ಸಮ್ಮೆಳನಕ್ಕೆ ದಯವಿಟ್ಟು ಬನ್ನಿ
ಅಖಿಲಬಾರತ 76ನೆಯ ಸಾಹಿತ್ಯ ಸಮ್ಮೇಳನಕ್ಕೆ ಗದುಗು ತರಾತುರಿಯಲ್ಲಿಯೇ ಸಿದ್ಧವಾಗಿದೆ. ಸಮ್ಮೇಳನ ಗದುಗಿಗೆ ಬರುವುದರಲ್ಲಿ ನನ್ನ ಪಾತ್ರವು ಹಿರಿದು ಎಂಬ ಸಂಭ್ರಮ ನನ್ನದು.
ಅನೇಕ ಜಿಲ್ಲೆಯ ಅಧ್ಯಕ್ಷರು ರಾಜ್ಯಸಮಿತಿಯ ಮೇಲೆ ಒತ್ತಡ ತಂದಾಗ ಪ್ರೊ. ಚಂಪಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಸ್ಥಳ ಪರಿಶೀಲನೆಗೆ ಬಂದಾಗ ಉತ್ಸಾಹದಿಂದ ಓಡಾಡಿ ಸಮಿತಿಯ ಸದಸ್ಯರ ಮನ ಒಲಿಸಲು ಶಾಸಕ ಶ್ರೀಶೈಲಪ್ಪ ಬಿದರೂರ, ಸ್ನೇಹಿತ ಡಾ. ಜಿ.ಬಿ. ಪಾಟೀಲ, ಜಿಲ್ಲಾ ಅಧ್ಯಕ್ಷ ಪ್ರೊ. ಎ.ಬಿ. ಹಿರೇಮಠ ಹಾಗೂ ಅನೇಕ ಸಂಗಾತಿಗಳನ್ನು ಪ್ರಯತ್ನಿಸಿ ನಂತರ ಯಶ ಸಿಕ್ಕಾಗ ಎಲ್ಲಿಲ್ಲದ ಖುಷಿ ಪಟ್ಟಿದ್ದೆ. ನಂತರ ಅನೇಕ ಕಾರಣಗಳಿಂದ ಸಮ್ಮೇಳನ ಮುಂದೆ ಹೊಯಿತು. ಅದರಲ್ಲಿ ನಮ್ಮ ಭಾಗಕ್ಕೆ ಶಾಪವಾಗಿ ಪರಿಣಮಿಸಿದ ನೆರೆಹಾವಳಿಯೂ ಕಾರಣ. ನಂತರದ ರಾಜಕೀಯ ನೆರೆ ಕೂಡಾ ಸಮ್ಮೇಳನವನ್ನು ಮಂಕಾಗಿಸಿತು.
ಅನೇಕಾನೇಕ ವೈಯಕ್ತಿಕ ಕಾರಣಗಳಿಂದ ನಾನು ಮಂಕಾಗಿ, ಸಮ್ಮೇಳನ ಆಚರಣೆಯ ಉತ್ಸಾಹ ಕಳೆದುಕೊಂಡೆ ಎಂಬುದು ಕಹಿಸತ್ಯವೆ.
ಮುಖ್ಯವಾಗಿ ರಾಜಕೀಯ ಕಾರಣದಿಂದಾಗಿಯೇ ಸಮ್ಮೇಳನ ರದ್ದಾಗುತ್ತೆ ಎಂಬ ಆತಂಕ ಈಗ ದೂರಾಗಿದೆ. ನಾನು ನನ್ನಲ್ಲಿ ಹುದುಗಿದ್ದ ನಿರಾಶೆಯ ಕಾರಣಗಳನ್ನು ತೊಡೆದುಹಾಕಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದೇನೆ. ಆರಂಭದಲ್ಲಿ ನಿರುತ್ಸಾಹ ತೊರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜನಾನುರಾಗಿ ಜನನಾಯಕ ಬಿ.ಶ್ರೀರಾಮುಲು ಈಗ ಉತ್ಸುಕರಾಗಿ ಸಮ್ಮೇಳನದ ಯಶಸ್ಸಿಗೆ ಸನ್ನದ್ಧರಾಗಿದ್ದಾರೆ. ಗದುಗಿನ ಶಾಸಕ ಶ್ರೀಶೈಲಪ್ಪ ಬಿದರೂರ ಸಾಂಸ್ಕ್ರತಿಕ ಲೋಕದ ಸಂಗಾತಿ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಹಗಲಿರುಳು ದುಡಿಯುತ್ತಿದ್ದಾರೆ. ಗದಗ ಜಿಲ್ಲಾಧಿಕಾರಿಗಳಾದ ಡಾ. ಪ್ರಸಾದ ಗೆಲುವಗಿದ್ದಾರೆ. ಬರಬೇಕಾದ ಹಣ ಬಂದಿದೆ. ಮುಂದೆಯೂ ಬರುತ್ತದೆ. ಅದೆಲ್ಲಾ ಅಂತರಂಗದ ಕಿರಿಕಿರಿ ಬಿಡಿ. ಎಲ್ಲ ವ್ಯವಸ್ಥೆಗಳು ಚುರುಕಾಗಿ ಸಾಗಿವೆ. ಸಣ್ಣ ಪುಟ್ಟ ತೊಂದರೆಗಳನ್ನು ಬಿಟ್ಟರೆ ಖಂಡಿತಾ ಸಮ್ಮೇಳನ ಯಶಸ್ವಿಯಾಗುತ್ತದೆ. ಯಶಸ್ಸಿನ ಬಗ್ಗೆ ಆಶಾವಾದಿಗಳಾಗಿರುವ ನಮ್ಮ ವಿಶ್ವಾಸ ಇಮ್ಮಡಿಗೊಳಿಸಲು ನೀವೆಲ್ಲಾ ಖಂಡಿತಾ ಬನ್ನಿರಿ. ನಮ್ಮ ಸಂಭ್ರಮದಲ್ಲಿ ಭಾಗವಹಿಸಿರಿ.
Subscribe to:
Post Comments (Atom)
No comments:
Post a Comment