Friday, June 10, 2016

ಕಾಮ-ಧ್ಯಾನ

ಕಾಮ- ಧ್ಯಾನ

ಹದಿ ಹರಿಯದಿ ಧ್ಯಾನ ಕಷ್ಟ
ವಯಸ್ಸಾದಂತೆಲ್ಲ ಕಾಮ ಕಷ್ಟ
ಹದಿ ಹರೆಯದಲಿ ಧ್ಯಾನಕ್ಕೆ
ಇಳಿ ವಯದಲಿ ಕಾಮಕೆ
ಚಡಪಡಿಸದೆ ಇರುವುದನು
ಇರುವಂತೆ ಸ್ವೀಕರಿಸಲು
ಮನಕೆ ಮನವರಿಕೆಯ
ಮಾಡುವುದೇ  ಬದುಕಿನ
ಸವಾಲು.
ಇರುವುದನು ಇರಲು
ಬರುವುದನು ಬರಲು
ತೋಳ ಚಾಚಿ ಬಾಚಿ
ಬಿಗಿದಪ್ಪಿ ಸುಖಿಸೋಣ
ಹರೆಯದ ರತಿಸುಖದ ತೆರದಿ.
----ಸಿದ್ದು ಯಾಪಲಪರವಿ.

No comments:

Post a Comment