Tuesday, March 9, 2010

76 ನೇಯ ಸಾಹಿತ್ಯ ಸಮ್ಮೇಳನದ ಸಾವಿರದ ನೆನಪ ಹನಿಗಳು.
ಅಂದುಕೊಂಡದ್ದಕ್ಕಿಂತಲೂ ಸಮ್ಮೇಳನ ಯಶಸ್ವಿಯಾಗಿದೆ. ಸೋತಿದ್ದರೆ ನೂರಾರು ಕಾರಣ ಕೊಡಬಹುದಿತ್ತು. ಆದರೆ ಈಗ ಗೆದ್ದುಬಿಟ್ಟಿದ್ದೇವೆ. ಹೀಗಾಗಿ ಖುಷಿ ಪಡುವುದೊಂದೆ ನಮ್ಮ ಕೆಲಸ. ಯಶಸ್ಸನ್ನು ನಿಧಾನವಾಗಿ ಸಂಭ್ರಮಿಸುತ್ತಿದ್ದೇವೆ.
ಅನೇಕರು ಕೇಳುತ್ತಲೇ ಇದ್ದಾರೆ------- ಇಷ್ಟೊಂದು ಯಶಸ್ಸಿಗೆ ಕಾರಣ ಏನಿರಬಹುದು ಎಂದು?
ನಮ್ಮ ಪೂರ್ವಯೋಜನೆ, ಪೂರ್ವ ತಯಾರಿ ಬಗ್ಗೆ ಯಾರಾದರು ಕೇಳಿದರೆ ಸಂಕೋಚವಾಗುತ್ತದೆ. ಪೂರ್ವತಯಾರಿ ಆಗಬೇಕಾದಷ್ಟು ಆಗಿರಲಿಲ್ಲ ಎಂಬುದು ಅಷ್ಟೇ ಸತ್ಯ. ಆದರೆ ನೀರಿಕ್ಷೆ ಮೀರಿದ ಯಶಸ್ಸು ಸಿಕ್ಕಿದ್ದು ನಮ್ಮ ಸುದೈವ!
ಮಾಧ್ಯಮ ಮಿತ್ರರಿಗೆ, ಸಾಹಿತ್ಯಾಸಕ್ತರಿಗೆ ತಮಾಷೆಯಾಗಿ ಹೇಳಿದೆ---- ನೋಡಿ ಇದು ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಸರಿಯಾಗಿ ಅಭ್ಯಾಸ ಮಾಡದೇ ಬಂದ ಹಾಗೆ ಆಗಿದೆ. ಪರೀಕ್ಷೆ ಚೆನ್ನಾಗಿ ಬರೆಯುವ ಮನಸ್ಸೇನೊ ಇತ್ತು ಆದರೆ ಓದಲು ಸಮಯ ಸಿಗಲಿಲ್ಲ. ಸುದೈವದಿಂದ ಪ್ರಶ್ನೆ ಪತ್ರಿಕೆ ಸರಳವಾಗಿತ್ತು. ಸಮಥðವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿ gÁåAಕ ಬಂತು ಎಂಬಂತಾಗಿದೆ ನಮ್ಮ ಪಾಡು. ಏನೇ ಆಗಲಿ ಈಗ ಗೆಲುವು ನಮ್ಮದು.
ಈ ಗೆಲುವಿಗೆ ಅನೇಕರು ಪ್ರಾಮಾಣಿಕವಾಗಿ, ಆಸ್ಥೆಯಿಂದ ದುಡಿದಿದ್ದಾರೆ. ಪ್ರವಾಹ ಸಂಕಷ್ಟದಿಂದ ಸಮ್ಮೇಳನ ಮುಂದೂಡಿದಾಗ ಎಲ್ಲರಿಗೂ ಆತಂಕ. ಹೇಗಾದರೂ ಆಗಲಿ ಎಂಬ ನಿಲುವು. ಕೇವಲ 15 ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶ್ರಮಿಸಿದರೆ, ನಾಗರಿಕರು, ಸಾಹಿತ್ಯಾಸಕ್ತರು ಶಾಸಕ ಮಿತ್ರರಾದ ಶ್ರೀಶೈಲಪ್ಪ ಬಿದರೂರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಅವರ ಮುಂಚುಣಿಯಲ್ಲಿ ಶ್ರಮಿಸಿದರು. ಊಟದ ಉಸ್ತುವಾರಿ ನಿರ್ವಹಿಸಿದ ವ್ಯಾಪಾರೋದ್ಯಮಿ ಸ್ನೇಹಿತರ ಕಾರ್ಯ ಅಭಿನಂದನೀಯ. ಪ್ರತಿದಿನ ಒಂದು ಲಕ್ಷ ಜನರಿಗೆ ಊಟ, ಶುದ್ಧವಾದ ಕುಡಿಯುವ ನೀರನ್ನು ನಿರಾಂತಕವಾಗಿ ಪೂರೈಸಿದ್ದರಿಂದಲೇ ಸಮ್ಮೇಳನ ಯಶಸ್ವಿಯಾಗಿದೆ.
ವಸತಿ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಾಧ್ಯಮ ಸ್ನೇಹಿತರ ಸಹಕಾರಕ್ಕೆ ನಾವು ಋಣಿಯಾಗಿದ್ದೇವೆ.
ಆದ ಸಣ್ಣ - ಪುಟ್ಟ ದೋಷಗಳನ್ನು ಲೆಕ್ಕಿಸದೇ ಸಕಾರಾತ್ಮಕ ಸಂಗತಿಗಳನ್ನು ಬಿಂಬಿಸಿದ್ದಕ್ಕಾಗಿ, ಜನ ಹೆಚ್ಚು ಸೇರಲು ಕಾರಣವಾಯಿತು. ಎಲ್ಲರೂ ಪತ್ರಿಕೆಗಳ ಅಭಿಪ್ರಾಯಕ್ಕೆ ಕಾಯುತ್ತಾಇದ್ದರು. ಎರಡು ಹಾಗೂ ಮೂರನೇ ದಿನ ಹೆಚ್ಚು ಜನ ಪ್ರವಾಹ ಹರಿದು ಬರಲು ಮಾಧ್ಯಮ ವರದಿಗಳೇ ಕಾರಣ.
ಈ ಬಾರಿ ಬ್ಲಾಗ್ ಮೂಲಕವು ಅನೇಕ ಮಿತ್ರರು ಸಮ್ಮೇಳನವನ್ನು ಕಾಲಕಾಲಕ್ಕೆ ವರದಿ ಮಾಡಿದ್ದಾರೆ.
ನಲ್ವತ್ತಕ್ಕೂ ಹೆಚ್ಚು ಉಪಸಮಿತಿಗಳು, ಇಪ್ಪತ್ತೆರೆಡು ಸರಕಾರಿ ಇಲಾಖೆಯವರ ಸಮಿತಿಗಳು ತುಂಬಾ ಪರಿಶ್ರಮ ಪಟ್ಟಿದ್ದಾರೆ.
ಈಗ ಒಂದು ವಾರದ ನಂತರ ನಮ್ಮ ನಾಡಿನ ಹಿರಿಯ ಸಂಪಾದಕರು ಒಂದೆರಡು ತಕರಾರುಗಳನ್ನು ಎತ್ತಿದ್ದಾರೆ. ಅವು ಸಮಂಜಸವೆನಿಸಿದರೂ ಉತ್ತರ ಕೊಡುವುದು ಅನಿವಾರ್ಯವೆನಿಸುತ್ತದೆ. ನನ್ನ ನಂತರದ ಲೇಖನಗಳಲ್ಲಿ ನಮ್ರವಾಗಿ ಪ್ರತಿಕ್ರಿಯಿಸುತ್ತೇನೆ. ಸಮ್ಮೇಳನಾಧ್ಯಕ್ಷರಿಗೆ ಸಲ್ಲಿಸಿದ 11,11,111 (ಹನ್ನೊಂದು ಲಕ್ಷ ಹನ್ನೊಂದು ಸಾವಿರ ನೂರ ಹನ್ನೊಂದು ರೂಪಾಯಿಗಳು) ಕಾಣಿಕೆ ಬಗ್ಗೆ ಸಣ್ಣ ಚರ್ಚೆ ನಡೆದಿದೆ.
ನಾವು ಕೆಲವು ಸ್ನೇಹಿತರು ತುಂಬಾ ಚರ್ಚಿಸಿ ಅನಿವಾರ್ಯವೆನಿಸಿದ್ದರಿಂದ ಹೆಚ್ಚು ಎನಿಸಬಹುದಾದ ಮೊತ್ತವನ್ನು ನೀಡಿದ್ದೇವೆ. ಈಗ ಅದನ್ನು ಸ್ವಿಕರಿಸಿದವರಿಗೆ ಕಿರಿ,ಕಿರಿ ಅನಿಸುವ ಮಾತುಗಳನ್ನು ಆಡುವುದು, ಯಾಕೋ ಸರಿ ಅನಿಸುತ್ತಿಲ್ಲ. ಈ ಕುರಿತು ಶ್ರೀಮತಿ ಗೀತಕ್ಕ ಅವರು ನೊಂದುಕೊಳ್ಳುವುದು
ಬೇಡ. ನಮಗೆ ಅಗತ್ಯವೆನಿಸಿದ್ದನ್ನು ನಾವು ಪಡೆದುಕೊಂಡಾಗ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಅಧ್ಯಕ್ಷರಿಗೆ ಇದೇ ಮೊತ್ತದ ಹಣ ಕೊಡಬೇಕಾದ ಅನಿವಾರ್ಯತೆ ಬರಲಿಕ್ಕಿಲ್ಲ. ಅದರ ಅಗತ್ಯವೂ ಇಲ್ಲ. ಕೊಡುವುದನ್ನು ನಾವು ಪ್ರೀತಿಯಿಂದ ಕೊಟ್ಟಿದ್ದೇವೆ. ಅದು ಸದ್ಭಳಕೆಯಾಗಲಿ ಎಂಬ ಆಶಯ ನಮ್ಮದು.

No comments:

Post a Comment