Wednesday, July 14, 2010

ಅನಾರೋಗ್ಯ ಶಾಪ ಅಲ್ಲ

ಆಸ್ಪತ್ರೆಗೆ, ಜೈಲಿಗೆ ಹಾಗೂ ಸ್ಮಶಾನಕ್ಕೆ ಯಾರೂ ಬಯಸಿ ಹೋಗುವುದಿಲ್ಲ. ಹೋಗಬೇಕೆಂದು ಬಯಸುವುದಿಲ್ಲ ಕೂಡಾ!
ನಲವತ್ತೈದರ ಪ್ರಾಯಕ್ಕೆ ಬಂದ ನಾನು ಆಸ್ಪತ್ರೆಗೆ ದಾಖಲಾದ ನೆನಪುಗಳಿಲ್ಲ. ನನ್ನ ಮಿತಿಯಲ್ಲಿ ಆರೋಗ್ಯವನ್ನು ಚನ್ನಾಗಿ ಕಾಪಾಡಿಕೊಂಡಿದ್ದೇನೆ.
9-6-2010 ರ ರಸ್ತೆ ಅಪಘಾತ ನನ್ನನ್ನು ಬಯಸದ ಸ್ಥಳಕ್ಕೆ ಕಳಿಸಿತು.
ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಂತೆ ಸರಕಾರಿ ಆಸ್ಪತ್ರೆಯ ಅನುಭವಗಳು. ಇಷ್ಟೊಂದು ಆಪ್ತವಾಗಿರಬಹುದು ಅಂದುಕೊಂಡಿರಲಿಲ್ಲ.
ಸರಕಾರಿ ಆಸ್ಪತ್ರೆಗಳ ಬಗೆಗಿದ್ದ ಅಭಿಪ್ರಾಯ ಬದಲಾಯಿತು. ಅನಾರೋಗ್ಯ ಆಪ್ತರನ್ನು ಅರಿಯಲು ನೆರವಾಯಿತು.
ವೈದ್ಯರುಗಳು, ನರ್ಸಿಂಗ್ ವರ್ಗ ತೋರಿದ ಪ್ರೀತಿ, ನೋವನ್ನು ಸಹಿಸಿಕೊಳ್ಳುವ ಸವಾಲು ಎಲ್ಲದರಲ್ಲಿಯೂ ಹೊಸತನ ಅನುಭವಿಸಿದೆ.
ಆಪರೇಶನ್ ಮುಗಿದ ಮೇಲೆ ಎಲ್ಲರೂ ಹೇಳಿದರು.ಇದೊಂದು ರಿಸ್ಕ, ನೀವು Lucky ಪಾರಾದಿರಿ ಅಂದಾಗ ಮತ್ತೊಮ್ಮೆ ಅಂದುಕೊಂಡೆ ಬಾರದು ಬಪ್ಪದು, ಬಪ್ಪದು ತಪ್ಪದು ಎಂದು.
ಸರಿ ಸುಮಾರು 20 ದಿನಗಳನ್ನು ಆಸ್ಪತ್ರೆಯಲ್ಲಿ ಶಿಸ್ತಿನಿಂದ, ಸಹನೆಯಿಂದ ಕಳೆದೆ. ಓದಿದ ಒಂದೆರೆಡು ಪುಸ್ತಕಗಳು, ಭೇಟಿ ಆದ ಹಲವಾರು ಆಪ್ತರು ಹೊಸ ಜಗತ್ತನ್ನು ತೆರೆದಿಟ್ಟರು. ವ್ಯಥೆ ಪಡಬೇಕೋ, ಬೇಡವೋ ಎಂಬ ಗೊಂದಲ ಆಗಾಗ ಉಂಟಾಗುತ್ತಿತ್ತು. ಆಸ್ಪತ್ರೆ ತುಂಬಾ ಬಿಡುವಾದಾಗಲೆಲ್ಲ ಓಡಾಡುತ್ತಿದ್ದೆ. ರೋಗಿಗಳನ್ನು, ರೋಗಿಗಳ ಬಂಧುಗಳನ್ನು ಆಗಾಗ ವಿಚಾರಿಸುತ್ತಿದ್ದೆ.
ಸರಕಾರಿ ಶಾಲೆ, ಸರಕಾರಿ ಬಸ್ಸು ಹಾಗೂ ಸರಕಾರಿ ಆಸ್ಪತ್ರೆ ಎಂದರೆ ಜನ ಮೂಗು ಮುರಿಯುತ್ತಾರೆ.
ಬಡತನದ ಅನಿವಾರ್ಯತೆಯಲ್ಲಿ ಮಾತ್ರ ಜನ ಇವುಗಳನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಸುಳ್ಳಾಯಿತು.
ಸರಕಾರಿ ಆಸ್ಪತ್ರೆಗಳಿಗೆ ಕೇವಲ ಬಡವರು ಬರುವುದಿಲ್ಲ ಉಳ್ಳವರು ಬರುತ್ತಾರೆ. ವ್ಯವಸ್ಥೆಯ ಸದುಪಯೋಗವನ್ನು ಪ್ರಜ್ಞಾವಂತರು ಪಡೆದುಕೊಳ್ಳುತ್ತಾರೆ ಎಂಬ ಸತ್ಯ ತಿಳಿಯಿತು.
ಊರಿಂದ ಫೋನಾಯಿಸಿದ ಗೆಳೆಯರು ಅಚ್ಚರಿಯಿಂದ ಕೇಳುತ್ತಿದ್ದರು. 'ಅರೆ ನೀವು ಬೆಂಗಳೂರಿಗೆ ಹೋಗಿ ಬೇಕಾದಷ್ಟು standard ಆಸ್ಪತ್ರೆಗಳಿದ್ದರೂ ಸರಕಾರಿ ಆಸ್ಪತ್ರೆಯಲ್ಲಿ ಯಾಕೆ ಇದ್ದೀರಿ? ಎಂದು.
ಇಂತಹ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿ ಹೋಯಿತು. ಆರಂಭದಲ್ಲಿ ಉಂಟಾದ ಆತಂಕ ಹಿತೈಶಿಗಳಿಗೂ ಆಗಿತ್ತು. ಮನಸು ಮಾಡಿದರೆ ಸರಕಾರಿ ವ್ಯವಸ್ಥೆಯಲ್ಲೂ ಉತ್ತಮ ಕಾರ್ಯ ನಿರ್ವಹಣೆ ಸಾಧ್ಯ ಭಾವ ಉಂಟಾಯಿತು.
VIP ಗಳಾಗಿ ದಾಖಲಾದಾಗ ಉಂಟಾಗುವ ಅನುಭವವೇ ಬೇರೆ, ಸಾಮಾನ್ಯರಾಗಿ ಸೇರಿದಾಗ ಸಿಗುವ ಅನುಭವ ಬೇರೆ ಆದರೂ ಎರಡನ್ನು ತುಲನೆ ಮಾಡಲು ಸಾಧ್ಯವಾಯಿತು. ಮನದಲ್ಲುಂಟಾದ ಅನೇಕ ಭಾವ ತಲ್ಲಣಗಳನ್ನು ನವಿರಾಗಿ ದಾಖಲಿಸುವ ಇರಾದೆ ನನ್ನದು.
ಈ ಕುರಿತು ಸಣ್ಣ ಪುಸ್ತಿಕೆಯನ್ನು ಪ್ರಕಟಿಸುವುದು ಸೂಕ್ತ ಎಂದು ಅಲ್ಲಿನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮುಂದೆ ಪ್ರಾಮಾಣಿಕ ಹಂಚಿಕೊಳ್ಳುವ ಭಾವನೆಗಳಿಗೆ ನಿಮ್ಮ ಪ್ರತಿಕ್ರಿಯೆ ಬಯಸುತ್ತೇನೆ.

No comments:

Post a Comment