Monday, September 3, 2012

ಪ್ರೀತಿಯೊಂದೇ ಸಾಲದು……………………………


 
ನಿತ್ಯ ಬದುಕಿನಲ್ಲಿ ಪ್ರೀತಿ ಜೀವ ದ್ರವ್ಯವಾಗಿದೆ.  ಪ್ರೀತಿಯಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ ಎಂಬುದು ಪರಮ ಸತ್ಯ.

ಸ್ನೇಹಿತರು, ಗೆಳೆತಿಯರು, ಬಂಧುಗಳು, ಸಹೋದ್ಯೋಗಿಗಳು ಎಲ್ಲರನ್ನು ಪ್ರೀತಿಯಿಂದ ಗೆಲ್ಲಬೇಕೆಂದು ಬಯಸುತ್ತೇವೆ.  ನಮ್ಮ ಖುಷಿ ಅಲ್ಲಿಯೇ ಇರುತ್ತದೆ ಕೂಡಾ!  ಆದರೆ ನಿಮ್ಮ ಸುತ್ತಲಿನ ಜನರ ಬಂಧನ ಆಳವಾಗಿರಬೇಕಾದರೆ, ನಿಮ್ಮ ಬಾಂಧವ್ಯ ಕೊನೆತನಕ ಇರಬೇಕು ಎಂಬುದಾದರೆ ಕೇವಲ ಪ್ರೀತಿಯೊಂದೆ ಸಾಲದು, ಪ್ರೀತಿಯ ಗೊಡೆಯು ಕುಸಿಯಬಾರದೆಂದರೆ ಅದನ್ನು ವಿಶ್ವಾಸವೆಂಬ ಗಾರೆಹಾಕಿ ಪ್ಲಾಸ್ಟರ್ ಮಾಡಲೇಬೇಕು.
ನಮ್ಮ ಬಹುಪಾಲು ಸಂಬಂಧಗಳು ಬಹುಬೇಗ ಕುಸಿಯಲು ವಿಶ್ವಾಸದ ಕೊರತೆಯೇ ಕಾರಣ. ಪ್ರೀತಿ ವಿಶ್ವಾಸವೆಂಬ ಜೋಡಿ ಪದ ಸಂಯೋಜನವಾಗಿರುವ ಮೂಲ ಕಾರಣವೂ ಇದೆ.  ಆದರೆ ನೀವು ವಿಶ್ವಾಸದಿಂದ  ಪ್ರೀತಿಯನ್ನು ಬೇರ್ಪಡಿಸಿದಾಗಲೆಲ್ಲ, ಪ್ರೀತಿಯ ಗೋಡೆಯಲ್ಲಿ ಬಿರುಕು ಕಾಣಿಸುತ್ತದೆ.
ನಮ್ಮ ಬಂಧುಗಳು ಗೆಳೆಯರು, ಹೆತ್ತವರು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ.  ಆದರೆ ಬರು ಬರುತ್ತಾ ಏನೋ ಸಣ್ಣ ಗುಮಾನಿಯಿಂದಾಗಿ ವಿಶ್ವಾಸದ ಕೊರತೆ ಉಂಟಾಗಿ ಬಿಡುತ್ತದೆ. ಪಾಲಕರು ಮಕ್ಕಳ ಮೇಲೆ ಎಷ್ಟೇ ಪ್ರೀತಿಯಿದ್ದರು ಹೆಂಡತಿ ಬಂದ ಮೇಲೆ ಮಕ್ಕಳ ಮೇಲೆ ಅನುಮಾನಿಸಲು ಶುರು ಮಾಡುತ್ತಾರೆ.  ಇದಕ್ಕೆ ಕಾರಣ ವಿಶ್ವಾಸದ ಕೊರತೆ, ಪ್ರೀತಿ ಕೊರತೆಯಿಂದಲ್ಲ ಎಂಬುದು ಅಷ್ಟೇ ಕುತುಹಲಕಾರಿ.
ವಿಶ್ವಾಸದ ಬಲದಿಂದ ಕೂಡಿದ ಪ್ರೀತಿ ಗಟ್ಟಿಯಾಗಿ ನೆಮ್ಮದಿ ಕೊಟ್ಟರೆ,  ವಿಶ್ವಾಸವಿಲ್ಲದ ಪ್ತೀತಿ ಕೇವಲ  possessiveness ಆಗಿಬಿಡುತ್ತದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಅಂಗಲಾಚಿ ಕಿರುಚಾಡುವವರಿಗೆಲ್ಲ ವಿಶ್ವಾಸದ ಕೊರತೆಯಿಂದಾಗಿ ಕೇವಲ INFATUATE ಆಗಿ, possessive ಆಗಿ ನೋವು, ಹಿಂಸೆ ಅನುಭವಿಸುತ್ತಾರೆ.ಕಿರಿ ಕಿರಿಯೆನಿಸುವ ಪ್ರೀತಿಯೆಂಬ ಹಾಲಿಗೆ ವಿಶ್ವಾಸವೆಂಬ ಜೇನ ಬೆರೆಸಿ ಬದುಕು ರುಚಿಯಾಗಿಸೋಣ.
     

No comments:

Post a Comment