Thursday, August 30, 2012

ನಂಬಿ ಕೆಡೋಣ ಬನ್ನಿ


        ನಂಬಿ ಕಟ್ಟವರಿಲ್ಲ  ಎಂಬ ದಾಸರ ವಾಣಿ ವರ್ತಮಾನದಲ್ಲಿ ಹೇಗೆ ಮಾರಾಯರೇ ನಂಬುವುದು. ಏನನ್ನು,ಯಾರನ್ನು,ಯಾಕೆ ಎಂಬ ಪ್ರಶ್ನೆಗಳು ನಿತ್ಯ ಸುಳಿದಾಡುತ್ತಿರುವಾಗಲೇ ನಂಬುತ್ತಲೇ ಹೋಗುತ್ತೇವೆ.

          ಇದು ಯಾರೋ ನ್ನ ವಿಷಯಕ್ಕೆ ತುಂಬಾ ಎಡವಟ್ಟಾಗುತ್ತಲಿದೆ.  ನಾನಂತು ನಂಬಿ  ಕೆಡುತ್ತಲೇ  ಇದ್ದೇನೆ.  ನನ್ನ ಆಪ್ತರೊಬ್ಬರು ಪದೇ,  ಪದೇ  ಚುಡಾಯಿಸುತ್ತಾ ಇರುತ್ತಾರೆ.  ಮೊನ್ನೆ ಅವನನ್ನು ನಂಬಿ ಏನೋ ಮಾಡಿದ್ದಿರಲ್ಲ ಅವನು ಇನ್ನು ನಮಗೆ ‘ಗುನ್ನಾ’ ಇಟ್ಟಿಲ್ಲವಾ? ಎನ್ನುತ್ತಿರುವಾಗಲೇ ಅವರಿಂದ ಗುನ್ನಾ ಇಡಿಸಿಕೊಂಡಿರುವುದು ಹಳೆಯ ಮಾತಾಗಿರುತ್ತದೆ.

          ಯಾವುದೇ ವ್ಯವಸ್ಥೆಯಲ್ಲಿ ನಾವಿರಲಿ ಅಲ್ಲಿ ನಮ್ಮನ್ನು ನಂಬಿಸಿ ಮೋಸ ಮಾಡುವವರ ದಂಡೇ ಇರುತ್ತದೆ.  ಅವರು ಮೋಸ ಮಾಡಬಹುದು ಎಂಬ ಅನಗತ್ಯ ಗುಮಾನಿ ಇಟ್ಟುಕೊಡರೆ ಕೆಲಸ ಮಾಡುವುದಾದರೂ ಹೇಗೆ?   ಇದಕ್ಕೆ ಅಂತಿಮ ಉತ್ತರವಿರುವುದಿಲ್ಲ.  ಅನುಭವದಿಂದ  ಪಾಠ ಕಲಿಯಬೇಕು.  ಆದರೆ ಅಂತಹ ಕಹಿ ಎಷ್ಟು ಬಾರಿ ತಿನ್ನಬೇಕು, ಎಷ್ಟು ಪ್ರಮಾಣದಲ್ಲಿ  ತಿನ್ನಬೇಕು ಎಂಬುದನ್ನು ನಾವು ನಿರ್ಧರಿಸಬೇಕು. 

          Once up on a time  ಎಂಬ ಪದ್ಯದಲ್ಲಿ ವಿವರಿಸಿದಂತೆ, glad to meet you  ಎಂದು ಪರಿಚಯವಾದವರು very bad ಆಗಿ ಚೆನ್ನಾಗಿ ಇರಿಯುತ್ತಾರೆ.     ಇದನ್ನು ಸಹಿಸಿಕೊಳ್ಳುವ ತಾಕತ್ತು ನಮಗಿದ್ದರೆ ಮೂರ್ಖರ ಹಾಗೆ ನಂಬಬೇಕು, ನಂಬಿ ಕಟ್ಟ ಮೇಲೆ ಹಾಕಿದ ಚೂರಿಯ ನೋವ ಸಹಿಸಬೇಕು.

          ಆತ್ಮಸಾಕ್ಷಿ, ಅಹಂಕಾರ, ಉದ್ವೇಗ, ವೈಯುಕ್ತಿಕ  ಅವಿವೇಕ ಈ ರೀತಿ ಅವಘಡಗಳಿಗೆ ಕಾರಣ ಎಂದು ಅಂದುಕೊಂಡು ನನ್ನನ್ನು ನಾನೇ ದೂಷಿಸಿಕೊಳ್ಳಲು ಆರಂಭಿಸಿ ಮೊದಲ ಪಾಠ ಕಲಿತಿದ್ದೇನೆ.

          ಕೇವಲ ವೈಯಕ್ತಿಕ ದೋಷಾರೋಪವು ಆತ್ನಹತ್ಯೆಯಾಗಬಾರದು ಎಂಬ ಪರಮ ಸತ್ಯವನ್ನು ಈಗೀಗ ನನ್ನ ನಿರ್ಲಿಪ್ತ ಸ್ವಭಾವದ ಗುರುಗಳಾದ ಡಾ: ಆರ್. ರಾಮಪ್ರಿಯಾ ಕಲಿಸುತ್ತಿದ್ದಾರೆ.  ಎರಡು ದಶಕಗಳ ಸಾಮಾಜಿಕ ಜೀವನ ಈ ಪಯಣದಲ್ಲಿ ಭೇಟಿಯಾದ ಸುಮಾರು ಜನ, ಕಳೆದು ಕೊಂಡ ಹಣ, ನಸುನಗುತ್ತಲೇ ಕೊಳ್ಳಿ ಇಟ್ಟವರು ನನ್ನನ್ನೊಮ್ಮೆ ಮೂರ್ಖನನ್ನಾಗಿಸಲು ಬಯಸಲಿಲ್ಲ.  ನನ್ನಷ್ಟಕ್ಕೆ ನಾನೇ ಮೂರ್ಖನಾದೆ.

          ಅವರು ನನಗೆ ತುಂಬಾ ಆತ್ಮೀಯರು, ತುಂಬಾ ಒಳ್ಳೆಯವರು ಎಂದು ಯಾರನ್ನಾದರೂ ಪರಿಚಯಿಸುವ ಮುನ್ನ, ಅದನ್ನು ಒಪ್ಪಿಕೊಳ್ಳವ ಮುನ್ನ ಸಾವಿರ ಬಾರಿ ಅಲೋಚಿಸಬೇಕು.

          ಅವರೇನು ನಮ್ಮನ್ನು ಗೆಳೆಯರು, ಆತ್ಮೀಯರು ಎಂದು ಘೋಷಿಸಿ ಕೊಂಡಿರುವುದಿಲ್ಲವಲ್ಲ.  ನಾವು ಅವರನ್ನು ಆತ್ಮೀಯರು ಅಂದುಕೊಂಡಂತೆ, ನಮ್ಮನ್ನು ಅವರು ಆತ್ಮೀಯರು ಎಂದು ಅಂದುಕೊಡಿರಬೇಕಲ್ಲ ಎಂಬ ಸಣ್ಣ  ಅಂತರದ ಅನುಮಾನ ನಮ್ಮಲ್ಲಿ ಮೂಡದ ಹೊರತು ಇದಕ್ಕೆ ಪರಿಹಾರವೆಂಬುದಿಲ್ಲ.

          ಬದುಕಿನ ಪಯಣ ಹತ್ತು – ಹಲವು ಅನುಭವಗಳನ್ನು ನೀಡಿ ಪಾಠ ಕಲಿಸುತ್ತದೆ.  ಹಾಗೆ ಹಾಗಂತ ಬರೀ ಪಾಠ ಕಲಿಯುತ್ತಾ ಪೆಟ್ಟು ತಿನ್ನುತ್ತಾ ಹೋಗುವುದರಲ್ಲಿ ನಮ್ಮ ಆಯುಷ್ಯವೇ ಮುಗಿದು ಹೋದರೆ? ಎಂಬ ಸಣ್ಣ ಎಚ್ಚರಿಕೆ ನಮ್ಮಲ್ಲಿರಲಿ ಎಂಬುದೇ ನನ್ನ ಅಂತಿಮ ನಿರ್ಣಯ.

          ಬಾಲ್ಯದಲ್ಲಿ ಕಾರಡಗಿಯಲ್ಲಿ, ಕಾಲೇಜು ದಿನಗಳಲ್ಲಿ ಧಾರವಾಡದಲ್ಲಿ ಉದ್ಯೋಗ ದಿನಗಳಲ್ಲಿ ಗದುಗಿನಲ್ಲಿ, ಈಗ ಬೆಂಗಳೂರಿನಲ್ಲಿ ನನಗೆ ಪರಿಚಯವಾದವರ ಸಂಖ್ಯೆ ಹತ್ತುಸಾವಿರ ಗಡಿಯನ್ನು ದಾಟಿರಬಹುದು.  ನನ್ನ ಮೊಬೈಲ್ ಫೋನ್ ಬುಕ್ ನಲ್ಲಿಯೇ ನಾಲ್ಕು ಸಾವಿರ ಜನರಿದ್ದಾರೆ.

          ಆದರೆ ಅದರಲ್ಲಿ ಎಷ್ಟು ಜನ ನನಗಾಗಿ ಮಾತನಾಡುತ್ತಾರೆ, ಅವರ ಕೆಲಸಕ್ಕಾಗಿ ಮಾಡುತ್ತಾರೆ ಎಂಬ ಕಟು ವಾಸ್ತವವನ್ನು ಅವಲೋಕಿಸಿದಾಗ ನೂರರ ಸಂಖ್ಯೆಯನ್ನು ನಾವು ತಲುಪುವುದಿಲ್ಲ. ಸಾಕಲ್ಲ ಇಷ್ಟು ಬದುಕಿನ ಪಯಣದ ಗೆಳೆಯರನ್ನು ಅಳೆದು ತೂಗಿ ಅರಿತುಕೊಳ್ಳಲು  ಇಷ್ಟೆಲ್ಲ ಸುಧೀರ್ಘ ಪಯಣದಲ್ಲಿ ಆತ್ಮೀಯರ ಪಟ್ಟಿ ಉಳಿಸಿಕೊಂಡವರ ಸಂಖ್ಯೆ ಹತ್ತನ್ನು ದಾಟುವುದಿಲ್ಲ.

          ಅದಕ್ಕೆ ನೀವು ನನ್ನಂತೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿರಿ ನನ್ನ ಹಾದಿ ನೀವು ತುಳಿಯದಿದ್ದರೆ ಮಾತ್ರ ನೀವು ಬುದ್ಧಿವಂತರು!.

No comments:

Post a Comment