Thursday, June 21, 2018

ಕಲಬುರಗಿಯಲಿ ಜುಗಲ್ ಕಲರವ

*ವಿನೂತನ ಪ್ರಯೋಗಕೊಂದು ಪ್ರಯೋಗ*

ಪಿಸುಮಾತುಗಳ‌ ಜುಗಲ್ ಕುರಿತು *ಕಲಬುರಗಿಯಲ್ಲಿ* ಸಂವಾದ ಆಯೋಜಿಸಿದ್ದಾರೆ.
ಸಂಗೀತ ಪ್ರಾಧ್ಯಾಪಕಿ, ಒಂದು ಕಾಲದ ವಿದ್ಯಾರ್ಥಿ ಡಾ.ಲಕ್ಷ್ಮಿ‌ ಶಂಕರ ಜೋಶಿ ತುಂಬಾ ಮುತುವರ್ಜಿವಹಿಸಿ ಕಾರ‌್ಯಕ್ರಮ ರೂಪಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಚಿಂತಕ ಡಾ.ವಿಕ್ರಮ ವಿಸಾಜಿ ಮಾತನಾಡುವುದು ಸಮಯೋಚಿತ. ರಾಗ,ದ್ವೇಶ,ಅಸೂಯೆಗಳಿಂದ ಯಾವ ಕ್ಷೇತ್ರಗಳು ಹೊರತಾಗಿಲ್ಲ ಅಂದುಕೊಳ್ಳುವಾಗಲೇ ಅರೆ ಅದು ಹಾಗಲ್ಲ ಅನಿಸಿ ಭರವಸೆ ಮೂಡಿಬಿಡುತ್ತೆ.

ನಾನು ಕಲ್ಯಾಣ ನಾಡಿನವನೇ ಹೊಟ್ಟೆಪಾಡಿಗಾಗಿ ಕಿತ್ತೂರ ಕರ್ನಾಟಕದಲ್ಲಿ ನೆಲೆಸಿದ್ದೇನೆ. ತಿರುಗಾಟದ ಕಾರಣದಿಂದ ಲೋಕವೇ ನನ್ನ ಮನೆ.
ಬೆಂಗಳೂರು, ಮಂಗಳೂರು ಹಾಗೂ ವಿದೇಶಿಗರ ಸಾಂಗತ್ಯದಿಂದಾಗಿ ಹೊಸ ಪಾಟ ಕಲಿಯುತ್ತಲೇ ಇದ್ದೇನೆ.
ಎಲ್ಲಿದ್ದರೇನು ಬೇರುಗಳು ಅಲುಗಾಡುವುದಿಲ್ಲ.

ಈಗೀಗ ಅವ್ವ-ಅಪ್ಪ ಹೋದ ಮೇಲೆ ಕಾರಟಗಿಗೂ ಹೋಗುತ್ತಲಿರುತ್ತೇನೆ.

ಐವತ್ತರ ಗಡಿದಾಡಿದ ಮೇಲೆ ಬದುಕನ್ನು ಮರು ಓದಬೇಕು. ಮಾಗಲೇಬೇಕು. ಯಾವದನ್ನೂ ಲೆಕ್ಕಿಸದೇ ಮುಕ್ತವಾಗಿ ಬರೆದು ದಕ್ಕಿಸಿಕೊಳ್ಳುವ ವಿಶ್ವಾಸ ಹೆಚ್ಚಾದ ಮಾಗಿ ಕಾಲವಿದು.

ಓದುಗರು ಕೇಳುವ ಪ್ರಶ್ನೆಗಳಿಗೆ ಮುಕ್ತವಾಗಿ ಹೇಳುವುದು ಜವಾಬ್ದಾರಿಯೂ ಹೌದು.

ಬಿಡುವು ಮಾಡಿಕೊಂಡು ಬರ್ರಿ, ಮಾತಾಡೋಣ.

   ಸಿದ್ದು ಯಾಪಲಪರವಿ

No comments:

Post a Comment