Wednesday, May 21, 2014

ಮೌನ

ಹೀಗೆ ಏನೋ 
ಅಂದುಕೊಳ್ಳುತ್ತೇನೆ
ಹೇಳಲಾಗದೇ
ತಳಮಳಿಸುತ್ತೇನೆ
ಶಬ್ದಗಳು ನಿಶ್ಯಬ್ದವಾದಾಗ
ಮೌನ ಮಾತಾಗದೇ 
ಹೋದಾಗ

ಕತ್ತಲು ರಾತ್ರಿ

ಯಾರಿಗೆ ಹೇಳಲಿ ಇಷ್ಟೊಂದು
ತಡ ರಾತ್ರಿಯ ನೀರವ
ಮೌನದಲಿ.
ಮನಸನು ಕೆಣಕುವ
ನಿನ್ನ ಹಟಮಾರಿತನವ.
ಆದರೂ ನೆನಪಾಗಿ ಕಾಡಲು
ಕಾರಣವಾದ ಕತ್ತಲು 
ಬೇಡವೆಂದರೂ 
ಹಿತ.

ಕನ್ನಡ ಕೀ ಮಣೀರಿ

ನಿನ್ನೆ ಇದ್ದಕ್ಕಿದ್ದಂತೆ
ಕಳಕೊಂಡೆ
ಎಲ್ಲಂದರಲ್ಲಿ 
ಹುಡುಕಿದೆ
ಮುಟ್ಟಿದವರಿಗೆಲ್ಲ ರೇಗಿದೆ.
ಹುಡುಕುವ ಬಗೆಯನು
ನನ್ನ ಹಾಗೆ ಕಳೆದುಕೊಂಡು 
ಕಂಗಾಲಾದವರಿಗೆಲ್ಲ
ಕೇಳಿದೆ.
ಅವರಿಟ್ಟ ಸಲಹೆಗಳ 
ಜಾಡು ಹಿಡದಲೆದೆ
ಉಹುಃ ಸಿಗಲಿಲ್ಲ .
ಇಂದು ಇದ್ದಕ್ಕಿದ್ದ ಹಾಗೆ
ಸಿಕ್ಕಾಗ ಸಿಕ್ಕಾಪಟ್ಟೆ
ಖುಷಿ .
ಏನಿರಬಹುದು
ಹೇಳಿ .
ಇಲ್ಲ ಏನೂ ಅಲ್ಲ
ಕನ್ನಡ ಕೀ ಮಣೀರಿ
........ ಅಷ್ಟೇ .

ಕೊಳ್ಳುಬಾಕ ಸಂಸ್ಕೃತಿ

ಕಾಲಲ್ಲಿ ಹಾಕಿ ತುಳಿಯುವ
ಚಪ್ಪಲಿಯನ್ನು ಶೋ ಕೇಸ್ ನಲ್ಲಿಟ್ಟು
ಮಾರುತ್ತೇವೆ.
ಹೊಟ್ಟೆ ಸೇರುವ ಕಾಯಿಪಲ್ಯ ಯನ್ನು 
ರಸ್ತೆಯಲ್ಲಿಟ್ಟು ಮಾರುತ್ತೇವೆ.
ಇದುವೇ ಕೊಳ್ಳುಬಾಕ ಸಂಸ್ಕೃತಿಯ 
ಮಹಿಮೆ.

ಮುಂಗಾರು

ಧೋ ಎಂದು ಸುರಿಯುವ
ಮಳೆಗೆ ಗಣೇಶನು ಬೇಡ 
ಜೋಕುಮಾರನೂ ಬೇಡ 
ಸುರಿಯುವದಷ್ಟೇ ಗೊತ್ತು .
ಪಾಪ ನಮ್ಮ ತೆವಲು ತೀಟೆಗೆ
ಹುಟ್ಟಿದ ದೇವರುಗಳ ಕತೆ
ಕೇಳಲು ಮಳೆಯಷ್ಟೆ ಹಿತ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 
ಮನಬಂದಂತೆ ಬರೆಯುವ 
ಮಾತನಾಡುವದನ್ನು ಸ್ವಯಂ 
ಶಿಸ್ತು ಹೇರಿಕೊಂಡು ನಿಲ್ಲಿಸಬೇಕು.
ಇಲ್ಲದೆ ಹೋದರೆ ಬರಹ,
ಮಾತು ಅಥ೯ ಕಳೆದುಕೊಳ್ಳುತ್ತವೆ.
ಬೇರೆಯವರ ಅಭಿಪ್ರಾಯಗಳನ್ನು 
ಗೌರವಿಸದೇ ಹೋದರೂ , ಕೆಳಮಟ್ಟದ
ಟೀಕೆಗಿಳಿಯಬಾರದು.
ನಮ್ಮ ಟೀಕೆಯ ಹಿಡನ್ ಅಜೆಂಡಾ
ಅಥ೯ವಾದೀದು ಎಂಬ ಸಂಕೋಚವಾದರು ಇರಲಿ ಎಂಬ ಆಶಯ .

ಸನ್ಮಾನ