Wednesday, May 21, 2014

ಹೊಸ ವರುಷ

ಹೊಸ ವರುಷ 
ಉರುಳುತಲಿದೆ ವರುಷದ ಗಾಲಿ
ಹರುಷವೊ ದುಃಖವೋ ಸ್ವೀಕರಿಸಿ
ಸಹಿಸುವದೊಂದೆ ದಾರಿ
ಕಾಲನಣಂತಿಯಂತೆ ಜೀವ ಜೋಕಾಲಿ 
ಯಲಿ ತೂಗಾಡಿದೆ.
ದುಃಖ ನೀಡಿದೆ ಸುಖದ ದಿವ್ಯಾನುಭವ
ಅಥ೯ ಮಾಡಿಸಿದೆ ಬೆಳಕಿನ 
ಮಹಿಮೆಯ.
ಹೊಸವರುಷ ನೀಡುವ ಕಹಿ ಸಿಹಿಯ
ಬೇರ್ಪಡಿಸದೆ ಸವಿಯುವೆ ಯುಗಾದಿಯ ಬೇವು ಬೆಲ್ಲದ ಹಾಗೆ.
ನಿರ್ಲಿಪ್ತ ನಡೆ ನಗುವಿನ ನುಡಿ
ನನ್ನದಾಗಲಿ.

No comments:

Post a Comment