Wednesday, February 20, 2019

ವಿಶಾಲ ಎದೆ

ವಿಶಾಲ ಹರವಿದೆದೆಯ ಮೇಲೆ
ನಿನ್ನ ಬೆರಳುಗಳ ಮೃದು
ಮೀಟುವಿಕೆಯ ನರ್ತನ
ಪುಳಕಗೊಳಿಸಿದೆ ಎನ್ನ ಮನವ

ಮಗುವಿನ ಹಾಗೆ ತೊಡೆಯ
ಮೇಲೆ ಮಲಗಿದಾಗ ನಿನ್ನ
ಕೋಮಲ ಬೆರಳುಗಳು ತಲೆ
ನೇವರಿಸಿದಾಗ ಕಣ್ಣು ಮಂಜು

ತುಟಿಯ ಮಧುರತೆ ಹಣೆ
ಕೆನ್ನೆ ಮೇಲೆ ನಲಿದಾಗ
ಪುಳಕಗೊಂಡು ಮೃದುವಾಗಿ
ಕಚ್ಚಿದ್ದು ನೋವಾಯಿತೆ ಸಖಿ

ಪ್ರೀತಿಯಲ್ಲದೆ ಇಲ್ಲಿ
ಬೇರೇನೂ ಇಲ್ಲ
ಕೊಟ್ಟು ಪಡೆಯಲು ಒಲವ
ಮಿಲನವಷ್ಟೇ ಸಾಕು

ಖುಷಿಯಾಗಿರಲು
ನಿನ್ನ ಬಿಸಿಯಪ್ಪುಗೆಯಷ್ಟೇ
ಸಾಕು ಜಗದ ಜಂಜಡವ
ಮರೆತು ಸುಖವಾಗಿರಲು ಸಖಿ

---ಸಿದ್ದು ಯಾಪಲಪರವಿ

No comments:

Post a Comment