Wednesday, July 21, 2010

ಸರಕಾರಿ ವ್ಯವಸ್ಥೆ ಹೀಗೆಂದರೇನು?


ಸರಕಾರ ಸಾರ್ವಜನಿಕರಿಗಾಗಿ ಹಾನಿಯಾದರೂ ಚಿಂತೆಯಿಲ್ಲ ಕೆಲವು ಇಲಾಖೆಗಳನ್ನು ಇಟ್ಟುಕೊಂಡಿದೆ.
ಸಾರ್ವಜನಿಕ ಸೇವೆಗಾಗಿಯೇ ಮೀಸಲಾಗಿರುವ ಸಾರಿಗೆ, ಆರೋಗ್ಯ, ಶಿಕ್ಷಣ ಹಾಗೂ ಟೆಲಿಫೋನ್ ಇಲಾಖೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ರಕ್ಷಿಸುತ್ತಲಿವೆ.
ಹಾನಿ ಎಂಬ ಕಾರಣಕ್ಕೆ ಇವು ನಿಲ್ಲುವುದಿಲ್ಲ. ನಿಲ್ಲಬಾರದು ಕೂಡಾ!
ಆದರೆ ಐಷಾರಾಮಿ ಬದುಕನ್ನು ಬಯಸುವವರು ಈ ಮೇಲಿನ ಇಲಾಖೆಗಳ ಸರಕಾರಿ ಸೇವೆಗಳನ್ನು ನಿರಾಕರಿಸುತ್ತಾರೆ.
ಅಯ್ಯೋ ಸರಕಾರಿ ಆಸ್ಪತ್ರೆಗಳಿಗೆ ಸಾಯಲು ಹೋಗಬೇಕು, ಸರಕಾರಿ ಶಾಲೆಗೆ ಹಚ್ಚಿದರೆ ಮಕ್ಕಳು ಉದ್ಧಾರವಾದಂತೆಯೆ? ಅರ್ಜೆಂಟ್ ಗೆ ಅಂತ ಮದುವೆ ಆಮಂತ್ರಣ ಕಳಿಸಿದರೆ, ಮಕ್ಕಳಾದ ಮೇಲೆ ತಲುಪುತ್ತೆ ಅಂತ ಮೂದಲಿಸುವ ಪರಿಪಾಠವಿದೆ. ಆದರೆ ಇದು ಸಂಪೂರ್ಣ ಸತ್ಯವಾ?
ಹೀಗೆ ಉಳ್ಳವರು ಮೂದಲಿಸುತ್ತಿದ್ದರೂ ಸರಕಾರಿ ಬಸ್ಸುಗಳ ಒಳಗೆ ಹಾಗೂ ಮೇಲೆ ಕುಳಿತು ಜನ ಪ್ರಯಾಣಿಸುತ್ತಾರೆ.
ಸರಕಾರಿ ಆಸ್ಪತ್ರೆಗಳಾಗಲಿ ಕಾಲು ಇಡೋಕೆ ಸ್ಥಳ ಇರದ ಹಾಗೆ ಜನ ತುಂಬಿರುತ್ತಾರೆ. ಸರಕಾರಿ ಶಾಲೆಗಳಲ್ಲಿ ಓದಿಯೇ ಉನ್ನತ ಸ್ಥಾನಕ್ಕೇರುತ್ತಾರೆ. ಅಧಿಕೃತ ಎನಿಸಿಕೊಳ್ಳಲು ಅಂಚೆ ಇಲಾಖೆಯನ್ನೇ ಅನೇಕರು ನಂಬಿದ್ದಾರೆ.
ಈ ತರಹದ ಟೀಕೆಗಳು ಸತ್ಯವಲ್ಲ ಅಲ್ಲವೆ?
ಆರ್ಥಿಕವಾಗಿ ಹಿಂದುಳಿದವರು, ಬಡವರು ಇಂದಿಗೂ ಸರಕಾರಿ ವ್ಯವಸ್ಥೆಯನ್ನೇ ನಂಬಿದ್ದಾರೆ.
ಸಮಾಜದಲ್ಲಿರುವ ಶ್ರೀಮಂತ, ಮಧ್ಯಮವರ್ಗದವರು ಏನೇ ಅಸಾರ್ವತ್ರಿಕ ಅಭಿಪ್ರಾಯ ಕೊಡಲಿ ಆಳುವ ಸರಕಾರ ಮಾತ್ರ ಸರಕಾರಿ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಹೆಚ್ಚಿಸಬೇಕು.
ಆಳುವ ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಸರಕಾರಿ ವ್ಯವಸ್ಥೆಯಲ್ಲಿ ವಿಶ್ವಸ ಬೆಳೆಸಿಕೊಳ್ಳಬೇಕು.
ತಾವು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. (ಕೇವಲ ಬಿಲ್ ಕ್ಲೇಮ್ ಮಾಡಲು ಅಲ್ಲ), ಸರಕಾರಿ ಬಸ್ಸುಗಳಲ್ಲಿ ಓಡಾಬೇಕು ಮಕ್ಕಳನ್ನು ಸರಕಾರಿ ಶಲೆಗಳಲ್ಲಿ ಓದಿಸಬೇಕು.
ಅಮೇರಿಕಾ, ಜಪಾನ್, ಚೈನಾ ದೇಶಗಳ ರಾಜಕಾರಣಿಗಳ ಉದಾಹರಣೆ ನೀಡುತ್ತಾ ಕಾಲಹರಣ ಮಾಡದೆ ಒಮ್ಮೆ ನಾವು ಪಾಲಿಸಿ ನೋಡನ ಅಲ್ಲವೆ?

No comments:

Post a Comment