Monday, September 3, 2012

ಸ್ನೇಹ ವೆಂಬ ಹೆಸರಿನ ಅಪಾಯಕಾರಿ ವಾಸ್ತವ


                                                             ದೃಶ್ಯ  __ 1

ಸ್ನೇಹದಲ್ಲಿ ಅಪಾರವಾದ ವಾಸ್ತವ ಸೇರಿದರೆ ಆಗುವ ಅಪಾಯಕ್ಕೆ ನೀನೇ ಸಾಕ್ಷಿ.  ಗುಡಿ ಗುಂಡಾರಗಳಲ್ಲಿ ನಂಬಿಕೆ ಇಲ್ಲದೆ, ದೇವರ ಸರ್ವವ್ಯಾಪಿ ಅಸ್ತಿತ್ವದಲ್ಲಿ ಭಕ್ತಿ ಕಾಣುವ ನನ್ನನ್ನು ದೇವರ ಗುಡಿಗೆ ಎಳೆದಾಗಲೇ ಅಚ್ಚರಿಯಾಯಿತು.

ಅಯ್ಯೊ ಪಾಪ! ಏನೋ ನಿನ್ನ ನಂಬಿಕೆ ಅಂದುಕೊಂಡೆ, ಸಂಕಷ್ಟಿಯ ದಿನದ ಸಂಜೆ ಗಣೇಶನ ಸನ್ನಿಧಾನದಲ್ಲಿ ನನ್ನ ಮೇಲಿನ ವ್ಯಾಮೋಹವನ್ನು ಸಾಕ್ಷೀಕರಿಸಿದ್ದನ್ನು ಅಮಾಯನಂತೆ ನಂಬಿದೆ.

ನಿನ್ನ ಸೌಂದರ್ಯ, ಅಪಾರ ಕಾಳಜಿ ನನಗೆ ಮುಖ್ಯವೆನಿಸದೆ ನಿನ್ನನ್ನು ಒಪ್ಪಿಕೊಂಡೆ, ದೇವಸ್ಥಾನದಿಂದ ಹೃದಯ ಸಿಂಹಾಸನದಲ್ಲಿ ಆಸೀನಳಾಗುವ ಅವಕಾಶ ನೀಡಿ ಹತ್ತಿರ ಪಡೆದುಕೊಂಡೆ.  ಒಂದೇ ರಿಂಗಿಗೆ ರಿಸೀವ್ ಆಗುವ ಫೋನ್ ಗಂಟೆಯಾದರೂ ಕೊನೆಗೊಳ್ಳುತ್ತಿರಲಿಲ್ಲ.
ಗೆಳೆಯ, ನಿನ್ನಲ್ಲಿರುವ ರಾಜಕಳೆ, ರಾಜ ಗಾಂಭೀರ್ಯ ಬಿಸಿ ಅಪ್ಪುಗೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬ ಹಿತಕರ ಮಾತುಗಳನ್ನು ಆಪ್ತವಾಗಿ ನಂಬಿದೆ.ನಿನ್ನ ಕರೆ ಬಂದಾಗ ಜಿಂಕೆಯ ಹಾಗೆ ಓಡಿ ಬರೋಣ ಎನಿಸುತ್ತೆ ಅಂತ ಹೇಳಿದ್ದು….. ಹಾಗೆ ಬಂದದ್ದು ಕೂಡಾ ಅಷ್ಟೇ ಸತ್ಯ.
ಆಪ್ತ ನಗೆ, ಗುಪ್ತ ನರಳಾಟ  ಸುಖ ಹುಡುಕುವುದು ಮನುಷ್ಯ ಸಹಜ ದೌರ್ಬಲ್ಯ  ಅದಕ್ಕೆ ನಾನು ಹೊರತಾಗಲಿಲ್ಲ.  ಲಂಡನ್ ಬ್ರಿಡ್ಜ್ ಮೇಲೆ ಕಾರನ್ನು ವೇಗವಾಗಿ ಓಡಿಸುತ್ತಾ ಹಂಚಿಕೊಂಡ ಸಿಹಿ ನೆನಪುಗಳು.
ಮೈ-ಮನಸ್ಸನ್ನು ಹಗುರಾಗಿಸಲು ತೋರಿದ ಉತ್ಸಾಹ ನಾನು ಶಾಶ್ವತ ಅಂದುಕೊಂಡದ್ದು… ಹೀಗೆ ಬದುಕೊಂದು ಸುಂದರ ಸಂಜೆ.  ಪ್ರೀತಿಯ ಸೆಳೆತದಲ್ಲಿದ್ದಾಗ ಉರಿ ಬಿಸಿಲು ಮಟ ಮಟ ಮಧ್ಯಾನ್ಹ ಬರಬಹುದೆಂದು ನಾವ್ಯಾರು ಅಂದುಕೊಳ್ಳುವುದೇ ಇಲ್ಲ.

ಜಿಂಕೆಯ ನಡಿಗೆ ನಿಧಾನವಾಗಿ ಆಮೆ ನಡಿಗೆಯಾಯಿತು.  ಮುಖದ ಮೇಲಿನ ನಗೆ ಮಾಯವಾಯಿತು. ಹತ್ತಾರು ರಿಂಗ್ ಆದರೂ ಫೋನ್ ರಿಸೀವ್ ಆಗಲೇ ಇಲ್ಲ.  ಲಂಡನ್ ಬ್ರಿಡ್ಜ್ ಮೇಲೆ ಕಾರು ವೇಗವಾಗಿ ಓಡಲೇ ಇಲ್ಲ.  ಹೈಡ್ ಪಾರ್ಕ್ ಸುತ್ತಾಟಕ್ಕಾಗಿ ಕಾಲು ಯಾಕೋ ಸುಸ್ತಾದವು.

ಮೈ-ಮನಸು ಹಗುರಾಗುವ ಕ್ರಿಯೆ ನಿಂತೇ ಹೋಯಿತು.

ದೃಶ್ಯ  __ 2


ಈಗ ದ್ವನಿಯು ಕರ್ಕಶವಾಗಿ ಕೋಮಲತೆ ಮಾಯವಾಗಿದೆ.  ಕರೆದಾಗಲೆಲ್ಲ ಓಡಿಬರೋಕೆ ನನಗೇನು ಬೇರೆ ಕೆಲಸ ಇಲ್ಲವೇ? ಇನ್ನೇನು ಒಂದರ್ಧ ಗಂಟೆಯಲ್ಲಿ ಬರುವೆ ಸಹನೆಯಿಂದ ಕಾಯಕಾಗಲ್ವ ಎಂಬ ಮಾತುಗಳಲ್ಲಿನ ಒರಟುತನ ಮೊದಲ ದೃಶ್ಯದಲ್ಲಿ ಕಾಣಿಸುತ್ತಿತಲಿಲ್ಲ.ಸಂಜೆ ರೆಡಿಯಾಗಿರು ಸಾಧ್ಯವಾದರೆ ಬಂದು ಹೋಗುವೆ.  ನನಗೆ ವಿಪರೀತ ಕೆಲಸ ಯಾರನ್ನೊ ನೋಡಬೇಕು, ಎಲ್ಲಿಗೋ ಹೋಗಬೇಕು.  ಜನ ಏನು ನಮ್ಮ ಸಲುವಾಗಿ ಕಾಯುತ್ತಾ ಕೂಡುತ್ತಾರೇನು?   
ಬೇಕೆಂದಾಗ ಸಿಗಲು ಆಗೊಲ್ಲ, ನೀವು ಸ್ವಲ್ಪ ನಮ್ಮ ಕಷ್ಟಾನು ಅರ್ಥಮಾಡಿಕೋಬೇಕು.  ನೂರೆಂಟು ವ್ಯವಹಾರಗಳು, ವ್ಯವಹಾರಕ್ಕಾಗಿ ಜನರನ್ನು ಭೇಟಿ ಆಗಲೇ ಬೇಕು.  ಬರೀ ರೊಮ್ಯಾನ್ಸ್ ನಿಂದ ಹೊಟ್ಟೆ ತುಂಬುತ್ತದೆಯೇ? ಎಂಬ ವಾಸ್ತವದ ಪ್ರಶ್ನೆಗಳು ಸಾಗರದಲೆಗಳಂತೆ ಅಪ್ಪಳಿಸಲು ಶುರು ಆದಾಗ ತಡೆದು ಕೊಳ್ಳಲೇ ಬೇಕಲ್ಲ.
ಹೆಚ್ಚು ವಾದಿಸಿದಾಗ ಬಂದ ಉತ್ತರವೂ ಅಷ್ಟೇ ಭಯಾನಕವಾಗಿತ್ತು.  ನೀವು ತುಂಬಾ possessive ನಿಮ್ಮ way of thinking ಬದಲಾಯಿಸಿಕೊಳ್ಳಬೇಕು ಎಂಬ ಉಪದೇಶ ಬೇರೆ.  ಹೀಗೆ ಉಪದೇಶ ಮಾಡುವಾಗ ನನ್ನ ಮುಖದ ಮೇಲಿನ ರಾಜಕಳೆ ಕಾಣಲಿಲ್ಲವೇನೋ?
ಹೀಗೆ ಪ್ರೀತಿಯೆಂಬ ಭ್ರಮಾಲೋಕದಲ್ಲಿ ಹತ್ತು ಹಲವಾರು ಅನುಭವಗಳು ಕಿರಿ ಕಿರಿಗಳು ನಿಮಗೆ ಬೇಕೆಂದರೆ ದೃಶ್ಯ ಒಂದರ ಮಾತುಗಳನ್ನು ನಂಬಿ ಕಷ್ಟ ಅನುಭವಿಸಲೇ ಬೇಕು.
ಚಾರಿತ್ರ್ಯ ಚರಿತ್ರೆ ಗೊತ್ತಿಲ್ಲದವರೊಂದಿಗೆ ಅತೀಯಾದ ಸಲಿಗೆ, ಮೈ-ಮನಸುಗಳ ಹಂಚಿಕೊಳ್ಳುವ ಮುನ್ನ ಅತಿಯಾದ ಎಚ್ಚರಿಕೆ ಇರಲಿ. ವಾಸ್ತವಾದ ಹೆಸರಿನಲ್ಲಿ ಯ
 
ಯಾರಾದರೂ ಗುಟ್ಟಾಗಿ ಒದ್ದು ಹೋದಾಗ ಬಿದ್ದ ಒದೆಯನ್ನು ಬೇರೆಯವರೊಂದಿಗೆ ಹೇಳಿಕೊಳ್ಳವುದು ಕಷ್ಟ!  ಬೇರೆಯವರ ಚಾರಿತ್ರ್ಯ ಹಾಗೂ ಚರಿತ್ರೆ   ಕಂಡು ಪ್ರೀತಿಸುವ ವ್ಯವಧಾನ ಹೃದಯಕ್ಕೆ ಇರುವುದಿಲ್ಲವಾದರೂ ಒಂದು ಕ್ಷಣದ ಈ ತರಹದ ಆತಂಕದ ಗುಮಾನಿ ನಿಮ್ಮನ್ನು ನೋವಿನಿಂದ ರಕ್ಷಿಸಬಹುದು ಎಂಬ ಸಣ್ಣ ನಂಬಿಕೆ ಅಷ್ಟೆ!!     

No comments:

Post a Comment