ಇತ್ತೀಚಿಗೆ ಹತ್ತಾರು ಬಾರಿ ನಾನೇ ಟೈಪ್ ಮಾಡಲು ಪ್ರಯತ್ನಿಸಿ ವಿಫಲನಾಗಿದ್ದೆ ಆದರೆ ಇಂದು ಹಟಕ್ಕೆ ಬಿದ್ದಾಗ ಕಲಿಯಲು ಸಾಧ್ಯವಾಯಿತು
Wednesday, May 21, 2014
ಗಾಂಧಿ ಸ್ಮರಣೆ
ಹಿಂಸೆ ,ಅತ್ತ್ಯಾಚಾರ,ಅನ್ಯಾಯ
ಅತ್ಯಂತ ಸೂಕ್ಷ್ಮವಾಗಿ ನೀ ಜನಿಸಿದ
ನಾಡಿಂದಲೇ ದಾಳಿ ಆರಂಭಸಿವೆ.
ನಿನ್ನ ಕೊಂದವರದು ಯಾರದೋ
ಹೆಗಲೇರಿ ದೇಶ ಆಳೋ ಹುನ್ನಾರ
ಪ್ರಚಾರದಬ್ಬರದಲಿ ವಾಸ್ತವ
ಮಂಗ ಮಾಯ.
ನಿನ್ನ ಹೇ ರಾಮ್ ನಿನ್ನೊಂದಿಗಡಗಿ
ಹಿಂದೂ ರಾಮ ಅವತರಿಸಿದ್ದಾನೆ.
ಅರೆಪ್ರಜ್ಞಾ ಸ್ಥಿತಿ ನಿನ್ನನ್ನು ನಿನ್ನ
ಮೌಲ್ಯ ಗಳನ್ನು ಗಾಳಿಗೆ ತೂರಿದೆ.
ಪ್ರತಿ ಊರಿನ ಪ್ರತಿಮೆ ಗಳಲಿ
ನಸು ನಗುತ ಕುಳಿತ ನಿನ್ನ ಹಾಗೆ
ನಾನು ಕಲ್ಲಾಗದೆ ಮೌನವಾಗಿದ್ದೇನೆ
ನಿನ್ನ ಜಯಂತಿಯ ನೆಪದಲಿ.
ಅತ್ಯಂತ ಸೂಕ್ಷ್ಮವಾಗಿ ನೀ ಜನಿಸಿದ
ನಾಡಿಂದಲೇ ದಾಳಿ ಆರಂಭಸಿವೆ.
ನಿನ್ನ ಕೊಂದವರದು ಯಾರದೋ
ಹೆಗಲೇರಿ ದೇಶ ಆಳೋ ಹುನ್ನಾರ
ಪ್ರಚಾರದಬ್ಬರದಲಿ ವಾಸ್ತವ
ಮಂಗ ಮಾಯ.
ನಿನ್ನ ಹೇ ರಾಮ್ ನಿನ್ನೊಂದಿಗಡಗಿ
ಹಿಂದೂ ರಾಮ ಅವತರಿಸಿದ್ದಾನೆ.
ಅರೆಪ್ರಜ್ಞಾ ಸ್ಥಿತಿ ನಿನ್ನನ್ನು ನಿನ್ನ
ಮೌಲ್ಯ ಗಳನ್ನು ಗಾಳಿಗೆ ತೂರಿದೆ.
ಪ್ರತಿ ಊರಿನ ಪ್ರತಿಮೆ ಗಳಲಿ
ನಸು ನಗುತ ಕುಳಿತ ನಿನ್ನ ಹಾಗೆ
ನಾನು ಕಲ್ಲಾಗದೆ ಮೌನವಾಗಿದ್ದೇನೆ
ನಿನ್ನ ಜಯಂತಿಯ ನೆಪದಲಿ.
ದೀಪಾವಳಿ
ದೀಪಾವಳಿ
ಭರವಸೆಯ ಮೂಟೆ ಹೊತ್ತು
ಸಾಗುತಿದೆ ಜೀವ ಪಯಣ
ದೀಪದಿ ದೀಪ ಹಚ್ಚುತ
ಕತ್ತಲೆ ಕಳೆದಂತೆ .
ಒಮ್ಮೆ ಸಂಕ್ರಮಣ
ಮಗದೊಮ್ಮೆ ಹೋಳಿ
ಮತ್ತೆ ಯುಗಾದಿ ಸಡಗರ
ಈಗ ದೀಪ ಹಣತೆಯ
ಸಾಲುಗಳ ದಿಬ್ಬಣ.
ಬದುಕ ಕತೆಯೂ ಹಬ್ಬಗಳಂತೆ
ಅದಲು ಬದಲು
ಸಿಹಿ ಕಹಿ ಗಳ ಮಧುರ ಮಿಲನ.
ಕತ್ತಲೆಯಲಿ ಬೆಳಕ ಹಚ್ಚೋಣ
ಇರುಳಲಿ ಹಗಲ ಹುಡುಕೋಣ
ಬೆಳಕ ಸಂಭ್ರಮದಿ ಕತ್ತಲ ಮರೆಯದಿರೋಣ
ನಿದ್ರೆ ಯಲಚ್ಚರದಿ
ಮೌನದಲಿ ಶಬ್ದಗಳ ಹುಡುಕುತ
ಬಂದುದನೆದುರಿಸಿ ಸಂತಸದಿ
ಕಾಲದ ಬಂಡಿ ಸಾಗಿಸೋಣ
ಭರವಸೆಯ ಮೂಟೆ ಹೊತ್ತು
ಸಾಗುತಿದೆ ಜೀವ ಪಯಣ
ದೀಪದಿ ದೀಪ ಹಚ್ಚುತ
ಕತ್ತಲೆ ಕಳೆದಂತೆ .
ಒಮ್ಮೆ ಸಂಕ್ರಮಣ
ಮಗದೊಮ್ಮೆ ಹೋಳಿ
ಮತ್ತೆ ಯುಗಾದಿ ಸಡಗರ
ಈಗ ದೀಪ ಹಣತೆಯ
ಸಾಲುಗಳ ದಿಬ್ಬಣ.
ಬದುಕ ಕತೆಯೂ ಹಬ್ಬಗಳಂತೆ
ಅದಲು ಬದಲು
ಸಿಹಿ ಕಹಿ ಗಳ ಮಧುರ ಮಿಲನ.
ಕತ್ತಲೆಯಲಿ ಬೆಳಕ ಹಚ್ಚೋಣ
ಇರುಳಲಿ ಹಗಲ ಹುಡುಕೋಣ
ಬೆಳಕ ಸಂಭ್ರಮದಿ ಕತ್ತಲ ಮರೆಯದಿರೋಣ
ನಿದ್ರೆ ಯಲಚ್ಚರದಿ
ಮೌನದಲಿ ಶಬ್ದಗಳ ಹುಡುಕುತ
ಬಂದುದನೆದುರಿಸಿ ಸಂತಸದಿ
ಕಾಲದ ಬಂಡಿ ಸಾಗಿಸೋಣ
ದೇವಯಾನಿ
ಅಮೇರಿಕದ ಸೋಗಲಾಡಿತನವನ್ನು ತಡವಾಗಿಯಾದರು ಅರಿತುಕೊಂಡಿರುವುದೇನೋ ಸರಿ
ಆದರೆ ದೇವಯಾನಿಯನ್ನು ನೊಂದ ಮಹಿಳೆ ಎಂಬ ಅನುಭೂತಿಯಿಂದ ನೋಡಬೇಕು ಇನ್ನಾವದೋ ರೀತಿಯಿಂದಲ್ಲ.
ಆದರೆ ದೇವಯಾನಿಯನ್ನು ನೊಂದ ಮಹಿಳೆ ಎಂಬ ಅನುಭೂತಿಯಿಂದ ನೋಡಬೇಕು ಇನ್ನಾವದೋ ರೀತಿಯಿಂದಲ್ಲ.
ಹೊಸ ವರುಷ
ಹೊಸ ವರುಷ
ಉರುಳುತಲಿದೆ ವರುಷದ ಗಾಲಿ
ಹರುಷವೊ ದುಃಖವೋ ಸ್ವೀಕರಿಸಿ
ಸಹಿಸುವದೊಂದೆ ದಾರಿ
ಕಾಲನಣಂತಿಯಂತೆ ಜೀವ ಜೋಕಾಲಿ
ಯಲಿ ತೂಗಾಡಿದೆ.
ದುಃಖ ನೀಡಿದೆ ಸುಖದ ದಿವ್ಯಾನುಭವ
ಅಥ೯ ಮಾಡಿಸಿದೆ ಬೆಳಕಿನ
ಮಹಿಮೆಯ.
ಹೊಸವರುಷ ನೀಡುವ ಕಹಿ ಸಿಹಿಯ
ಬೇರ್ಪಡಿಸದೆ ಸವಿಯುವೆ ಯುಗಾದಿಯ ಬೇವು ಬೆಲ್ಲದ ಹಾಗೆ.
ನಿರ್ಲಿಪ್ತ ನಡೆ ನಗುವಿನ ನುಡಿ
ನನ್ನದಾಗಲಿ.
ಉರುಳುತಲಿದೆ ವರುಷದ ಗಾಲಿ
ಹರುಷವೊ ದುಃಖವೋ ಸ್ವೀಕರಿಸಿ
ಸಹಿಸುವದೊಂದೆ ದಾರಿ
ಕಾಲನಣಂತಿಯಂತೆ ಜೀವ ಜೋಕಾಲಿ
ಯಲಿ ತೂಗಾಡಿದೆ.
ದುಃಖ ನೀಡಿದೆ ಸುಖದ ದಿವ್ಯಾನುಭವ
ಅಥ೯ ಮಾಡಿಸಿದೆ ಬೆಳಕಿನ
ಮಹಿಮೆಯ.
ಹೊಸವರುಷ ನೀಡುವ ಕಹಿ ಸಿಹಿಯ
ಬೇರ್ಪಡಿಸದೆ ಸವಿಯುವೆ ಯುಗಾದಿಯ ಬೇವು ಬೆಲ್ಲದ ಹಾಗೆ.
ನಿರ್ಲಿಪ್ತ ನಡೆ ನಗುವಿನ ನುಡಿ
ನನ್ನದಾಗಲಿ.
Subscribe to:
Posts (Atom)