ಬಾಳ ಪಯಣದ ಹಾದಿ-24 ವರ್ಷದ ಪಯಣ
ಸಹಿಸುವುದು ಸಮರಸದಿ ಬಾಳುವುದು 
ಏಳು-ಬೀಳುಗಳ ಆಟದಲಿ ನಿಲ್ಲದ ಓಟ 
ಲೆಕ್ಕವಿಲ್ಲದ ಪಾಠ 
ಸುಖ-ದುಃಖಗಳ ಸಮ್ಮಿಲನ ಕೂಡಿದ್ದಕ್ಕೆ 
ಸಿಗಬಹುದು ಬೇಕಿದ್ದರೆ ಲೆಕ್ಕ 
ಕಷ್ಟ ಹಿಂಸೆ ಅಪಮಾನ ಗೊಂದಲ
ಅನುಮಾನ ವ್ಯಾಮೋಹ 
ಬದುಕಿನ ಅನುಭವಗಳ ಮೂಟೆ 
ಹೊತ್ತಿದ್ದು ಅರಿವಿಗೆ ಬರಲಿಲ್ಲ 
ಬರೆಯಲು ಓದಲು ವಿನೂತನ 
ಸಂಗತಿಗಳ ಗಾಳಕೆ ಬದುಕನೊಡ್ಡಿ 
ಅನುಭವಿಸಿದ ಬವಣೆಗಳಲಿ ಸಮಪಾಲು 
ಈಗ ಬರೀ ಲೆಕ್ಕಾಚಾರದ ಓಟ 
ಏನೇ ಸಿಕ್ಕರೂ ಅದು ಬೋನಸ್ 
ಆದರೆ ಬೋಗಸ್ ಅಲ್ಲ 
ಬದುಕೀಗ ಮಾಗಿದೆ ಕಳೆದರೂ 
ಅಷ್ಟೇ ಕೂಡಿದರೂ ಅಷ್ಟೇ 
ಎಲ್ಲವೂ ಸಮಭೋಗದ ಸವಿಪಾಲು
ಇನ್ನೂ ಬದುಕಬೇಕು ಯಾಕೆಂದರೆ 
ಬದುಕು-ಬೇಕು 
ಸುಖದ ಅರಿವಿಗೆ ಸಾಕಾಗುವಷ್ಟು 
ಕಷ್ಟಗಳ ಒಡನಾಟ 
ಈಗ  ಪಾಲಿಗೆ ಬಂದದ್ದೆಲ್ಲ ಪಂಚಾಮೃತ
ಆರೋಗ್ಯ ನೆಮ್ಮದಿ ಪರರ ಸುಖದಲಿಯೂ 
ದೊರೆಯುವ ಪರಮಸುಖದ 
ಸಾಂಗತ್ಯದಲಿ ಬದುಕು ಹರಿಯುತಲಿರಲಿ 
ಪಾವನ ನದಿಯಂತೆ 
ನಿತ್ಯ ನಿತಾಂತವಾಗಿ...
---ಸಿದ್ದು ಯಾಪಲಪರವಿ
 
 
 
 Posts
Posts
 
 
No comments:
Post a Comment