ಬಾ ಸಖಿಯೇ ಬಾ ಬಾರೆ 
ಎಲ್ಲಿ ಮರೆಯಾದೆ.
ನನ್ನೆದೆಯ ತೋಟದಲಿ 
ನೀ ಬಿತ್ತಿದಾ ಒಲವ ಬೀಜದಿ
ಹೆಮ್ಮರವಾಗಿ ಬೆಳೆದ 
ಮರದಲಿ 
ಅರಳಿವೆ ಹೂಗಳು.
ಘಮ ಘಮಿಸುವ 
ಕಂಪಿನಲಿ 
ಕೋಗಿಲೆಯ 
ಇಂಪಿನಲಿ 
ಅಡಗಿ ಕುಳಿತಿಹ ನೀನು 
ಏಕೆ ಕೆಣಕುವೆ ನನ್ನೆದೆಯ 
ಭಾವಗಳ.
ಬಾ ಸಖಿಯೇ ಬಾ ಬಾರೆ
ಬಾಳ ಬೆಳಗಿ ನಡೆಸೆನ್ನ 
ಹರುಷದೆಡೆಗೆ....
   ---ಸಿದ್ದು ಯಾಪಲಪರವಿ
 
 
 
 Posts
Posts
 
 
No comments:
Post a Comment