗುವುದೇ ಇಲ್ಲ. ಈಗಲೂ ನಾಯಕರಾಗದೇ ಮಂತ್ರಿಯಾಗಲು ಹಪಾಹಪಿಸುತ್ತಾರೆ. ಅದಕ್ಕೆ ಹಿರಿತನವಷ್ಟೇ ಯೋಗ್ಯತೆ. ಬೇರೇನೂ ಇಲ್ಲ.

ಎಂ.ಬಿ.ಪಾಟೀಲ ಕೇವಲ ಮಂತ್ರಿಗಿರಿಗೆ ಹವಣಿಸದೇ ನಾಯಕತ್ವ ರೂಪಿಸಿಕೊಳ್ಳಲು ಸನ್ನದ್ಧರಾಗಲಿ.

ಬಸವ ಚಳುವಳಿಯ ಹೋರಾಟ ಅವರ ರಾಜಕೀಯ ಬದುಕಿಗೆ ಹಿನ್ನೆಡೆಯೆಂದು ಭಾವಿಸಬಾರದು.

ಈಗಿರುವ ನಾಯಕತ್ವದ ಕೊರತೆ ನಿವಾರಿಸಲು ಹೋರಾಟ ಮುಂದುವರೆಯಲಿ.

ಲಿಂಗಾಯತ ಧರ್ಮದ ಸ್ಥಾಪಕ ಬಸವಣ್ಣನವರ *ಕಲ್ಯಾಣ ರಾಜ್ಯ* ದ ಅಗತ್ಯವಿದೆ.

ಜಾತ್ಯತೀತ ಮೌಲ್ಯಗಳ ಹೆಸರು ಹೇಳುತ್ತ *ಹುಸಿ* ಜಾತಿ ರಾಜಕಾರಣ ಮಾಡುವ ಫ್ಯಾಮಿಲಿ ಕಾರ್ಪೋರೇಟ್ ಮಾದರಿಯ ಪಕ್ಷದ ಮರ್ಜಿಯಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿರುವದ ಖಂಡಿಸಬೇಕು.

ಜಾತ್ಯಾತೀತತೆ, ತೃತೀಯ ರಂಗ ಅದ್ಹೇಗೆ ಸಾಧ್ಯ.

ತೃತೀಯ ರಂಗವೆಂದರೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಅಂತರ ಕಾಪಾಡಿಕೊಳ್ಳುವದು. ಯಾವುದಾದರೊಂದು ರಾಷ್ಟ್ರೀಯ ಪಕ್ಷದೊಂದಿಗೆ *ಕೈ* ಜೋಡಿಸಿ ಬೆರಳೆತ್ತುವುದಲ್ಲ.

*ಪ್ರಾದೇಶಿಕ ಪಕ್ಷಗಳ ಸಮೂಹವನ್ನು ಮಾತ್ರ ತೃತೀಯ ರಂಗವೆಂದು ಪರಿಗಣಿಸಬಹುದು*.
           
                 ***

ಪ್ರಬಲ ರಾಜಕೀಯ ಇಚ್ಛಾಶಕ್ತಿ ಹೊಂದಿರುವ, ಅಪ್ಪಟ ರಾಜಕೀಯ ಮೌಲ್ಯ ಹಾಗೂ ಜಾತ್ಯತೀತ ಮನಸ್ಥಿತಿ ಇಟ್ಟುಕೊಂಡಿರುವ ವಿವಿಧ ಪಕ್ಷಗಳಲಿ ಹಂಚಿ ಹೋಗಿರುವ ನಾಯಕರು ಒಗ್ಗಟ್ಟಾಗಿ ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಲಿ.

*ಬುದ್ಧ-ಬಸವ-ಅಂಬೇಡ್ಕರ್ ಪ್ರೇರಣೆ, ಸಿದ್ಧಾಂತಗಳು ಜಾರಿಗೊಳ್ಳಲಿ*

ರಾಜಕೀಯವೆಂದರೆ ರಾಜಕಾರಣ, ಕಾರ್ಪೋರೇಟ್ ಕಂಪನಿ ಅಲ್ಲ. ಫ್ಯಾಮಿಲಿ ಫಂಡಿಂಗ್ ಇದ್ದರೆ ಸಾಕೆಂಬ ದುಸ್ಥಿತಿ ಒಪ್ಪಬಾರದು.

*ಕನ್ನಡಿಗರು ಸ್ವಾಭಿಮಾನಿಗಳು* ಎಂಬುದೊಂದು ಸಿನೆಮಾ ಡೈಲಾಗ್ ಅಲ್ಲ.

ಬಸವಾದಿ ಶರಣರು ಬಿಟ್ಟು ಹೋದ ಅನುಭವ ಮಂಟಪದ *ಕಲ್ಯಾಣ ಪ್ರಜ್ಞೆ ,ಅಂಬೇಡ್ಕರ್ ಸಂವಿಧಾನ*

ಈಗ ಕೆಲವರ ಆಕ್ರೋಶ ಮಂತ್ರಿಗಿರಿಗೆ ಸೀಮಿತವಾಗದೇ ಇಡೀ ವ್ಯವಸ್ಥೆ ವಿರುದ್ಧದ ಚಳುವಳಿಯಾಗಲಿ. ಎಂ.ಬಿ.ಪಾಟೀಲ ಹಾಗೂ ಕೆಲವು ಪ್ರಗತಿಪರ ಮನಸುಗಳು ಕೈಜೋಡಿಸಲಿ.

                     ***

ಲಿಂಗಾಯತ ಚಳುವಳಿ ಮುಂಚೂಣೆಯಲಿದ್ದವರಿಗೆ ಮಂತ್ರಿಗಿರಿ ಬೇಡ ಎನ್ನಲು ಅವರು ಯಾರು? ಅದನ್ನು ಒಪ್ಪಿಕೊಳ್ಳುವ ಇವರೆಷ್ಟು ಜಾಣರು.

ಮೈತ್ರಿ ಎಂದರೆ ನಿರ್ಲಜ್ಯತೆ ಅಲ್ಲ. ಮೌಲ್ಯಗಳ ಒತ್ತೆ ಇಡುವುದೂ ಅಲ್ಲ.

ಲಿಂಗಾಯತ ಚಳುವಳಿ ಏಕಪಕ್ಷೀಯ, ಸಮಾಜ ವಿಭಜಿಸುವ ಹೋರಾಟವೆಂದು ಒಪ್ಪಿಕೊಳ್ಳಬಾರದು.

ಕಾಂಗ್ರೆಸ್ ಪಕ್ಷಕ್ಕೆ ಈ ಹೋರಾಟದ ಲಾಭ ದಕ್ಕಿದೆ. ಪ್ರಗತಿಪರ ಲಿಂಗಾಯತರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ನಿಧಾನವಾಗಿ ಹಿಡಿಯುತ್ತಾರೆ ಕೂಡ.

                     ***

*ಎಂ.ಬಿ.ಪಾಟೀಲ ಅವರೇ*,
ಮುಖವಾಡ ಇಲ್ಲದ ನಾಯಕರ ಸಮೂಹ ಕಟ್ಟಿಕೊಂಡು ಹೋರಾಟ ಮಾಡಿದರೆ ನಿಮಗೆ ಜಯ ಸಿಕ್ಕೇ ಸಿಗುತ್ತದೆ. *ಆದರೆ ಕಾಯಬೇಕು ಅಷ್ಟೇ!*.

*ಸಿದ್ದು ಯಾಪಲಪರವಿ*

No comments:

Post a Comment