Saturday, March 27, 2010'ಕಾಲ'ನ ಮಹಿಮೆಯಲ್ಲಿ ನಾವು-ನೀವು
'ಸಿದ್ದು ಕಾಲ'ಕ್ಕೆ ಬೇಡಿಕೆ ಶುರು ಆಗಿದೆ ಎಂಬ ಖುಷಿ. ಕಮೆಂಟ್ಸ ಕಾಲಂನ್ನು ಸದಾ ಸೊನ್ನೆಗಿಟ್ಟಿರುವ ಬಿಜಿ ಓದುಗರು ಫೋನಾಯಿಸಿ ನೇರವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವುದು ತಂತ್ರಜ್ಞಾನಕ್ಕೊಂದು ನಿದರ್ಶನ. ಎಲ್ಲವೂ fast ಆಗಬೇಕು. ಅನಿಸಿದ್ದನ್ನು ತಕ್ಷಣ ತಿಳಿಸಬೇಕೆನ್ನುವ ಧಾವಂತದಿಂದ ಫೋನಾಯಿಸುವ ಹವ್ಯಾಸ ಪ್ರಾರಂಭವಾಗಿದೆ.
'ಕಾಲ' ಎಂದರೇನು ಎಂಬುದು ಎಲ್ಲರ ಸಹಜ ಪ್ರಶ್ನೆ. ನಮ್ಮ ಮಾತು, ವಿಚಾರಗಳಲ್ಲಿ ಸಹಜವಾಗಿ ನುಸುಳುವ ಪದ 'ಕಾಲ'. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ, ಯಾರಾದರು ಬಹಳ ಅಟ್ಟಹಾಸದಿಂದ ಮೆರೆದರೆ ಅಯ್ಯೋ ಬಿಡ್ರಿ ಅವರದೊಂದು ಕಾಲ ಉರಿತಾರೆ ಅಂತ ಲೇವಡಿ ಮಾಡುತ್ತೇವೆ.
ತೀರಾ ನೋವಿನಲ್ಲಿದ್ದಾಗ ಅಯ್ಯೋ ನಮಗೊಂದು ಕಾಲ ಬರಬಹುದು ಎಂದು ಸಮಾಧಾನಿಸಿಕೊಳ್ಳುತ್ತೇವೆ. ಏನಾದರು ಕಾಂಟ್ರೊವರ್ಸಿಯಲ್ ಘಟನೆ ನಡೆದಾಗ ಎಲ್ಲ ವನ್ನು ಕಾಲ ನಿರ್ಧರಿಸುತ್ತದೆ ಎನ್ನುತ್ತಾ ನಿರ್ಣಯವನ್ನು ಕಾಲನ ಅಣತೆಗೆ ಬಿಡುತ್ತೇವೆ.
ಹೀಗೆ, ಎಲ್ಲ ವಿಚಾರಲಹರಿಗಳಲ್ಲಿ ನುಗ್ಗುವ 'ಹಿತಕರ' ಪದ 'ಕಾಲ'ವನ್ನು ನನ್ನ ಬ್ಲಾಗ್ ಗೆ tittle ಕೇಳಿದಾಗ ತಕ್ಷಣ 'ಸಿದ್ದು ಕಾಲ' ಇರಲಿ ಎಂದೆ.
ಈಗ ನನಗೆ ಒಂದು ರೀತಿಯ ಸಕಾರಾತ್ಮಕ ನೆಮ್ಮದಿ, ನನ್ನ ನಿತ್ಯದ ಬವಣೆಗಳನ್ನು ಹಂಚಿಕೊಳ್ಳುವ 'ಕಾಲ' ಕೂಡಿಬಂತಲ್ಲ ಎಂದು. ಅನೇಕ ಬೇಗುದಿಗಳನ್ನು ಅನಿವಾರ್ಯ ವಾಗಿ ಸಹಿಸಿಕೊಂಡು ವಿಲಿ,ವಿಲಿ ಒದ್ದಾಡುತ್ತೇವೆ. ಹಂಚಿಕೊಳ್ಳಲು ಮನಸ್ಸಾಗುವುದಿಲ್ಲ ಅನ್ನುವುದಕ್ಕೆ, ಹಂಚಿಕೊಳ್ಳುವಷ್ಟು ಆತ್ಮೀಯರು ಸಿಗುವುದಿಲ್ಲ, ಸಿಕ್ಕರೂ 'ಏನ್ರಿ ನಿಮ್ಮದು, ನಿಮ್ಮದು ಬರೀ ಗೊಣಗಾಟ, ಗೋಳಾಟವಾಯಿತು' ಎಂದು ಮಾರುದ್ದ ದೂರ ಸರಿಯುತ್ತಾರೆ. ಹಾಗಂತ ಎಲ್ಲ ವಿಷಯಗಳನ್ನು ಸಹಿಸಿಕೊಳ್ಳಲು ನಾವು ನಂಜುಂಡರಲ್ಲವಲ್ಲ. ಕಾರಿಕೊಂಡರೆ ಬೇರೆಯವರು ಸಹಿಸಿಕೊಳ್ಳಬೇಕಲ್ಲ? ನುಂಗದ ಕಾರದ ಈ ತೊಳಲಾಟಕ್ಕೆ ಪರಿಹಾರ ನನಗೆ ಬ್ಲಾಗ್ ನಲ್ಲಿ ಸಿಕ್ಕಿತು ಎಂಬ ಸಂಭ್ರಮಕ್ಕಾಗಿ ನನ್ನ ಬ್ಲಾಗ್ ಗೆ ಕಾಲ ಎಂದು ಕರೆದೆ. ಆದರಿದು ಅಹಂಕಾರದ, ಮೆರೆಯುವ ಕಾಲವಂತೂ ಅಲ್ಲ, ಎಲ್ಲವನ್ನು ಪ್ರಾಂಜಲವಾಗಿ ತೋಡಿಕೊಳ್ಳುವ ಕಾಲ ಎಂಬ ನೆಮ್ಮದಿ.
ಪ್ರತಿ ದಿನ ಕನಿಷ್ಠ ಹತ್ತಾರು ಮನಸ್ಸುಗಳು ನನ್ನ ಮಾತುಗಳನ್ನು ಗಂಭಿರವಾಗಿ ಆಲಿಸುತ್ತವೆ, ನಂತರ ಸ್ಪಂದಿಸುತ್ತಾರೆ ಎಂಬ ನಿರಾಳ ಭಾವ. ಮನುಷ್ಯರ ಮಧ್ಯ ಒಂದು unseen ಪ್ರವಾಹವಿರುತ್ತದೆ. ಅದನ್ನು ಅರಿಯಲು ಪರಸ್ಪರ ಮಾತಾಡಬೇಕು, ಸಂಪರ್ಕದಲ್ಲಿರಬೇಕು ಎಂಬ condition ಇಲ್ಲ. ಅದು ತನ್ನಿಂದ ತಾನೆ under current ತರಹ ಹರಿದಾಡುತ್ತದೆ. ಆ ಹರಿದಾಟ ನಮಗೆ ಅರಿವಿಲ್ಲದಂತೆ ಸಮಾಧಾನ ನೀಡುತ್ತದೆ. ಕೆಲವರು ಆಗಾಗ ಹೆಳುತ್ತಾರೆ ನೀವು ಹೇಳುವ ಮಾತುಗಳು ನಮ್ಮ ಅನುಭವಕ್ಕೂ ಬಂದಿವೆ ಆದರೆ ಹೇಳಲಾಗಿರಲಿಲ್ಲ. ನೀವು ಬರೆದದ್ದನ್ನು ಓದಿದ ಮೇಲೆ ಸಮಾಧಾನವಾಯಿತು ಎಂದಾಗ ನಮಗೂ ಸಮಾಧಾನವಾಗುತ್ತದೆ.
ಈಗಿರುವ ನನ್ನ 'ಕಾಲ'ದಲ್ಲಿ ಅತೀಯಾದ ಆತ್ಮಪ್ರಶಂಶೆ, ಆತ್ಮರತಿ ಇರದ ಹಾಗೆ ಎಚ್ಚರವಹಿಸುವ ಜವಾಬ್ದಾರಿ ಇದೆ. ವೈಯಕ್ತಿಕ ದ್ವೇಷಾಸೂಯೆಗಳನ್ನು ಕಾರಿಕೊಳ್ಳುವುದು ಅಷ್ಟೇನು positive ಅಲ್ಲ. ನೋಯಿಸಿದವರ ಹೆಸರನ್ನು ಪ್ರಸ್ತಾಪಿಸಿದೆ, ಯಾರನ್ನು ಅನಗತ್ಯ ಪೂರ್ವಾಗ್ರಹ ಭಾವನೆಯಿಂದ target ಮಾಡಬಾರದು ಎಂಬ ಎಚ್ಚರ ಇಟ್ಟುಕೊಂಡೇ ಸಂಯಮದಿಂದ ನೀವು ಕೊಟ್ಟ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ಹಗುರವಾಗುತ್ತೇನೆ.
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬಿಂದಾಸ್ ಆಗಿ share ಮಾಡಿಕೊಳ್ಳಿ. ಕಮೆಂಟ್ಸ್ ಕಾಲ '0' ಇಡಬೇಡಿ. ದುಬೈ, ಅಮೇರಿಕಾ, ಇಂಗ್ಲೆಂಡಿನಿಂದ ಫೋನಾಯಿಸಿ ಭಾವನೆಗಳನ್ನು ಹಂಚಿಕೊಂಡ ಆತ್ಮೀಯರಿಗೆ ಕೃತಜ್ಞನಾಗಿದ್ದೇನೆ. ಇಂಗ್ಲೆಂಡಿನ ಲಿವರ್ ಪೂಲ್ ನಲ್ಲಿರುವ ಸೋದರ ರಾಜು, ಸವಿತಾ ಬ್ಲಾಗ್ ಓದಿ ಖುಷಿ ಆಗಿದ್ದಾರೆ. ಜಗತ್ತಿನಲ್ಲಿರುವ ಎಲ್ಲ ಕನ್ನಡಿಗರನ್ನು ತಲುಪುವ ಸಂಭ್ರಮಕ್ಕೆ ಮತ್ತೊಮ್ಮೆ ಋಣಿಯಾಗಿದ್ದೇನೆ. Have a nice day.

3 comments:

  1. neevu blog prarambha madiddu tumba khushi needide.21ne shatamanadalli computer use madadiddare adu illiteracy.nimma manada matugalannu tumba santoshadinda hanchikolluttiddiri.nimma barevuva tuditakke blog ondu vedikeyannu odagiside,namage khushi needide.nimma vichara,chintane,baraha,kavite,kathe,ellavannu blognalli saviyalu avaksha sikkiddakke we r happy.

    ReplyDelete
  2. ನಿಮ್ಮ ಮೊದಲ paragraph ಓದಿ ಕೈಯಲ್ಲಿದ್ದ mobile ಒಳಗಿಟ್ಟೆ ಸರ್. :-) ನಿಮ್ಮ ಯಶಸ್ವಿ ನಿರೂಪಣೆ ಹಿಂದೆ ಇರುವ ಕಹಿ ಯ ಬಗ್ಗೆ ಬೇಸರವಿದೆ. ಆದರೆ ಒಂದು ಮಾತು ನಿಜ. ನಿಮ್ಮ ನಿರೂಪಣೆ ಬಗೆಗೆ ಅವರಿಗೆ ಗೊತ್ತಿಲ್ಲದಿದ್ದರೂ ಅವರ ಆತ್ಮಸಾಕ್ಷಿಗೆ ಗೊತ್ತಿರುತ್ತೆ. ನಿಮ್ಮ ತಪ್ಪೆ ಹುಡುಕಲು ಕುಳಿತಿರೋ ಅವರು ಅದನ್ನು ಒಪ್ಪಲು ಕಷ್ಟ ಪಾಪ. ಆದರೆ ನಿಮ್ಮ ಅಭಿಮಾನಿಗಳಿಗೆ ನಿಮ್ಮಬಗ್ಗೆ ಗೊತ್ತೇ ಇದೆಯಲ್ಲ.

    ReplyDelete
  3. nimma vishwasakke thanks.Bareyuvadu sarala ashte kathina kuda.Nirantara touch nallirona

    ReplyDelete