Tuesday, February 23, 2010
ಸಾವðಜನಿಕ ಸಭ್ಯತೆ------ ಯಾಕೆ ಹೀಗೆ?
ಸಾವðಜನಿಕ ಬದುಕಿನಲ್ಲಿ ಕೆಲಸ ಮಾಡುವುದು ಇತ್ತೀಚಿಗೆ ಯಾಕೋ ತುಂಬಾ ಕಿರಿಕಿರಿಯೆನಿಸುತ್ತಿದೆ. ವೈಯಕ್ತಿಕ ಪರಿಶ್ರಮದಿಂದ ಏನನ್ನಾದರೂ ಸಾಧಿಸುತ್ತೇವೆ. ಅದೇ ಕಾರಣದಿಂದಾಗಿ ಮಾನ್ಯತೆಯೂ ದೊರಕಿರುತ್ತದೆ.
ದೊರಕಿರುವ ಮಾನ್ಯತೆಯನ್ನು ಅನುಭವಿಸಲು ಕೆಲವರು ಅನಗತ್ಯ ಅಡೆತಡೆ ಒಡ್ಡಲು ಪ್ರಯತ್ನಿಸುತ್ತಾರೆ. ಇಂದು ಕ.ಸಾ.ಪ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಪರಿಷತ್ತಿನ ಸ್ವಾಗತ ಸಮಿತಿಯ ಸಂಯೋಜಕನಾಗಿ ಪಾಲ್ಗೊಂಡು ಕೆಲ ಸೂಚನೆಗಳನ್ನು ನಿವೇದಿಸಿಕೊಂಡೆ. ಸಮ್ಮೇಳನದ ಯಶಸ್ಸಿಗಾಗಿ ಅದು ಅನಿವಾರ್ಯವೂ ಆಗಿತ್ತು.
ಆದರೆ ನನ್ನ ವೃತ್ತಿ ಬಾಂಧವರೊಬ್ಬರಿಗೆ ನಾನು ವೇದಿಕೆಯ ಮೇಲೆ ಕುಳಿತು, ಅಧಿಕಾರಿಗಳೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದು ಇರಿಟೇಟ್ ಆಯಿತು. ಅವನು ನಮ್ಮ ಹಾಗೆ ಉಪನ್ಯಾಸಕ ಅವನನ್ನೇಕೆ ವೇದಿಕೆ ಮೇಲೆ ಕೂಡಿಸಿದ್ದೀರಿ ಎಂದು ರಾಗ ತೆಗೆದ. ನಮ್ಮವರ ಸಣ್ಣತನಕ್ಕೆ ಹಿರಿಯ ಅಧಿಕಾರಿಗಳಿಗೆ ಅಚ್ಚರಿ. ಅವರು ಯಾವುದೇ ಪ್ರತಿಕ್ರೀಯೆ ನೀಡಲಿಲ್ಲ. ಹಾಗೇ ನಾನು ಕೂಡಾ. ಯಾಕೆಂದರೆ ಅದರ ಅಗತ್ಯ ಕಂಡು ಬರಲಿಲ್ಲ.
ನಾನು ಬರಹಗಾರನಾಗಿರುವ ಕಾರಣಕ್ಕೆ, ಪರಿಷತ್ತಿನ ಪದಾಧಿಕಾರಿಯೂ ಅಲ್ಲಿದ್ದೇನೆ, ಆ ಕ್ಷಣ ನನ್ನನ್ನು ಕೇವಲ ವೃತ್ತಿ ಬಾಂಧವನನ್ನಾಗಿ ನೋಡಬಾರದು ಎನ್ನುವ ಪರಿಜ್ಞಾನ ಇಲ್ಲದವರೊಂದಿಗೆ ಏನು ಮಾತು ಎನ್ನಿಸಿ ನಕ್ಕು ಸುಮ್ಮನಾದೆ. ಆದರೆ ಒಳ ಒಳಗೆ ನನಗೆ ಕಿರಿಕಿರಿ ಎನಿಸಿತು.
ನನ್ನ ಈ ಬೆಸರವನ್ನು ಮನದ ಮಾತಿನೊಂದಿಗೆ ಹಂಚಿಕೊಂಡು ಹಗುರಾಗೋಣವೆನಿಸಿತು. ವೃತ್ತಿ ಮತ್ಸರದ ಬಗ್ಗೆ ಕೇಳಿದ್ದೆ. ಈಗೀಗ ಅನುಭವಿಸುತ್ತಿದ್ದೇನೆ.
ಹಾಗಂತ ನಾನು ಸುಮ್ಮನಿರಲು ಸಾಧ್ಯವೇ? ಯಾರೋ ಹೊಟ್ಟೆ ಉರಿದುಕೊಂಡು ಉರುಳಾಡುತ್ತಾರೆ ಅನ್ನೋ ಹೀನ ಕಾರಣಕ್ಕೆ ನಾನೇಕೆ ಅವಕಾಶ ಕಳೆದುಕೊಳ್ಳಲಿ? ಎಂಬ ಪ್ರಶ್ನೆಗಳು ಏಳಲಾರಂಭಿಸಿವೆ. ಅದಕ್ಕೆ ಅಲ್ಲವೆ ನಮ್ಮ ಹಿರಿಯರು ನಿಂದಕರಿರಬೇಕು------- ನಂತೆ ಅಂದದ್ದು. ಆನೆ ನಡೆದದ್ದೇ ದಾರಿ ಅಂದುಕೊಂಡು, ಬೊಗಳುವ ನಾಯಿಗಳಿಗೆ ಹಚಾ ಎನ್ನದೇ ಹೋಗುವ ಅನಿವಾರ್ಯತೆ ಈಗ ನನ್ನ ಪಾಲಿಗೆ ಒದಗಿದೆ. ಅಂದ ಹಾಗೆ ನನ್ನ ಈ ಅಭಿಪ್ರಾಯ ಹಾಗೂ ಆತಂಕಕ್ಕೆ ನಿಮ್ಮ ಸಲಹೆಯಿದ್ದರೆ ದಯವಿಟ್ಟು ರವಾನಿಸಿರಿ. ಮನಸ್ಸು ಹಗುರಾಗುತ್ತದೆ.
Subscribe to:
Post Comments (Atom)
No comments:
Post a Comment