Tuesday, March 9, 2010

76 ನೇ ಸಾಹಿತ್ಯ ಸಮ್ಮೆಳನ ಒಂದು ನೆನಪು




ಹೌದು ಇವರಿಲ್ಲದಿದ್ದರೆ ನಮ್ಮ ಆಲೆಮನೆ ತಂಡ ಗದುಗಿನಲ್ಲಿ ಪಡಬಾರದ ಕಷ್ಟ ಪಡಬೇಕಿತ್ತು. ಇವರ ಹೆಸರು ಸಿದ್ದು ಯಾಪಲಪರವಿ. ಗದುಗಿನಲ್ಲಿ ಇಂಗ್ಲೀಷ್ ಪ್ರೊಫೆಸ್ಸರ್. ಆದರೆ ಸಾಹಿತ್ಯ ಕೃಷಿ ಕನ್ನಡದಲ್ಲಿ. ನಾನು ವಿಕ್ರಾಂತ ಕರ್ನಾಟಕಕ್ಕೆ ಬರೆಯುತ್ತಿದ್ದ ಕಾಲಕ್ಕೆ ಸಣ್ಣ ಪರಿಚಯವಾಗಿದ್ದ ನಮ್ಮಿಬ್ಬರ ಸ್ನೇಹ ಗದುಗಿನ ಟ್ರಿಪ್ ಆದಮೇಲೆ ಆತ್ಮೀಯತೆಗೆ ಬೆಳೆದಿದೆ. ನಾವು ಹೋಗುವಷ್ಟರಲ್ಲಿ ನಮ್ಮ ತಂಡಕ್ಕೆ, ಎರಡು ರೂಮು, ಓಡಾಡಲಿಕ್ಕೆ ಒಂದು ಗಾಡಿ, ಊಟ, ಮಾಧ್ಯಮ ಕೇಂದ್ರದ ವ್ಯವಸ್ಥೆ ಎಲ್ಲವನ್ನೂ ಮಾಡಿಕೊಟ್ಟು ಮನೆಯ ಅಥಿತಿಗಳಂತೆ ನಮ್ಮನ್ನು ನೋಡಿಕೊಂಡ ಗದುಗಿನ ನಮ್ಮ ಗಾಡ್ ಫಾದರ್ - ಸಿದ್ದು ಯಾಪಲಪರವಿ ಸಾಹೇಬರು!
ತುಂಬಾನೇ ಥ್ಯಾಂಕ್ಸು ಸಾರ್!
ಸಮ್ಮೇಳನದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಮನೆಯ ಹಬ್ಬದಂತೆ ಪಾಲ್ಗೊಂಡವರು ಸಿದ್ದು ಯಾಪಲಪರವಿ ಅವರು. ಸಮ್ಮೇಳನದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ನಿರೂಪಣೆ ಸಿದ್ದು ಅವರದೇ. ಎಲ್ಲೂ ಬೋರಾಗದಂತೆ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುವಂತೆ ನಡೆಸಿಕೊಟ್ಟಿದಕ್ಕೆ ಅಭಿನಂದನೆಗಳು.
- ಆದಿತ್ಯ

2 comments:

  1. ಬೆಂಗಳೂರಿನ ನುಡಿನಮನ ತಂಡದ ಗೆಳೆಯರು ತುಂಬಾ ಪ್ರೀತಿಯ ಮಾತುಗಳನ್ನು ಬರೆದಿದ್ದಾರೆ.ಅವರ ಸಕಾರ ಮಾತುಗಳಿಗೆ ನಾನು ರುಣಿ

    ReplyDelete
  2. ಕಾರ್ಯಕ್ರಮದ ನೀರೂಪಣೆ ನನಗಷ್ಟೆ ಅಲ್ಲ ನಮ್ಮ ಮನೆಯವರಿಗೆಲ್ಲ ತುಂಬ ಹಿಡಿಸಿದೆ.... ಸ್ಪಷ್ಟವಾದ ಕನ್ನಡ ಅಲ್ಲಲ್ಲಿ ಬಳಸಿದ ವಚನದ ಸಾಲುಗಳು ....ಇವನ್ನೆಲ್ಲ ನೋಡಿ ಮನೆಯವರು ಇವರ ಕವಿತೆಗಳೇಕೆ ಪ್ರಕಾಶನ ಮಾಡಲಿಲ್ಲ ಎಂಬ ಕೊರಗು... ಮುಂದಿನ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ೊಂದು ಪುಸ್ತಕ ಬರಲಿ ಎಂದು ಹಾರೈಸುತ್ತೇನೆ.

    ತಮ್ಮ
    ವಿರೇಶ ಹಿತ್ತಲಮನಿ

    veeresh.ah@gmail.com

    ReplyDelete