Monday, May 9, 2016

ಬಸವ ಜಯಂತಿಯ ಶರಣುಗಳು

ಕಳೆದ ಎರಡುವರೆ ದಶಕಗಳಿಂದ ನಿತಾಂತವಾಗಿ ವಚನ ಸಾಹಿತ್ಯವನ್ನು ಓದುತ್ತಾ , ಸಾವಿರಾರು ವೇದಿಕೆಗಳಲ್ಲಿ ಮಾತನಾಡಿದ್ದೇನೆ ಆದರೂ ತಿಳುವಳಿಕೆ ಸಾಲದು. ತೀರಾ ಇತ್ತೀಚೆಗೆ ಅಲ್ಲಮ, ಅಕ್ಕ , ಚನ್ನಬಸವಣ್ಣ ಅರ್ಥವಾಗತೊಡಗಿದ್ದಾರೆ , ಎಷ್ಟು ಓದಿದರೂ ಸಾಲದೆನಿಸುತ್ತದೆ.
ಕೆಲವರು ಬಸವಾದಿ ಶರಣರ ತತ್ವಗಳ ವ್ಯಾಪಾರಿಕರಣದಲ್ಲಿಯೂ ಯಶಸ್ವಿಯಾಗಿದ್ದಾರೆ.
ಸಂಪೂರ್ಣ ಅರ್ಥಮಾಡಿಕೊಂಡು ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡಾಗ ಮಹಾಮನೆ ಅನುಭವ ಮಂಟಪದಲ್ಲಿನ ಬಸವಾದಿ ಶರಣರ ಶ್ರಮ ಸಾರ್ಥಕವಾಗುತ್ತದೆ. ಆದರೆ ಯಾಕೋ ಹಾಗಾಗುತ್ತಿಲ್ಲ ಎಂಬ ವಿಶಾದದ ಮಧ್ಯೆ ನಿತ್ಯ ಸ್ಮರಿಸುವ ಆರಾಧ್ಯ ದೈವ , ಮಹಾ ಮಾನವತಾವಾದಿ ಬಸವಣ್ಣ ಹಾಗೂ ಅನುಭವ ಮಂಟಪದ ಸಾಧನೆಯನ್ನು ಮೆಲುಕು ಹಾಕಿದೆ .
ಎಂದೆಂದೂ ಬತ್ತದ ಸೆಲೆ , ದೀನರಿಗೆ ನೆಲೆ ನೀ ಬಸವಣ್ಣ.
ಎಲ್ಲರಿಗೂ ಬಸವ ಜಯಂತಿಯ ಶರಣುಗಳು.
----ಸಿದ್ದು ಯಾಪಲಪರವಿ.

Wednesday, April 13, 2016

ಕನಸುಗಳು

ಕನಸುಗಳೇ ಹಾಗೇ ಅವುಗಳನ್ನು ವ್ಯಾಖ್ಯಾನಿಸುವುದು ತುಂಬಾ ಕಷ್ಟ.

ಇಂದು ನಸುಕಿನಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ದರ್ಶನ ಒಂದು ರೀತಿಯ ಪ್ರಸನ್ನತೆಯನ್ನುಂಟು ಮಾಡಿತು....
     ---ಸಿದ್ದು ಯಾಪಲಪರವಿ

Sunday, March 27, 2016

March end hot

Check out @yapalaparvi's Tweet: https://twitter.com/yapalaparvi/status/714327504849231872?s=09

Thursday, March 24, 2016

ಕಾಮ ದಹನ

ಕಾಮ ದಹನ

ಕಾಮದೋಕುಳಿಯ
ರಂಗು ರಂಗಿನ ಚಲ್ಲಾಟ
ಹೇಗೆ ಸಹಿಸಲಿ ನಾ
ಈ ಕಚಗುಳಿಯಾಟ ನಿತ್ಯ
ನಿಟ್ಟುಸಿರು ಏಕಾಂತದಿ ನಿನ್ನ
ಸೇರಲೆಂದು.
ಉಕ್ಕುವ ಭಾವನೆಗಳ ರಮಿಸುವುದು
ಹೇಗೆ ?
ಅನ್ನ-ಚಿನ್ನದಾತುರವ ಹೇಗೋ
ಸಹಿಸೇನು ಆದರೆ ತಾಳಲಾರೆ
ಒಲುಮೆಯ ಮಿಲನೋತ್ಸವದ
ವಿರಹವ.
ಅಪ್ಪಳಿಸಿ ಅಬ್ಬರಿಸುವ ಎದೆಯುಸಿರಿನ
ತಾಕಲಾಟವ ಅದುಮಿಡಲಾರೆ.
ನೀ ಸಿಕ್ಕರೆ ಎಲ್ಲಿಲ್ಲದ ಹಬ್ಬದೂಟ
ಇಂಚಿಂಚು ಅಗೆದು ಬಗೆಯುವಾಸೆ.
ನಿನ್ನೆದೆಯ ಶಿಖರವನೇರಿ
ಲೀಲಾಜಾಲವಾಗಿ ಹರಿದಾಡಿ
ಹೆಡೆ ಎತ್ತಿ ಅಪ್ಪಳಿಸಿ ಹಿಂಡಿ
ಹಿಪ್ಪೆ ಮಾಡುವ ಪರಿಯಲಿ
ನಿ�ನ್ನ ಹಾರಾಟ-ಚೀರಾಟ
ಗಳ ಗಾಳದಿ ಸಿಕ್ಕು
ಸಂಭ್ರಮಿಸುವಾಸೆ.
ಭುವಿಯ ಮೇಲೆ ಎಲ್ಲಿಯೂ
ಸಿಗದ ಸವಿಸುಖ ನಿನ್ನ
ಮೈ-ದಾನದ ಈ ಹೋರಾ�ಟದಲಿ
ಸೋಲು-ಗೆಲುವಿನ ಪ್ರಶ್ನೆ
ಇನ್ನಿಲ್ಲ .
ಗೆಲ್ಲುವ ಆತುರದಿ ಸೋಲುವ
ಭೀತಿಯ ಲೆಕ್ಕಿಸದೇ ಹಾರಾಟ
ಚೀರಾಟ.
ಒಮ್ಮೆ ಮತ್ತೊಮ್ಮೆ ಬಗೆ ಬಗೆಯ
ರಂಗಿನಾಟವ ಆಡುತ್ತ...ಆಡುತ್ತ...
ವಿರಮಿಸುವ ಮುನ್ನ ಮೈತುಂಬಾ
ಹರಿದಾಡಿದ ಹೆಡೆ...
ನಿಧಾನ...ನಿಧಾನದಿ ಕಳಚುವ
ಮುನ್ನ ಸಿಗದ ಮುನ್ಸೂಚನೆಗೆ
ತತ್ತರಿಸುವ ಮೈ-ಮನಕೆ
ಅಲ್ಪ ವಿರಾಮ...
ಮತ್ತೆ ಮತ್ತೊಮ್ಮೆ ಹೀಗೆ
ಮಗುದೊಮ್ಮೆ ಬೇಕೇ
ಬೇಕೆಂಬ ಇಂಗದ ದಾಹ
ನಿನ್ನೊಲುಮೆಯ ಸವಿಸುಖದ
ನಿತ್ಯ ಮರೆಯಾಗದ
ರಂಗು ರಂಗಿನ ಈ
ಹೋಳಿಯಾಟ
ಒಲುಮೆಯ ಸವಿಯೂಟ.
---ಸಿದ್ದು ಯಾಪಲಪರವಿ

Wednesday, March 23, 2016

ಕಾವಲುಗಾರ

ಕಾವಲುಗಾರ

ಬುದ್ಧ ಬಸವ ಅಲ್ಲಮರ
ವಾರಸುದಾರ ನಾನು
ನನ್ನಷ್ಟು ಶ್ರೀಮಂತ
ಬೇರೆ ಯಾರೂ ಇಲ್ಲವೇ
ಇಲ್ಲ.
ಬುದ್ಧ ಬಿಟ್ಟು ಹೋದ
ಶಾಂತಿ ಸರೋವರಕೆ ಬೆಲೆ
ಕಟ್ಟುವ ತಾಕತ್ತು ಯಾರಿಗಿದೆ?
ಬಸವ ಬಿತ್ತಿ ಬೆಳೆದ ಸೌಹಾರ್ದ
ಎಂಬ ವಿಶಾಲ  ತೋಟವ ಉತ್ತಿ
ಬಿತ್ತಿ ಸಾಗುವಳಿ ಮಾಡಲಾದೀತೆ?
ಅಲ್ಲಮನ ಜ್ಞಾನ ಭಂಡಾರದಲಿ
ತೆರೆದು ಕೈಮಾಡಿ ಕರೆಯುತಿರುವ
ಕೋಟಿ ಕೋಟಿ ಅಸಂಖ್ಯ ಶಬ್ದಗಳ
ಅಳೆದು ತೂಗಿ ಅರಿಯುವ ಅನನ್ಯ
ಜ್ಞಾನಿ ಎಲ್ಲಿದ್ದಾನೆ?
ನಾನೂ ಅಷ್ಟೇ
ಯಾರಾದರೂ ಅರ್ಹರು
ಬಂದರೆ ಅವರವರ
ಪಾಲಿನದು ಅವರಿಗೆ ನೀಡಿ
ಮುಂದೆ ಸಾಗಲು ಕಾಯುತ್ತಲಿರುವೆ.
ಬುದ್ಧ ಬಸವ ಅಲ್ಲಮರ ಮಹಾ
ಸಂಪತ್ತಿನ ಕೇವಲ  ಕಾವಲುಗಾರ
ನಾ...ನು...
----ಸಿದ್ದು ಯಾಪಲಪರವಿ

Thursday, March 17, 2016

Global Warming

ಇಂದಿನ ಜಾಗತಿಕ ತಾಪಮಾನವನ್ನು ನೋಡಿದರೆ ಭಯಾನಕವೆನಿಸುತ್ತದೆ.
ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟರ ಕೈಗೆ ಸಿಕ್ಕು ಪರಿಸರ ನಾಶವಾಗುತ್ತಲೇ ಇದೆ.
ಹಣ ಇದ್ದರೆ ಏನೆಲ್ಲಾ ಕೊಂಡುಕೊಳ್ಳಬಹುದು ಎಂಬುದು ಕೇವಲ ಭ್ರಮೆ !
ಎಷ್ಟೋ ಸಾವಿರ ಕೋಟಿ ಸುರಿದರೂ ಮನುಷ್ಯ ದಿಢಿರೆಂದು ನೀರನ್ನು , ಆಹಾರ ಪದಾರ್ಥಗಳನ್ನು ಸೃಷ್ಟಿಸಲಾರ ಎಂಬ ಸತ್ಯ ಗೊತ್ತಿದ್ದರೂ ಅವನ ಅನಾದರ , ಅಜ್ಞಾನಕ್ಕೆ ಕೊನೆಯಿಲ್ಲದಾಗಿದೆ.
ಪರಿಸರ ಇಲಾಖೆ ,ಲೆಕ್ಕವಿಲ್ಲದಷ್ಟು ಹುಟ್ಟಿಕೊಂಡಿರುವ ಸೇವಾಸಂಸ್ಥೆಗಳು ಕಣ್ಣಾ ಮುಚ್ಚಾಲೆ ಆಟದಲ್ಲಿವೆ ಇಲ್ಲಿಯೂ ಅತಿಯಾದ ಹಿಪೊಕ್ರಸಿ ತುಂಬಿ ತುಳುಕುತ್ತಲಿದೆ.
ನಮ್ಮ ಹೋರಾಟಗಳು , ನಾವು ಮಾಡುವ ಭಾಷಣಗಳು , ಮಾಧ್ಯಮಗಳ ಸಂವೇದನೆಯಿಲ್ಲದ ಸಂವಾದಗಳು , ಸಹಿಷ್ಣತೆ,ಅಸಹಿಷ್ಣತೆಯ ಕೆಸರಾಟ ಎಲ್ಲವೂ ಕೇವಲ ಕಾಳಜಿರಹಿತ ಹಿಪೊಕ್ರಸಿ !!
ಆದರೆ ಈ ನಾಟಕ ಎಷ್ಟು ದಿನ ?
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಗಾರರಿಕೆಯ ಜವಾಬ್ದಾರಿಯುತ ಅಬ್ಬರವಿಲ್ಲದ  ಹೋರಾಟವಾಗಬೇಕು.
ಪ್ರತಿ ಬೇಸಿಗೆಯ ತಾಪಮಾನ ಹೆಚ್ಚಾದಾಗ ಈ ರೀತಿಯ ಸ್ಮಶಾನ ವೈರಾಗ್ಯ ಉಂಟಾಗದೇ ನಿರಂತರ ಪ್ರಜ್ಞೆಯಾಗಬೇಕು. ಧಾರ್ಮಿಕ ಮುಖಂಡರುಗಳು , ಸಾಮಾಜಿಕ ಸಂಘಟನೆಗಳು , ವಿದ್ಯಾಸಂಸ್ಥೆಗಳು ಪರಿಸರ ರಕ್ಷಣೆಗೆ ಮುಂದಾಗಬೇಕು. ವಿಶ್ವಮಾನವತೆ ಹಾಗೂ ಪರಿಸರ ರಕ್ಷಣೆ ನಮ್ಮ ಜವಾಬ್ದಾರಿಯಾದಾಗ ಎಲ್ಲಾ ಅಸಹಿಷ್ಣತೆ ಇಲ್ಲದಾಗುತ್ತದೆ.
ಈ ಸತ್ಯ ಎಲ್ಲರಿಗೂ ಗೊತ್ತಿದ್ದರೂ ತಮ್ಮದೇ ವಾದ ಗೆಲ್ಲಲಿ ಎಂಬ ಹಟಮಾರಿತನವಿದೆ.
ಎಡ-ಬಲ ವಿಚಾರವಾದಿಗಳ ಮೂಲ ಧೋರಣೆ ಪರಿಸರ ರಕ್ಷಣೆ ಹಾಗೂ ವಿಶ್ವಮಾನವತೆಯಾಗಬೇಕು ಇಲ್ಲದಿದ್ದರೆ ನಾವ್ಯಾರು ಇರುವುದಿಲ್ಲ ನಮ್ಮ ವಾದವೂ ಇರುವುದಿಲ್ಲ.
ಪ್ರಗತಿಪರ, ಮುಂದುವರೆದ ರಾಷ್ಟ್ರಗಳ ಪರಿಸರ ಪ್ರಜ್ಞೆ ಹಾಗೂ ಧೋರಣೆಯನ್ನೊಮ್ಮೆ ಗಮನಿಸಿ ಪಾಠ ಕಲಿಯೋಣ...

---ಸಿದ್ದು ಯಾಪಲಪರವಿ

Saturday, March 12, 2016

Journey of Life

Journey from 1965 to 2015
ನಮ್ಮನ್ನು ನಾವು ಆರಾಧಿಸುವ ಕಾಲ ಬಂತಲ್ಲ ಎಂಬ ವಿಷಾದವಿದ್ದರೂ ಒಳ್ಳೆಯ ಉದ್ದೇಶಕ್ಕಾಗಿ ಮುಖ ಪುಸ್ತಕವನ್ನು ಹಾಗೂ ವಾಟ್ಸ್ಆ್ಯಾಪ್
ಬಳಸಿಕೊಳ್ಳಬಹುದೆನಿಸಿದೆ.  ನಮಗನಿಸಿದ್ದನ್ನು , ಯಾರೂ ಪ್ರಕಟಿಸದೇ ಇದ್ದುದನ್ನು ಇಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು.
ಇಲ್ಲಿಯೂ TRP ತನಗರಿವಿಲ್ಲದಂತೆ ಕೆಲಸ ಮಾಡುತ್ತದೆ. ಪ್ರಾಮಾಣಿಕವಾಗಿದ್ದರೆ ರಾಶಿ , ರಾಶಿ ಲೈಕುಗಳು,ಕಮೆಂಟುಗಳು ಜೊಳ್ಳಿದ್ದರೆ ಹಾರಿಸಿ ಬಿಡುತ್ತಾರೆ.
ಒಳ್ಳೆಯದು ಕೆಟ್ಟದ್ದು ಎಲ್ಲ ಕಡೆ ಇದೆ!