ರಮ್ಯ ಪರಿಸರದ ಪಶ್ಚಿಮ ಘಟ್ಟದ ಮಡಿಲು
ಆನೆ ಬಲಕ್ಕಾಗಿ ಪ್ರಾರ್ಥಿಸೋಣ
ಮನಸ್ಸು ಪ್ರಫುಲ್ಲವಾಗಿದ್ದರೆ ಬದುಕು ಅರ್ಥಪೂರ್ಣವೆನಿಸುತ್ತದೆ.
ನಮ್ಮ ಹಬ್ಬಗಳು , ಆಚರಣೆಗಳು ಮನಸ್ಸು ಕಟ್ಟುವ ಕ್ರಿಯೆಯಾಗಬೇಕು.
ನಮ್ಮ ಪೂರ್ವಜರು ಆನೆ ಬಲ ಕೊಡು ಎಂದು ಪ್ರಾರ್ಥಿಸುತ್ತಿದ್ದರು.
ಹಾಗೆಂದರೇನು ? ಯಾರಿಗೂ ಕೇಡು ಬಯಸದೇ ,
ಪಾಲಿಗೆ ಬಂದದ್ದು ಪಂಚಾಮೃತ ಎಂದು ನೆಮ್ಮದಿಯಿಂದ ಇರುತ್ತಿದ್ದರು.
ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಆತಂಕಗಳೂ ಹಂಚಿಹೋಗುತ್ತಿದ್ದವು.
ಈಗ ಒಂಟಿತನದ ಭಾರ ಹಾಗೂ generation gap ನಿಂದ ತತ್ತರಿಸುತ್ತೇವೆ.
ಮತ್ತೆ ಹಿಂದಿನ ವ್ಯವಸ್ಥೆಗೆ ಮರಳುವ ಅನಿವಾರ್ಯತೆಯನ್ನು ನಮ್ಮ ಹಬ್ಬಗಳು , ಹಳ್ಳಿಗಳು ನೆನಪಿಸುತ್ತವೆ.
ನನಗೀಗ ನನ್ನ ಬಾಲ್ಯವೇ ರಮ್ಯವೆನಿಸುತ್ತದೆ.
ಆದರೆ ಈಗ ಈ ಒಂಟಿ ಬದುಕಿನಲ್ಲಿ ಪರಿಸರವೇ ನಮ್ಮ ಸಂಗಾತಿ , ಏಕಾಂತದ ಧ್ಯಾನವೇ ನಮ್ಮ ಪ್ರಾಣ. ಬರಹವೇ ಸಂಗಾತಿ.
ಅವಕಾಶ ಸಿಕ್ಕಾಗ ಪರಿಸರದೊಂದಿಗೆ ಲೀನವಾಗಬೇಕು.
ಹಿರಿಯರ ಹಾಗೆ ಆ(ಆರೋಗ್ಯ)ನೆ(ನೆಮ್ಮದಿ) ಬಲಕ್ಕಾಗಿ ಪ್ರಾರ್ಥಿಸಬೇಕು .
---ಸಿದ್ದು ಯಾಪಲಪರವಿ.
No comments:
Post a Comment