Tuesday, August 28, 2012

ಕುಸಿದು ಬಿದ್ದ ಅಣ್ಣಾಕೋಟೆ



 2008 ರ ಡಿಸೆಂಬರ್ನಲ್ಲಿ ತುಂಬಾ ಉತ್ಸಾಹದಿಂದ ರಾಳೆಗಾಂವ್ ಸಿದ್ದಿಯಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿ ಆಗಿ ಸುಧೀರ್ಘವಾಗಿ ಚರ್ಚಿಸಿದ್ದೆ. 2004ರಲ್ಲಿ ದೆಹಲಿಯಲ್ಲಿ ನಡೆದ ಗ್ರಾಮೀಣಾಭಿ ವೃಧ್ದಿ ಎ ಜಿ ಓ ಗಳ ಮಾವೇಶದಲ್ಲಿಅವರನ್ನು ಹತ್ತಿರದಿಂದ ನೋಡಿದ್ದೆ. ಅವರ ಭೇಟಿಯ ಕ್ಷಣಗಳಲ್ಲಿ ಅವರಲ್ಲಿದ್ದ ಆತ್ಮವಿಶ್ವಾಸ

ಅಂತ:ಸತ್ವವನ್ನು ಕಂಡು ಬೆರಗಾಗಿದ್ದೆ. ಇವರು ನಿಜವಾದ ಗಾಂಧಿವಾದಿ ಎಂಬ ನಂಬಿಕೆ ಅಚಲವಾಗಿತ್ತು. ಕಾಲನಂತರದಲ್ಲಿ 2011ರಲ್ಲಿ ದೇಶದಲ್ಲಿ ' ಅಣ್ಣಾ' ಮೆನಿಯಾ ಕಂಡಾಗ ಅತ್ಯಂತ ಹೆಮ್ಮೆ ಎನಿಸಿತು. ಸ್ವಾತಂತ್ರ್ಯ ಚಳುವಳಿಯ ನಂತರ ದೇಶ ಕಂಡ ಅತ್ಯಂತ ಯಶಸ್ವಿಯ 'ಲೋಕಪಾಲ ಮಸೂದೆ' ಜಾರಿ ಹೋರಾಟದಲ್ಲಿ ಭಾಗವಹಿಸಿದವರ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂಬ ಹೆಗ್ಗಳಿಕೆ 'ಅಣ್ಣಾ' ಅವರದು.
ಗಾಂಧಿಜಿಯವರ ಜಯಪ್ರಕಾಶ ನಾರಾಯಣರ ಹಾಗೆ 'ಅಣ್ಣಾ' ನಿಜವಾಗಲೂ ಅಪ್ಪಟ ಚಿನ್ನವೇ ಸರಿ. ಆದರೆ ಅಣ್ಣಾ ಸುತ್ತಲೂ ಇದ್ದವರ ಇತಿಹಾಸ, ವರ್ತಮಾನದ ಉದ್ದೇಶಗಳು ಸರಿ ಇರಲಿಲ್ಲ, ಎಂಬ ಸತ್ಯ 'ಅಣ್ಣಾ'ರ ಮುಗ್ಧತೆಗೆ ಅರಿವಾಗಲಿಲ್ಲ. 


ಅಣ್ಣಾ ಹಜಾರೆ ಗಾಂಧೀಜಿಯವರ ಹಾಗೆ , ಜೆ.ಪಿ.ಯವರ ಹಾಗೆ ಉನ್ನತ ಪದವಿಗಳನ್ನು, ಜಾಣತನವನ್ನು ದಕ್ಕಿಸಿಕೊಳ್ಳದ ಅಮಾಯಕರು. ಅವರ ಮಾಯಕತೆ, ಸಾಮರ್ಥ್ಯವನ್ನು ಬಳಸಿಕೊಂಡು 'ಹೀರೋ' ಗಳಾಗಲು ಹೋರಾಡಿದವರ ಮುಖವಾಡಗಳು ಬಹು ಬೇಗ ಕಳಚಿ ಬಿದ್ದವು.
ಹೋರಾಟದ ಇತಿಹಾಸಕ್ಕಿಂತ ತಮ್ಮ , ತಮ್ಮ ಕ್ಷೇತ್ರಗಳಲ್ಲಿ ಅಪಾರ ಖ್ಯಾತಿ, ಸಂಪತ್ತು ಗಳಿಸಿದ ಮಹನೀಯರುಗಳು. ಇವರು ಯಾರೂ 'ಅಣ್ಣಾ' ಸಮಾನ ನಿಲ್ಲುವ ಯೋಗ್ಯತೆ ಇದ್ದವರಲ್ಲ ಎಂಬುದು ಅಷ್ಟೇ ಸತ್ಯ.
Nature Justice ಗೆ ಬಹು ದೊಡ್ಡ ಶಕ್ತಿ ಇದೆ. ಅದನ್ನೆ ಕಾವ್ಯ ಭಾಷೆಯಲ್ಲಿ poetic justice ಎಂದು ಕರೆಯುತ್ತಾರೆ. ಪ್ರಕೃತಿ 'ಅಣ್ಣಾ' ಹಿಂಬಾಲಕರ ಬಂಡವಾಳವನ್ನು ಬೇಗನೇ ಬಯಲಿಗೆಳೆಯಿತು. ಹೋರಾಟದ ಮೂಲಕ ಈ ದೇಶಕ್ಕೆ ನ್ಯಾಯ ಒದಗಿಸಬೇಕು ಎಂಬುದಕ್ಕಿಂತ ಕಾಂಗ್ರೆಸ್ಗೆ, ಸಂಸತ್ತಿಗೆ ಸವಾಲು ಹಾಕುವ ಕೆಲಸದಲ್ಲಿ 'ಅಣ್ಣಾ' ಅನುಯಾಯಿಗಳು ನಿರತರಾದರು.
ಅವರ ಒಳಗಣ ಕಿಚ್ಚು ಬೇರೆಯೇ ಆಗಿತ್ತು ರಾಜಕಾರಣದ ನಂಜನ್ನು ನುಂಗಿ ಸಾರ್ವಜನಿಕ ಹೋರಾಟಕ್ಕಿಳಿದರೆ ಆಗುವುದು ಬೇರೆಯೇ. ಎಲ್ಲಾ ಹೋರಾಟಗಳು, ಹೋರಾಟಗಾರರು ಕೇವಲ ಹೋರಾಟಗಳಾಗಿರಲಿ ಎಂದು ಜನ ಬಯಸುತ್ತಾರೆ. ಅದೊಂದು ರೀತಿಯ ಸಾತ್ವಿಕ ವಿರೋಧ ಪಕ್ಷವಿದ್ದಂತೆ. ಹಾಗೆ ಇರಲಿ ಕೂಡಾ ಎಂಬುದು ಸಾರ್ವತ್ರಿಕ ಅಭಿಪ್ರಾಯವಿರುತ್ತದೆ.

ಆದರೆ ಅಣ್ಣಾ ತಂಡದ ನತಂತರ ಏಕಪಕ್ಷೀಯ ದಾಳಿ ಅವರ ತಾಳಕ್ಕೆ ತಕ್ಕಂತೆ ಕುಣಿದ ಕೇಸರಿ ಪಡೆ ಹತ್ತಾರು ಅನುಮಾನಗಳಿಗೆ ಕಾರಣವಾದವು . ರಾಜಕೀಯ ಪಕ್ಷ ಕಟ್ಟುವ ಇರಾದೆಯಿಂದಾಗಿ ಅಣ್ಣಾ ಮಂಕಾದರು. ಇತಿಹಾಸ ಪುರುಷರಾಗಬೇಕಾಗಿದ್ದ ಅಣ್ಣಾ ವರ್ತಮಾನಕಲ್ಲಿಯೇ ಕರಗಿ ಹೋಗುವಂತಾಗಿರುವುದು ವಿಷಾದನೀಯ.
ಮುಂದಿನ ಹೋರಾಟಗಳು ರಾಜಕೀಯ ರಹಿತವಿದ್ದರೆ
hidden ogendaಇರದಿದ್ದರೆ ಜನ ನಮ್ಮೊಂದಿಗೆ ಇರುತ್ತಾರೆ ಎಂಬ ಸತ್ಯವನ್ನು 'ಅಣ್ಣಾ' ಹೋರಾಟದ ಅಂತ್ಯ ಸಾಬೀತುಪಡಿಸಿದೆ.

No comments:

Post a Comment