Wednesday, March 31, 2010

ವಿಕಸನ ಮಾಲಿಕೆ







ಗೆಳೆಯರು ನನ್ನ ಭಾವನೆಗಳಿಗೆ ಸ್ಪಂದಿಸಿ ವ್ಯಕ್ತಿತ್ವ ವಿಕಸನ ಮಾಲಿಕೆಗೆ ಪ್ರಶ್ನೆ ಕಳಿಸಿದ್ದಾರೆ.
ವ್ಯಕ್ತಿಯ ದೌರ್ಬಲ್ಯ ಹಾಗೂ ಶಕ್ತಿಯನ್ನು ತಿಳಿಯುವ ಬಗೆ ಹೇಗೆ? ಯಾವುದನ್ನು ನಾವು ದೌರ್ಬಲ್ಯ ಎಂದು ಕರೆಯಬಹುದು?
* ಈ ಪ್ರಶ್ನೆ ನನ್ನನ್ನು ಕಾಡುತ್ತಿದ್ದ ಕಾರಣದಿಂದಲೇ ಬುದ್ಧಿ-ಭಾವಗಳ ಭ್ರಮೆಯಲ್ಲಿ ತೇಲಾಡುತ್ತಿದ್ದೆ. ಒಳಗೊಳಗೆ ಅನೇಕ ಗೊಂದಲಗಳಿದ್ದವು. ನನ್ನಲ್ಲಿಯ ಗೊಂದಲಗಳಿಗೆ ಪರಿಹಾರ ಕಂಡುಹಿಯಲು ಹೆಣಗಾಡಿ ಈಗ ಭಾಗಶ: ಯಶಕಂಡಿದ್ದೇನೆ. ಓದು, ಚರ್ಚೆಯ ಮೂಲಕ ಪರಿಹಾರ ನಿಮಗೂ ಸಿಗುತ್ತದೆ.
ಮನುಷ್ಯನ ದೌರ್ಬಲ್ಯವೆಂದರೆ ಮನದ ಮುಂದಿನ ಆಸೆ ಎನ್ನುತ್ತಾರೆ. ತಾತ್ವಿಕವಾಗಿ ಹೆಣ್ಣಿಗೆ ಗಂಡಿನ, ಗಂಡಿಗೆ ಹೆಣ್ಣಿನ, ಅಂದರೆ ಕಾಮ, ಹಣ - ಬಂಗಾರ ಹಾಗೂ ಆಸ್ತಿ ಭೂಮಿಯ ಮೇಲಿನ ವ್ಯಾಮೋಹವೇ ಮನದ ದೌರ್ಬಲ್ಯ ಎಂದು ಗಂಭೀರವಾಗಿ ಆರೋಪಿಸುತ್ತಾರೆ. ಅಂದರೆ ಹೊನ್ನು,ಮಣ್ಣು, ಹೆಣ್ಣು ಎಂದು ಪುರಾತನರು ವಿಶ್ಲೇಶಿಸಿದ್ದಾರೆ. ಆದರೆ ಮನುಷ್ಯ ಇವುಗಳಿಲ್ಲದೆ ಬದುಕುವುದು ಅಸಾಧ್ಯ. ಇವುಗಳನ್ನೆಲ್ಲ ನಿರಾಕರಿಸಿದವ ಮನುಷ್ಯನಾಗದೇ ಸಂತನಾಗುತ್ತಾನೆ.
ನಾವೆಲ್ಲ ಸಂತರಲ್ಲದ ಕಾರಣಕ್ಕೆ ಈ ಮೂರು ಶಕ್ತಿಗಳಲ್ಲಿ ನಾನು ಹೆಚ್ಚು ಯಾವುದಕ್ಕೆ ಮನಸೋಲುತ್ತೇನೆ, ಯಾಕೆ ಮನಸೋಲುತ್ತೇನೆ ಎಂಬುದನ್ನು ನಾವೇ ಪ್ರಾಮಾಣಿಕವಾಗಿ ವಿಶ್ಲೇಶಿಸಿಕೊಳ್ಳಬೇಕು. ಇದು ಬೇರೆಯವರ ಮುಂದೆ ಜೆ.ಎಚ್. ಪಟೇಲರ ತರಹ ಹೇಳಲಿಕ್ಕೆ ಅಗುವುದಿಲ್ಲ.
ಈ ಮೂರರ ಆಕರ್ಷಣೆಯನ್ನು ಅತೀಯಾಗಿಟ್ಟುಕೊಂಡರೆ ಕಷ್ಟವಾಗುತ್ತದೆ. ಯಾವುದಾದರು ಒಂದು normal ಆಗಿದ್ದರೆ ok. ಅದನ್ನು ನಾವೇ ಸಾರ್ವತ್ರಿಕ ದೌರ್ಬಲ್ಯವಾಗದಂತೆ ನಿಬಾಯಿಸಬೇಕು. ಒಂದು ವೇಳೆ ನಮ್ಮ ದೌರ್ಬಲ್ಯ ಸಾರ್ವತ್ರಿಕಗೊಂಡರೆ, ಚರ್ಚಿತವಾದರೆ ವ್ಯಕ್ತಿತ್ವಕ್ಕೆ ಪೆಟ್ಟು ಬೀಳುತ್ತದೆ. ಹಾಗಂತ ಇಂದಿನ ಕಾಲದಲ್ಲಿ ಅದನ್ನು ಮುಚ್ಚಿಡಲು ಆಗುವುದಿಲ್ಲ. ಇದನ್ನು ಸಮರ್ಥವಾಗಿ manage ಮಾಡುವ ಕಲೆಗಾರಿಕೆ ಬೇಕು.
ಹೀಗಾಗಿ ಖಾಸಗಿ ಸಂಗತಿಗಳ ಗೊಂದಲಗಳನ್ನು ಶಾಂತಚಿತ್ತರಾಗಿ ನಾವೇ ಆಲಿಸಬೇಕು. ನಮ್ಮ ಏರಿಳಿತದ ಭಾವನೆಗಳನ್ನು ಧ್ಯಾನಸ್ಥ ಸ್ಥಿತಿಯಲ್ಲಿ ನಾವೇ ಗಮನಿಸಿದರೆ ಪರಿಹಾರ ಸಿಕ್ಕೇ ಸಿಗುತ್ತದೆ. ಅದು ನಿಯಂತ್ರಣಕ್ಕೂ ಬರುತ್ತದೆ.
"Try to keep at least two persons happy, but one of them must be you" ಎಂಬ ಮಾತೊಂದಿದೆ. ನಮ್ಮನ್ನು ನಾವು ಸಂತೋಷದಲ್ಲಿಟ್ಟುಕೊಳ್ಳುವ ಪ್ರತಿಕ್ರಿಯೆಯಲ್ಲಿ ತೊಡಗಿಸಿದಾಗ ಒಂದು ರೀತಿಯ ಸಮಾಧಾನ ಸಿಗುತ್ತದೆ. ಬೇರೆಯವರನ್ನು ಸಮಾಧಾನಿಸುವ, ಖುಷಿಪಡಿಸುವ ಧಾವಂತದಲ್ಲಿ ನಾವು ನಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತೇವೆ.
ಹಾಗಾಗಿ ನಮಗೆ ಹೆಣ್ನು, ಮಣ್ಣು, ಹೊನ್ನು ಬೇಕು ಎಷ್ಟು ಹೇಗೆ ಯಾಕೆ ಬೇಕು ಎಂದು ಕಂಡುಕೊಳ್ಳುವ ಸಾಮರ್ಥ್ಯ ಬಂದರೆ ಸಾಕು. ಅದೇ ವಿಕಸನದ ಮೊದಲ ಹೆಜ್ಜೆ ಆಗುತ್ತದೆ. ಎಲ್ಲ ನಿರಾಕರಣೆ ಮಾಡುತ್ತೇನೆ ಎಂಬ ಬೂಟಾಟಿಕೆಯೂ ಸಲ್ಲದು. ಬೇರೆಯವರ ವಿಷಯಕ್ಕೆ ಇರುವ ಹಿಪೊಕ್ರಸಿ, ನಮ್ಮ ವಿಷಯಕ್ಕೂ ಪ್ರಾರಂಭವಾದರೆ ಕಷ್ಟ!
ಅದನ್ನು ಮೆಟ್ಟಿ ನಿಲ್ಲುವ ಪ್ರಾಮಾಣಿಕ ಪ್ರಯತ್ನ ನಮ್ಮಿಂದ ನಮಗಾಗಿ, ನಮ್ಮ ಸಂತೋಷಕ್ಕಾಗಿ ಪ್ರಾರಂಭವಾಗಬೇಕು. ದಿನದಿಂದ ದಿನಕ್ಕೆ ಮನೋನಿಯಂತ್ರಣದ process ಮನಸ್ಸಿನಲ್ಲಿ ಪ್ರಾರಂಭವಾದಾಗ ಒಂದು ದಿನ ಒಳ್ಳೆ ಪರಿಣಾಮ ಸಿಕ್ಕೆ ಸಿಗುತ್ತದೆ. ಆದ್ದರಿಂದ ನಿಮ್ಮ weakness ಯಾವುದು ಎಂದು ನೀವೇ ಕಂಡುಕೊಂಡು ಯಶಪಡೆಯಿರಿ. ಕೆಲ ದಿನ ಬಿಟ್ಟ ನಂತರ ಈ ಪ್ರಶ್ನೆಗಾಗಿ ಮತ್ತೆ ಚರ್ಚೆಮಾಡೋಣ. But you have to wait for the results.
ಇಂದಿನಿಂದಲೇ ನಿಮ್ಮ ದೌರ್ಬಲ್ಯ ಅರಿಯುವ ಕೆಲಸ ಸಾಂಗವಾಗಿ ಸಾಗಲಿ All the best.

2 comments:

  1. ಮಾನ್ಯರೇ, ಬೇರೆ ರಂಗಗಳಲ್ಲಿ ತೊಡಗಿಸಿಕೊಂಡು ನಿಮ್ಮದೇ ಆದ ಛಾಪನ್ನು ಮೂಡಿಸುತ್ತಿರುವ ನಿಮಗೆ ಅಭಿನಂದನೆಗಳು. ವಿವಿಧ ರಂಗಗಳ ನಿಮ್ಮ ಅನುಭವಗಳು ಈ ಬ್ಲಾಗಿನಲ್ಲಿ ಲೇಖನಗಳಾಗಿ ಮೂಡಲಿ , ವಿವಿದ ವಿಷಯಗಳನ್ನು ತಮ್ಮಿಂದ ನಿರೀಕ್ಷಿಸಿರುವೆ.ಕತೆ,ಕವನಗಳ ಜೊತೆಯಲ್ಲಿ 'ಎತ್ತಣ ಮಾಮರ ಎತ್ತಣ ಕೋಗಿಲೆ' ನಮ್ಮ ಭಾಗದಿಂದ ಬಂದಂತಹ ಪ್ರವಾಸ ಕಥನಗಳಲ್ಲಿಯೇ ಗಮನಸೆಳೆಯುವಂತಹದ್ದು. ವ್ಯಕ್ತಿತ್ವ ವಿಕಸನ ಕುರಿತ ಲೇಖನಗಳು,ಪ್ಪ್ರಾಕ್ಟಿಕಲ್ ಮಾರ್ಗದರ್ಶನ ಎಲ್ಲ ಆಸಕ್ತರಿಗೆ ಸಿಗಲಿ ಎಂದು ಹಾರೈಸುವೆ
    - ಸಿರಾಜ್ ಬಿಸರಳ್ಳಿ
    ಕನ್ನಡನೆಟ್.ಕಾಂ

    ReplyDelete