Sunday, August 26, 2012

ಜಾತಿ ವ್ಯವಸ್ಥೆಯ ಸಾರ್ವತ್ರೀಕರಣದ ಅಪಾಯ


       ಇತ್ತೀಚಿನ ದಿನಗಳಲ್ಲಿ ಸಂವಿಧಾನಕ್ಕೆ ಅಪಚಾರವೆನಿಸುವ ರೀತಿಯಲ್ಲಿ ಜಾತಿಯ ವಿಚಾರಗಳು ಬಹಿರಂಗವಾಗಿ ಚರ್ಚೆಯಾಗುತ್ತಲಿವೆ.

       ಾತಿಗೊಂದರಂತೆ ಹುಟ್ಟಿಕೊಂಡಿರುವ ಮಠಗಳು, ರಾಜಕಾರಣಿಗಳು ಬಯಸುತ್ತಿರುವ ಮತಗಳು ಸ್ಥಿತಿಗೆ ಕಾರಣವೇನೋ? ಎಂಬ ಅನುಮಾನ ಶುರುವಾಗಿದೆ. ಇದು ಯಾರಿಂದ ಪ್ರಾರಂಭವಾಯಿತು.  ಯಾಕೆಪ್ರಾರಂಭವಾಯಿತು ಎಂಬುದಕ್ಕಿಂತ ಇದರ ಅವಶ್ಯಕತೆ ಇದೆಯಾ? ಎಂಬ ಚಿಂತನೆ ನಡೆಯಬೇಕಿದೆ.

       12ನೇ ಶತಮಾನದ ಅಣ್ಣ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವೆಂಬ ಮೊದಲ ಪಾರ್ಲಿಮೆಂಟಿನ ಮೂಲಕ ಜಾತಿ ವ್ಯವಸ್ಥೆಯನ್ನು ಅಳಿಸಿ ಹಾಕುವ ಮೊದಲ ಯಶಸ್ವಿ ಪ್ರಯತ್ನ ನಡೆಯಿತು.

       ನಂತರ 20ನೇ ಶತಮಾನದಲ್ಲಿ ಸ್ಥಾಪಿತವಾದ ಭಾರತದ ಪಾರ್ಲಿಮೆಂಟಿನ ಡಾ: ಅಂಬೇಡ್ಕರ್ ರವರು ರಚಿಸಿದ ಸಂವಿಧಾನವೂ ಜಾತಿ ವ್ಯವಸ್ಥೆಯನ್ನು ಅಳಿಸಿ ಹಾಕಲು ಸೂಚಿಸಿತು.

       ಹೀಗೆ ಎರಡು ಸಂಸತ್ತುಗಳ ವಿಚಾರಧಾರೆಗಳನ್ನು ಮೆಲುಕು ಹಾಕುತ್ತಾ, ಸಂದರ್ಭ ಬಂದಾಗ ಭಾಷಣ ಮಾಡುತ್ತಾ ಜಾತಿ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುತ್ತಾ ಸಾಗಿರುವುದು ಎಂತಹ ವಿಪರ್ಯಾಸ.

       ಆಧುನಿಕತೆ, ಜಾಗತೀಕರಣ, ಶಿಕ್ಷಣ ವ್ಯವಸ್ಥೆ, ಮಾಹಿತಿ ತಂತ್ರಜ್ಞಾನದ ಪ್ರತಿಫಲ ಜಾತಿ ವ್ಯವಸ್ಥೆಯನ್ನು ನಾಶಪಡಿಸುತ್ತೆ ಎಂಬ ಭಾವನೆ ಬಿಸಿರಕ್ತದ ಯುವಕರಲ್ಲಿದೆ.  ಆದರೆ ಮತ್ತೊಂದೆಡೆ ಪ್ರತಿಷ್ಠಿತ ವ್ಯವಸ್ಥೆಯಾಗಿರುವ ರಾಜಕಾರಣ ಜಾತಿ ದುರ್ಬಳಿಕೆ ಆರಂಭಿಸಿದೆ.
       ಅಳಿಸಿ ಹಾಕುವ - ಪುನರ್ ಸ್ಥಾಪಿಸುವ ಹಗ್ಗ - ಜಗ್ಗಾಟ ನಿರಂತರವಾಗಿ ನಡೆದಿದೆ.  ಒಂದು ಕ್ಷಣ ನಮ್ಮ ಮನ:ಸಾಕ್ಷಿಗೆ ಅನುಗುಣವಾಗಿ ಆಲೋಚಿಸಿದಾಗ ಜಾತಿ ವ್ಯವಸ್ಥೆ ಅಳಿಸಿ ಹೋಗಲಿ ಅನಿಸಲೇಬೇಕಲ್ಲ.

No comments:

Post a Comment