Wednesday, July 21, 2010

ಖ್ಯಾತ ಚಿಕಿತ್ಸಕ - ಡಾ. ಬಿ ಮಂಜುನಾಥ



ನನ್ನ ಆಸ್ಪತ್ರೆಯ ದಿನಗಳಲ್ಲಿ ಚಿಕಿತ್ಸೆಯನ್ನು ಆಧ್ಯಾತ್ಮದ ಹಿನ್ನಲೆಯಲ್ಲಿ ನೀಡಿ ಗಮನ ಸೆಳೆದ ಡಾ. ಬಿ. ಮಂಜುನಾಥ ಅವರನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತದೆ.
ಉತ್ತಮ ಸಂಸ್ಕಾರದ ಹಿನ್ನಲೆಯುಳ್ಳ ಡಾ. ಮಂಜುನಾಥ ಅವರ ತಂದೆ ಮೂಲತ: ಚನ್ನಗಿರಿಯವರು. ಕರ್ನಾಟಕ ಸರಕಾರದ ಕಾನೂನು ಇಲಾಖೆಯ under secretary ಯಾಗಿದ್ದ ಬಸವಲಿಂಗಪ್ಪ ಅವರು ದಕ್ಷತೆಗೆ ಹೆಸರಾದವರು.
ಕಾನೂನು ವ್ಯಾಸಂಗ ಮಾಡುವಾಗ ಜೆ.ಎಚ್. ಪಟೇಲರ ಸಹಪಾಠಿಗಳು. ಡಾ. ಮಂಜುನಾಥ ಅವರ ಸೋದರ ಮಾವ ಶಿವಮೊಗ್ಗ ಹಾಗೂ ಡಾವಣಗೆರೆಯನ್ನು ಪ್ರತಿನಿಧಿಸಿದ್ದ ಲೋಕಸಭೆ ಸದಸ್ಯರಾದ ಟಿ.ವ್ಹಿ. ಚಂದ್ರಶೇಖರಪ್ಪನವರು.
ಸರಕಾರಿ ಹಾಗೂ ರಾಜಕೀಯ ಹಿನ್ನಲೆಯಲ್ಲಿ ಬೆಳೆದರೂ ಡಾ. ಮಂಜುನಾಥ ವೈಯಕ್ತಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡವರು.
M.S. Ortho ಪದವಿ ಪಡೆದು ತಂದೆಯಂತೆಯೇ ಸರಕಾರಿ ವೃತ್ತಿಯನ್ನು ಆಯ್ದುಕೊಂಡು, ಈಗ ಜಯನಗರ ಜನರಲ್ ಆಸ್ಪತ್ರೆಯ ಎಲವು, ಕೀಲುಗಳ ಶಸ್ತ್ರ ಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಾರೆ.
ಆಸ್ಪತ್ರೆಯಲ್ಲಿ ನಾನು ಕಳೆದ ಇಪ್ಪತ್ತು ದಿನಗಳು ಅಪಸ್ಮರಣೀಯವಾಗಲು ಡಾ. ಮಂಜುನಾಥ ಕಾರಣರಾದರು.
ಆಧ್ಯತ್ಮ ಜೀವಿಯಾಗಿರುವ ಅವರು ಎನಗಿಂತ ಕಿರಿಯರಿಲ್ಲ ಎಂಬ ಮನೋಭಾವ ಇಟ್ಟುಕೊಂಡೇ treatment ಕೊಡುತ್ತಾರೆ.
ನನ್ನ ಓದುವ ಹವ್ಯಾಸವನ್ನು ಗಮನಿಸುತ್ತಿದ್ದ ಅವರು ನಿತ್ಯ ನನ್ನೊಂದಿಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತಿದ್ದರು. ಸರಕಾರಿ ಆಸ್ಪತ್ರೆಗಳ ಸ್ಥಿತಿಗತಿ, ಅಲ್ಲಿನ ಅನಿವಾರ್ಯ ಬ್ರಷ್ಟಾಚಾರ ವ್ಯವಸ್ಥೆ. ಅದರಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡುವ ತುಡಿತವಿರುವ ವೈದ್ಯರುಗಳು ಹೀಗೆ ಹತ್ತಾರು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದರು.
ತಾವೊಬ್ಬ ಶ್ರೇಷ್ಠ ಚಿಕಿತ್ಸಕರು ಎಂಬ 'ಅಹಂ' ಇಲ್ಲದ ಅವರ ಸರಳ ನಡವಳಿಕೆ ಅಚ್ಚರಿ ಎನಿಸಿತು.
ನಿಮಗೆ ತುಂಬಾ ಪೆಟ್ಟಾಗಿದೆ ದೇವರ ಮೇಲೆ ಭಾರ ಹಾಕಿ ನನ್ನ ಮೇಲೆ ನಂಬಿಕೆ ಇಟ್ಟರೆ ಖಂಡಿತಾ ಆಪರೇಶನ್ success ಆಗುತ್ತದೆ' ಎಂದು ಮೊದಲ ಭೇಟಿಯಲ್ಲಿ ನುಡಿದಾಗ ನನಗೆ ಅವರನ್ನು ನಂಬಬೇಕು ಎನಿಸಿತು. ಅದೇ ನಂಬಿಕೆಯಿಂದಲೇ ಆಪರೇಷನ್ ಗೆ ತಯಾರಾದೆ ಒಳ್ಳೆಯ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ನನ್ನ ನಿರ್ಣಯ ಬದಲಾಯಿಸಿದೆ.
ತಮ್ಮ ವೃತ್ತಿ ಬದುಕಿನಲ್ಲಿ ಪೂರೈಸಿದ ಇಂತಹ ಅನೇಕ complecated ಸರ್ಜರಿಗಳ ಕುರಿತು ವಿವರಿಸಿ ನನ್ನ ಆತ್ಮವಿಶ್ವಾಸ ಹೆಚ್ಚಿಸಿದರು.
ಒಳ್ಳೆಯ Implant ಬಳಸಿ, ಸ್ನೇಹಿತರ ನೆರವಿನಿಂದ 13-6-2010 ರಂದು ರವಿವಾರವಾದರೂ ಆಪರೇಷನ್ ಮಾಡಿದ್ದು ಅಚ್ಚರಿ ಎನಿಸಿತು. ಯಾವುದೇ ರೀತಿಯ infection ಆಗಬಾರದು ಎಂಬ ಕಾರಣಕ್ಕೆ ಅನೇಕ ಕ್ರಮಗಳನ್ನು ತಗೆದುಕೊಂಡಿದ್ದು, ನಂತರ ಸೂಕ್ತ ಚಿಕಿತ್ಸಗಾಗಿ ನೆರವಾದದ್ದು ನನ್ನ ನೋವನ್ನು ದೂರಮಾಡಿತು.
ಆರೋಗ್ಯ ಸಚಿವರ ಸ್ನೇಹಿತ ಎಂಬ 'ಅಹಂ' ನ್ನು ಎಲ್ಲಿಯೂ ತೋರಿಸಲಿಲ್ಲ ಎಂಬ ಕಾರಣಕ್ಕೆ ನನ್ನ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡಿದರು.
ಖಾಸಗಿಯ super special ಆಸ್ಪತ್ರೆಗಳ ಹಾವಳಿಯ ಮಧ್ಯೆಯೂ ಸರಕಾರಿ ಸಂಸ್ಥೆಗಳು ಗಟ್ಟಿಯಾಗಿ ಉಳಿಯಲು ಡಾ. ಮಂಜುನಾಥರಂತಹ ವೈಧ್ಯರು ಕಾರಣ ಎನಿಸಿತು.
ಅಮೇರಿಕಾದಲ್ಲಿರುವ ಇಂಜನಿಯರ್ ಮಗ, ವೈಧ್ಯಕೀಯ ಅಧ್ಯಯನ ಮಾಡುತ್ತಿರುವ ಮಗಳು ಹಾಗೂ ವಿಜ್ಞಾನಿಯಾಗಿರುವ ಪತ್ನಿಯರೊಂದಿಗಿನ ಸುಖಿ ಸಂಸಾರಕ್ಕೆ ತಮ್ಮ ಪ್ರಮಾಣಿಕತೆಯೂ ಕಾರಣ ಎಂಬುದನ್ನು ಅವರ ಆದರ್ಶ ಎದ್ದು ತೋರಿಸುತ್ತದೆ. ನಡೆ-ನುಡಿ ಒಂದೇ ಪರಿಯಿದ್ದಾಗ ಬದುಕು ಎಷ್ಟೊಂದು ಅರ್ಥಪೂರ್ಣ ಎಂಬುದಕ್ಕೆ ಡಾ. ಮಂಜುನಾಥ ಮಾದರಿಯಾಗುತ್ತಾರೆ.
ಜುಲೈ ಒಂದು ವೈಧ್ಯಕೀಯ ದಿನಾಚರಣೆಯ ದಿನದೊಂದು ಅವರನ್ನೆಲ್ಲಾ ಅಭಿನಂದಿಸುವ ಅವಕಾಶ ಸಿಕ್ಕದ್ದು ನನ್ನ ಭಾಗ್ಯವೇ ಸರಿ!
ವೈಧ್ಯಕೀಯ ವೃತ್ತಿಗಿರುವ ಘನತೆಯ ಕುರಿತು, ಸರಕಾರಿ ವೈಧ್ಯರ ಬಗೆಗೆ ನನ್ನ ಗೌರವ ಹೆಚ್ಚಿಸಲು ಕಾರಣರಾದ ಡಾ. ಮಂಜುನಾಥ ತರದವರ ಕುರಿತು ಒಂದು ಗಂಟೆ ನಿರರ್ಗಳವಾಗಿ ಮಾತನಾಡಿ ಆಸ್ಪತ್ರೆಯ ಎಲ್ಲರನ್ನು ಅಭಿನಂದಿಸಿದೆ.
ಡಾ. ಮಂಜುನಾಥ ಅವರ ಸೇವೆ ಸದಾ ಸಮಾಜಕ್ಕೆ ದೊರಕಲಿ ಎಂದು ಹಾರೈಸುತ್ತೇನೆ.

No comments:

Post a Comment