ಸಮ್ಮೇಳನಕ್ಕೆ ಕ್ಷಣಗಣನೆ..............
76ನೆಯ ಅಖಿಲಭಾರತ ಸಮ್ಮೇಳನ ಇನ್ನೇನು ಬಂದೇ ಬಿಟ್ಟಿತು. ಗಣ್ಯ ಮಹನೀಯರ ಹಾಗೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳ ವಸತಿ ವ್ಯವಸ್ಥೆಗಾಗಿ ಶ್ರಮಿಸುವಾಗ ಒಂದು ತರಹ ಖುಷಿ, ಆತಂಕ ಎರೆಡೂ ಆಯಿತು. ಇಪ್ಪತ್ತು ಸಾವಿರ ಜನ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಸ್ವಾಗತ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತದ ಅಧಿಕಾರಿಗಳ ನೆರವಿನಿಂದ ರೂಪಿಸಲಾಗಿದೆ.
ಗದುಗಿನಂತಹ ಸಣ್ಣ ಪಟ್ಟಣದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದು ಸುಲಭದ ಮಾತಲ್ಲ. ಆದರೂ ನಗರದ ಎಲ್ಲ ವಸತಿ ನಿಲಯಗಳಲ್ಲಿ, ಖಾಸಗಿ ಹಾಗೂ ಸರಕಾರಿ ಹಾಸ್ಟೆಲಗಳಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.
ಗಣ್ಯ ಮಹನೀಯರ ವಸತಿಗಾಗಿ ಗದಗ, ಹುಬ್ಬಳ್ಳಿ ಹಾಗೂ ಅಕ್ಕ ಪಕ್ಕದ ಊರುಗಳಲ್ಲಿನ ವಸತಿ ನಿಲಯಗಳನ್ನು ತಗೆದುಕೊಳ್ಳಲಾಗಿದೆ. ಸಾವಿರಕ್ಕೂ ಹೆಚ್ಚು ಶಿಕ್ಷಕರು ಲೈಸನಿಂಗ್ ಅಧಿಕಾರಿಗಳಾಗಿ ಕತðವ್ಯ ನಿವðಹಿಸಲು, ಆತಿಥ್ಯ ನೀಡಲು ಮುಂದಾಗಿದ್ದಾರೆ.
ಸರಳ ಊಟದ ವ್ಯವಸ್ಥೆಯೂ ಆಗಿದೆ. ಮೂರು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಕನ್ನಡಿಗರ ಸೇವೆಗಾಗಿ ಸಜ್ಜಾಗಿದ್ದಾರೆ. ಶಾಂತಪ್ರಿಯ ಕನ್ನಡಿಗರು ಸಹನೆ ಪ್ರೀತಿಯಿಂದ ಆತಿಥ್ಯ ಸ್ವೀಕರಿಸಿ ನಮ್ಮನ್ನು ಖುಷಿಗೊಳಿಸಿರಿ ಎಂದು ವಿನಂತಿಸಿಕೊಳ್ಳುವೆ.
ಸಮ್ಮೇಳನ ನಿಜವಾದ ಅಥðದಲ್ಲಿ 'ಜಾತ್ರೆ'ಯೇ ಆಗಿದೆ. ತಾಂತ್ರಿಕ ಯುಗದಲ್ಲಿ ನಾವು ಪರಸ್ಪರ ಹೆಚ್ಚು ಹತ್ತಿರವಾದಂತೆ ಅನಿಸಿದರೂ ದೈಹಿಕವಾಗಿ ದೂರಾ.......ಗುತ್ತಲಿದ್ದೇವೆ. ಅಕ್ಷರ ಪ್ರೇಮಿಗಳನ್ನು ಒಂದುಗೂಡಿಸುವ ಸಮ್ಮೇಳನದಲ್ಲಿ ಆಗುವ ಸಣ್ಣ ಪುಟ್ಟ ಅನಾನುಕೂಲತೆಗಳನ್ನು ಲೆಕ್ಕಿಸದೆ, ನಮ್ಮ ಅಹಂ ಮರೆತು ಸಂತೋಷದಿಂದ ಕಾಲ ಕಳೆಯೋಣ.
ಪರಮಪೂಜ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶಿವðಚನ ನೀಡುವುದು ಈ ಬಾರಿ ಸಮ್ಮೇಳನದ ವಿಶೇಷ! ಕನ್ನಡದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಭಾಷಣದ 'ಖಡಕ್'ನ್ನು ಸವಿಯಲೆಂದೇ ಅನೇಕ ಕನ್ನಡಾಭಿಮಾನಿಗಳು ಆಗಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಮ್ಮ ಭೇಟಿ ಕೇವಲ ಈ ಮೂಲಕವೇ ಆಗಬೆಕು. ನಾಳೆಯಿಂದ ಖಂಡಿತಾ ಸೆಲ್ ನೆಟವಕðಸಿಗಲು ಸಾಧ್ಯವೇ ಇಲ್ಲ.
Father
2 months ago
No comments:
Post a Comment