Friday, September 14, 2012

ಚಿತ್ರದುರ್ಗ ಮಹಾರಾಣಿ, ಮಹಾರಾಜನ ನಂಟು


ಮಹಾರಾಣಿ ಪಿ.ಯು, ಮಹಾರಾಜ ಪದವಿ ಕಾಲೇಜುಗಳನ್ನು ಅಲ್ಲಿನ ಹಿಂದುಳಿದ ಜನಾಂಗದ ನಾಯಕ ಡಿ.ಬೋರಪ್ಪ ಆರಂಭಿಸಿದ್ದರು.  ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಕಾಲೇಜಿನಲ್ಲಿ ನನಗೆ ಕೈತುಂಬಾ ಸಂಬಳ ಸಿಗದಿದ್ದರೂ, ಮೈತುಂಬಾ ಕೆಲಸವಂತು ಇತ್ತು.

ಮೊದಲ ವರ್ಗಕ್ಕೆ ಹೋಗುವಾಗ ನನಗೆ ಅಷ್ಟೊಂದು ಆತಂಕವಿರಲಿಲ್ಲ.  ವಿದ್ಯಾರ್ಥಿ ದೆಸೆಯಿಂದಲೂ ಭಾಷಣ ಮಾಡಿ ರೂಢಿ ಇತ್ತು.  ಚರ್ಚಾಪಟುಗಳಿಗೆ ಉಪನ್ಯಾಸಕ ವೃತ್ತಿ ಕಠಿಣವೆನಿಸುವುದಿಲ್ಲ. ಆದರೂ ಮೊದಲ ದಿನ ಯಾವ ವಿಷಯ ಆಯ್ಧುಕೊಳ್ಳಬೇಕು ಎಂಬ  ಗೊಂದಲದ ಮಧ್ಯೆ Hhow to learn  English as a Kannada Student? ಎಂಬ ವಿಷಯ ಪಿ.ಯು. ವರ್ಗಕ್ಕೆ ವಿವರಿಸಿದೆ.  ಮೊದಲ ವರ್ಗದಲ್ಲಿಯೇ 250 ವಿದ್ಯಾರ್ಥಿಗಳು, Houseful ವಾತಾವರಣ, ವಿದ್ಯಾರ್ಥಿಗಳ ಮುಖದ ಮೇಲಿನ ಖುಷಿ, ನನ್ನನ್ನು ಗೆಲ್ಲಿಸಿದ ಭಾವನೆ.

ಅಂದೇ B.A. B.Com.B.Sc. ವಿದ್ಯಾರ್ಥಿಗಳನ್ನು ಒಟ್ಟಾಗಿ ಸೇರಿಸಿ ನನಗೆ ತುಂಬಾ ಇಷ್ಟವಾದ Shakespeareನ  True Love Poem ಆಯ್ದುಕೊಂಡೆ.  ಅದನ್ನು ರಸವತ್ತಾಗಿ ಪಾಠ ಮಾಡುತ್ತಿದ್ದ ನನ್ನ ಗುರುಗಳನ್ನು ನೆನಪಿಸಿಕೊಂಡು ಅದೇ ಪರಿಣಾಮದಲ್ಲಿ ಪಾಠ ಮಾಡಿ ಯಶಸ್ಸಿಯೂ ಆದೆ. 

ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಕಣ್ಮಣಿಯಾದೆ.  ಆದರೆ ಹೊಟ್ಟೆಪಾಡು ಕಠಿಣವಾಗಿತ್ತು.  Approval, Grant ಎಂಬ ಪದಗಳ ಪರಿಚಯವಿರಲಿಲ್ಲ.  ಅದೆಲ್ಲ ಮುಗಿದರೆ ನಿಯತ ಸಂಬಳ ಎಂಬ ಕಲ್ಪನೆಯೂ ಇರಲಿಲ್ಲ.  ಕೇವಲ ಪಾಠ ಮಾಡುವುದೊಂದೇ ಗೊತ್ತಿತ್ತು.

ಎಲ್ ಆರ್. ಮುನಿಪಾಟೀಲ ಮನೆಯಲ್ಲಿ ರಾತ್ರಿ ಪ್ರೀತಿಯಿಂದ ಊಟ ಹಾಕಿ, ಖರ್ಚಿಗೆ ಹಣ ಕೊಡುತ್ತಿದ್ದರು.  ಅವರ ಋಣ ನನಗೆ ಈಗಲೂ ಹಾಗೆಯೇ ಇದೆ.  ಕೆಲವೊಂದನ್ನು ಚುಕ್ತಾ ಮಾಡಲಾಗುವುದಿಲ್ಲ. ಸರಕಾರದಿಂದ ನನ್ನ ಹುದ್ದೆಗೆ ಬೇರೆಯವರು ಬಂದ ಮೇಲೆ ಅಲ್ಲಿಂದ ಬಿಡುವುದು ಅನಿವಾರ್ಯವಾಯಿತು.

ಅದು ಗೊತ್ತಿದ್ದರೂ ತುಂಬಾ ಲವಲವಿಕೆಯಿಂದ ಪಾಠ ಮಾಡಿದೆ.  ಚಿತ್ರದುರ್ಗ ಗ್ರಾಮೀಣ ವಿದ್ಯಾರ್ಥಿಗಳು ತುಂಬಾ ಮುಗ್ಧರು.  ಕೋಟೆಯೆದುರಿಗಿನ ಕಾಲೇಜು, ಆ ಕಾಲೇಜಿನ ತುಂಬೆಲ್ಲ ಹರಡಿರುವ ವಿದ್ಯಾರ್ಥಿಗಳು, ಮುಂಜಾನೆ  ನಾಯಿಗೆ ಬ್ರೆಡ್ ಹಾಕುತ್ತಾ ನಿಂತಿರುತ್ತಿದ್ದ  ಚೇರ್ ಮನ್ ಈಗಲೂ ನನ್ನ ಕಣ್ಣಮುಂದೆ ಹಾದು ಹೋಗುತ್ತಾರೆ.

No comments:

Post a Comment