Thursday, March 11, 2010

ಪ್ರೀತಿ-ಪ್ರಣಯದ ಪಿಸುಮಾತಿನ ಧ್ಯಾನ


ನನಗೀಗ ವಯಸ್ಸಾಯ್ತಾ ಹೇಗೊ? ಎಂಬ ಅನುಮಾನ ಶುರು ಆಗಿದೆ. ಬ್ಲಾಗನಲ್ಲಿ ನೀಟಾಗಿ ಪರಿಚಯ ಕೊಟ್ಟ ಮೇಲೆ ಗೊತ್ತಾಗಿರಬೇಕಲ್ಲ? ಮುಂದಿನ ತಿಂಗಳು 12ಕ್ಕೆ 45ರ ಹರೆಯ.
ಪ್ರೀತಿಯ ಅಲೆಗಳು ತಣ್ಣಗಾದವೇನೊ ಎಂದು ಆಲೋಚಿಸುವಂತಾಗುತ್ತದೆ.
ನೆರೆ ಕೂದಲು, ಊದಿಕೊಂಡ ದೇಹ, ಒತ್ತಡದ ಸ್ಥಿತಿಯಲ್ಲಿಯೂ ಪ್ರೀತಿಗೆ ಜೀವನೊತ್ಶಾಹ ತುಂಬಿ ಕೊಡುವ ಶಕ್ತಿಯಿದೆ ಎನ್ನುವದನ್ನು ಅಲ್ಲಗಳೆಯಲಾಗುವದಿಲ್ಲ. ಹಳೆಯ ನೆನಪುಗಳು, ಮಧುರವಾಗಿ ಕಳೆದ ಕ್ಷಣಗಳನ್ನು ಮೆಲಕು ಹಾಕುವ ಅವಕಾಶ ಸಿಕ್ಕಾಗ ಜೀವನೊತ್ಸಾಹ ಚಿಮ್ಮುತ್ತದೆ .
ಹೀಗೊಂದು ಖುಷಿಗೆ ಕಾರಣವಾದದ್ದು ಗೆಳತಿಯೊಂದಿಗಿನ ಸಣ್ಣ ಭೇಟಿ. ಅನಿರೀಕ್ಷಿತವಾಗಿ ಒಂದೆಡೆ ಸಿಕ್ಕ ಗೆಳತಿಯ ಕೆನ್ನೆಯ ಮೇಲಿನ ನಗುವಿನ ಮಧ್ಯ ಕಾಣಿಸಿಕೊಂಡ ಡಿಂಪಲ್ ನನ್ನ ಜೀವನೊತ್ಸಹವನ್ನು ಹೆಚ್ಚಿಸಿತು. ಹರೆಯದ ದಿನಗಳು ಧುಮಿಕಿದಂತಾಯಿತು. ಆಗ ಮನಸ್ಸಿನ ಶಕ್ತಿಯ ಅರಿವಾಯಿತು. ಅಲ್ಲಲ್ಲಿ ನೆರೆತು ಹೋದ ಕೂದಲುಗಳ ಮೇಲೆ ಆವರಿಸಿದ ಮೇಹಂದಿ ಡೈ ನನ್ನ ಕಣ್ಣಿಗೆ ರಾಚದೆ ಹಳೆ ದಿನಗಳ ಅಕೆಯ ಸೌಂದರ್ಯವೇ ಗೋಚರವಾದದ್ದು ಅಚ್ಚರಿಯೆನಿಸಿತು.
ಬಾಲ್ಯದ ಹರೆಯದ ಗೆಳೆಯರನ್ನು ವಸ್ಸಾದವರಂತೆ ಯಾಕೆ ಕಲ್ಪಿಸಲಾಗುವುದಿಲ್ಲ, ಸ್ವಿಕರಿಸಲಾಗುವುದಿಲ್ಲ ಎಂಬ ಅಚ್ಚರಿ ಕಾಡಿತು.
ಸಾಧನೆಗಳ ಹೊರೆ ಹೊತ್ತು ನಿಂತ ಗೆಳತಿಗೆ ಅಭಿನಂದಿಸುವಾಗ ಸಲಿಗೆಯ ಸೌಜನ್ಯವಿತ್ತೇ ವಿನಹ ಅನಗತ್ಯ ಗೌರವ ಭಾವ ಇರಲಿಲ್ಲ. ಆದರೂ ಆಗಾಗ ಇಣುಕುತ್ತಿದ್ದ ಮಡಿವಂತಿಕೆಯ ಅಂತರದ ಗೋಡೆ ಅಡ್ಡಿಯಾಗಲಿಲ್ಲ. ಗಂಟೆಗಟ್ಟಲೆ ಚರ್ಚಿಸಿ ಖುಷಿಯಿಂದ ಹೊರಬರುವಾಗ ಅರೆ ನನಗಿನ್ನು ವಯಸ್ಸಾಗಿಲ್ಲ!. ಜೀವನೊತ್ಸಾಹವೆನ್ನುವುದು ದೇಹದಲ್ಲಿಲ್ಲ ಮನಸ್ಸಿನಲ್ಲಿದೆ ಎಂಬ ಸತ್ಯ ನಿಚ್ಚಳವಾಯಿತು.
ಇನ್ನು ಮುಂದೆ ನನಗೆ ವಯಸ್ಸಾಗಿದೆ ಎಂದು ಆರೋಪಿಸಿಕೊಳ್ಳುವುದಿಲ್ಲ. ಜೀವನೊತ್ಸಾಹ ರಿಚಾರ್ಜ ಮಾಡಿಕೊಳ್ಳಲು ಹರೆಯದ ಗೆಳೆಯರನ್ನು ಹುಡುಕಿಕೊಂಡು ಹೋಗಲು ನಿರ್ಧರಿಸಿದ್ದೇನೆ. ನೀವು ಬರುವಿರಾ?

No comments:

Post a Comment