Wednesday, May 21, 2014

ಕಾಲಾಯ ತಸ್ಮೈ ನಮಃ

ಕಾಲ ಎಲ್ಲವನ್ನು ಮರೆಸುತ್ತದೆ
ಕಾಲ ಎಲ್ಲವನ್ನು ನಿರ್ಧರಿಸುತ್ತದೆ

ನೆನಪು

ಅಮ್ಮ ಹೇಳಿದ ಮಾತು ನಿರಂತರ 
ನೆನಪು 
ನಿನ್ನ ಕಾಲಲ್ಲಿ ನಾಯಿ ಗೆರೆ ಇದೆ 
ಅದಕ್ಕೆ ಹೀಗೆ ಅಲೆದಾಟ ಅಂದದ್ದು
ಈಗಿನ ನನ್ನ ಓಡಾಟ ನೋಡಿದರೆ 
ನಿಜ ಅನಿಸುತ್ತೆ .

ಪ್ರಜಾಪ್ರಭುತ್ವ

IT'S THE TIME TO RESPECT THE DEMOCRATIC DECISIONS NO NEED TO IMPOSE PERSONAL IDEALS
ON OTHERS.
MOST OF INTELLECTUALS DID NOT LIKE MODI OF COURSE IT'S THEIR VIEW.
NOW WE HAVE TO WATCH AND WAIT TILL NEXT CHANCE .

ದೇಶದ ರಾಜಕೀಯ ಇತಿಹಾಸದಲ್ಲಿ ಬಹು ದೊಡ್ಡ ಕಂಪನ ಉಂಟಾಗಿದೆ 
ಬೀಸಿದ ಅಲೆ ನಿಜವಾಗಿದೆ
ಜನರ ನಂಬಿಕೆ ಹುಸಿಯಾಗದಂತೆ
ಎಲ್ಲರೂ ನಡೆದುಕೊಳ್ಳಬೇಕಾಗಿದೆ

ದ್ವೇಷ ಬೇಡ

ಈಗ ಗೆದ್ದಾಗಿದೆ ಸೋಲು ಬಯಸಿದವರೊಂದಿಗೆ ಸ್ನೇಹದಿಂದ ಇರುವ ಔದಾರ್ಯವರಲಿ 
ಕೆಲವರು ತಮ್ಮ ಸಿಧ್ಧಾಂತಗಳನ್ನು ಬಹುಜನರಿಗೆ ಅಪ್ರಿಯವಾಗುವಂತೆ 
ಪ್ರತಿಪಾದಿಸಿದ್ದಾರೆ.
ಹಾಗಂತ ಅವರನ್ನು ಹೀನಾಯವಾಗಿ 
ನಡೆಸಿಕೊಂಡು ನಮ್ಮ ಸಣ್ಣ ತನ ಪ್ರದರ್ಶನ ಮಾಡುವುದು ಬೇಡವೇ ಬೇಡ .
ಗೆದ್ದವರು ಸೋತವರ ವಿಚಾರದಲ್ಲಿ ಮೌನವಾಗಿ ದ್ದರೆ ಹೆಚ್ಚು ಬೆಲೆ 
ಬರುತ್ತದೆ .

ಪುಟ್ಟಣ್ಣ ಕಣಗಾಲ ಹಾಗೂ ಸ್ತ್ರೀ

ನಡು ರಾತ್ರಿ ವರೆಗೆ 
ಪುಟ್ಟಣ್ಣ ಕಣಗಾಲ್ ನಿರ್ದೇಶಸಿದ ಎರಡು ಸಿನಿಮಾ ಗಳನ್ನು ನೋಡಿದಾಗ 
ಮನಸ್ಸು ತುಂಬಿ ಬಂತು .
ಉಪಾಸನೆ ಹಾಗೂ ಶರಪಂಜರ
ಚಿತ್ರಗಳು ಪುಟ್ಟಣವರ ಸಾಮರ್ಥ್ಯವನ್ನು 
ನೆನಪಿಸಿದವು.
ಮಹಿಳಾ ಕೇಂದ್ರಿತ ಕಥೆಗಳನ್ನು ಅದ್ಭುತವಾಗಿ ನೀರೂಪಿಸಿದ್ದಾರೆ.
ಮಹಳಾ ಪರ ನಿಲುವು ಹೊಂದಿದ 
ಪುಟ್ಟಣ್ಣ ಮಹಿಳೆಯನ್ನೇ 
ದೌರ್ಬಲ್ಯ ಎಂದು ಮಾನಸ 
ಸರೋವರದಲ್ಲಿ ನೀರೂಪಿಸಿದ್ದು
ಎಂತಹ ವಿಪರ್ಯಾಸ !
ನಿರ್ದೇಶಕ ನಾಗಿ ಗೆದ್ದ
ಪುಟ್ಟಣ್ಣ ವ್ಯಕ್ತಿ ಯಾಗಿ
ಸೋತರಲ್ಲ ಎನಿಸಿತು .
ಇದೇ ಅಲ್ಲವೇ ಖಾಸಗಿ ಹಾಗೂ
ವ್ರತ್ತಿ ಬದುಕಿನ ಅಂತರ

ಹಗುರಾಗುತ್ತೇನೆ

ಭಾರವಾದ 
ಮನಸನು
ಹಗುರಾಗಿಸಲು
ಒದ್ದಾಡುತ್ತಲಿದ್ದೇನೆ.
ಎಲ್ಲ ಹಂಚಿಕೊಂಡರೆ
ಹಗುರಾಗುತ್ತೇನೆ ನಿಜ.....
ಆದರೆ ನಂತರ ನಾನೇ 
ಹಗುರಾಗಿಬಿಡುತ್ತೇನೆ 
ಎಂಬ ಬೇಸರ !!!

ಮೇಘ ಸಂದೇಶ

ಮುಗಿಲ ಕಡೆ ಮುಖ
ಮಾಡಿ ಜೋರಾಗಿ ಅತ್ತು
ಬಿಡೋಣ ಅಂದುಕೊಂಡು
ಮುಗಿಲು ನೋಡಿದೆ
ಅನಿರೀಕ್ಷಿತವಾಗಿ ಧಾರಾಕಾರ
ಸುರಿದ ಮಳೆ
ತಣ್ಣಗಾಗಿಸಿತೆನ್ನನು