Wednesday, May 21, 2014

ಗಾಂಧಿ ಸ್ಮರಣೆ

ಹಿಂಸೆ ,ಅತ್ತ್ಯಾಚಾರ,ಅನ್ಯಾಯ
ಅತ್ಯಂತ ಸೂಕ್ಷ್ಮವಾಗಿ ನೀ ಜನಿಸಿದ
ನಾಡಿಂದಲೇ ದಾಳಿ ಆರಂಭಸಿವೆ.
ನಿನ್ನ ಕೊಂದವರದು ಯಾರದೋ
ಹೆಗಲೇರಿ ದೇಶ ಆಳೋ ಹುನ್ನಾರ 
ಪ್ರಚಾರದಬ್ಬರದಲಿ ವಾಸ್ತವ 
ಮಂಗ ಮಾಯ.
ನಿನ್ನ ಹೇ ರಾಮ್ ನಿನ್ನೊಂದಿಗಡಗಿ
ಹಿಂದೂ ರಾಮ ಅವತರಿಸಿದ್ದಾನೆ.
ಅರೆಪ್ರಜ್ಞಾ ಸ್ಥಿತಿ ನಿನ್ನನ್ನು ನಿನ್ನ 
ಮೌಲ್ಯ ಗಳನ್ನು ಗಾಳಿಗೆ ತೂರಿದೆ.
ಪ್ರತಿ ಊರಿನ ಪ್ರತಿಮೆ ಗಳಲಿ
ನಸು ನಗುತ ಕುಳಿತ ನಿನ್ನ ಹಾಗೆ
ನಾನು ಕಲ್ಲಾಗದೆ ಮೌನವಾಗಿದ್ದೇನೆ
ನಿನ್ನ ಜಯಂತಿಯ ನೆಪದಲಿ.

No comments:

Post a Comment