Thursday, March 24, 2016

ಕಾಮ ದಹನ

ಕಾಮ ದಹನ

ಕಾಮದೋಕುಳಿಯ
ರಂಗು ರಂಗಿನ ಚಲ್ಲಾಟ
ಹೇಗೆ ಸಹಿಸಲಿ ನಾ
ಈ ಕಚಗುಳಿಯಾಟ ನಿತ್ಯ
ನಿಟ್ಟುಸಿರು ಏಕಾಂತದಿ ನಿನ್ನ
ಸೇರಲೆಂದು.
ಉಕ್ಕುವ ಭಾವನೆಗಳ ರಮಿಸುವುದು
ಹೇಗೆ ?
ಅನ್ನ-ಚಿನ್ನದಾತುರವ ಹೇಗೋ
ಸಹಿಸೇನು ಆದರೆ ತಾಳಲಾರೆ
ಒಲುಮೆಯ ಮಿಲನೋತ್ಸವದ
ವಿರಹವ.
ಅಪ್ಪಳಿಸಿ ಅಬ್ಬರಿಸುವ ಎದೆಯುಸಿರಿನ
ತಾಕಲಾಟವ ಅದುಮಿಡಲಾರೆ.
ನೀ ಸಿಕ್ಕರೆ ಎಲ್ಲಿಲ್ಲದ ಹಬ್ಬದೂಟ
ಇಂಚಿಂಚು ಅಗೆದು ಬಗೆಯುವಾಸೆ.
ನಿನ್ನೆದೆಯ ಶಿಖರವನೇರಿ
ಲೀಲಾಜಾಲವಾಗಿ ಹರಿದಾಡಿ
ಹೆಡೆ ಎತ್ತಿ ಅಪ್ಪಳಿಸಿ ಹಿಂಡಿ
ಹಿಪ್ಪೆ ಮಾಡುವ ಪರಿಯಲಿ
ನಿ�ನ್ನ ಹಾರಾಟ-ಚೀರಾಟ
ಗಳ ಗಾಳದಿ ಸಿಕ್ಕು
ಸಂಭ್ರಮಿಸುವಾಸೆ.
ಭುವಿಯ ಮೇಲೆ ಎಲ್ಲಿಯೂ
ಸಿಗದ ಸವಿಸುಖ ನಿನ್ನ
ಮೈ-ದಾನದ ಈ ಹೋರಾ�ಟದಲಿ
ಸೋಲು-ಗೆಲುವಿನ ಪ್ರಶ್ನೆ
ಇನ್ನಿಲ್ಲ .
ಗೆಲ್ಲುವ ಆತುರದಿ ಸೋಲುವ
ಭೀತಿಯ ಲೆಕ್ಕಿಸದೇ ಹಾರಾಟ
ಚೀರಾಟ.
ಒಮ್ಮೆ ಮತ್ತೊಮ್ಮೆ ಬಗೆ ಬಗೆಯ
ರಂಗಿನಾಟವ ಆಡುತ್ತ...ಆಡುತ್ತ...
ವಿರಮಿಸುವ ಮುನ್ನ ಮೈತುಂಬಾ
ಹರಿದಾಡಿದ ಹೆಡೆ...
ನಿಧಾನ...ನಿಧಾನದಿ ಕಳಚುವ
ಮುನ್ನ ಸಿಗದ ಮುನ್ಸೂಚನೆಗೆ
ತತ್ತರಿಸುವ ಮೈ-ಮನಕೆ
ಅಲ್ಪ ವಿರಾಮ...
ಮತ್ತೆ ಮತ್ತೊಮ್ಮೆ ಹೀಗೆ
ಮಗುದೊಮ್ಮೆ ಬೇಕೇ
ಬೇಕೆಂಬ ಇಂಗದ ದಾಹ
ನಿನ್ನೊಲುಮೆಯ ಸವಿಸುಖದ
ನಿತ್ಯ ಮರೆಯಾಗದ
ರಂಗು ರಂಗಿನ ಈ
ಹೋಳಿಯಾಟ
ಒಲುಮೆಯ ಸವಿಯೂಟ.
---ಸಿದ್ದು ಯಾಪಲಪರವಿ

No comments:

Post a Comment