Saturday, August 25, 2012

ನಿಲ್ಲದ ಉಸಿರಾಟವೆಂಬ ಬರಹ


ಬರಹ ನಿಂತಾಗ ಉಸಿರು ನಿಂತ ಅನುಭವ. ಬದುಕಿನಲ್ಲಿ ಏನೇನೋ ಪಲ್ಲಟಗಳು. ಬೆಂಗಳೂರು ವಿಶ್ವವಿದ್ಯಾಲಯ ಸೇರಿದಾಗ ಸಂಭ್ರಮ ಇತ್ತು. ನಿಯೋಜನೆ ಅನುಮತಿಗಾಗಿ ಅನುಭವಿಸಿದ ಯಾತನೆ ದಾಖಲಿಸಲು ಹಿಂಸೆ ಎನಿಸುತ್ತದೆ. ಕಷ್ಟ ಪಟ್ಟು ವಿ.ವಿ.ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಆರಂಭಿಸಿದ್ದು ಆಯಿತು............................

ಈಗ ಮತ್ತೊಂದು ಹೊಸ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಈ ಹೊಸ ಜವಾಬ್ದಾರಿ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಒಂದು ರೀತಿಯ ಹೆರಿಗೆ ನೋವು.. ಅನುಭವಿಸುವುದರಲ್ಲಿಯೂ ಥ್ರಿಲ್ ಇದೆ.
ಏನೇ ಇರಲಿ ಇನ್ನು ಮಂದೆ ಲೇಖನಿ ಹಿಡಿದು ಇಲ್ಲಿ ಹಾಜರಾಗುತ್ತೇನೆ. ಈ ಅಂತರದಲ್ಲಿ ಅನೇಕ ಮಹತ್ತರ ಸಂಗತಿಗಳು ಘಟಿಸಿವೆ. ಯಾವ ಮುಲಾಜಿಲ್ಲದೆ ಹೇಳಿಕೊಳ್ಳುವ ಮುಕ್ತ ವಾತಾವರಣ ಈ ಬ್ಲಾಗ್ ದುನಿಯಾದಲ್ಲಿದೆ.
ಉಸಿರಾಟ ಕ್ರಿಯೆಯಂತೆ ಬರಹ ನಿಲ್ಲುವುದಿಲ್ಲ. ನಿಲ್ಲಬಾರದು ಕೂಡಾ!.

No comments:

Post a Comment