ಕನಸುಗಳೇ ವಿಚಿತ್ರ
ನಿದ್ರೆಯಲಿ ಒಮ್ಮೊಮ್ಮೆ ತೀವ್ರವಾಗಿ ಕಾಡುವ ಕನಸುಗಳಿಗೆ ಬೆಚ್ಚಿ ಬೀಳುವಂತಾಗುತ್ತದೆ. ತರ್ಕಾತೀತವಾಗಿರುವ ಕನಸುಗಳು ಯಾಕೆ ಬೀಳುತ್ತವೆಯೋ ಅರ್ಥವಾಗುವುದಿಲ್ಲ . ಮನೋವಿಜ್ಞಾನಿಗಳ ಅಭಿಪ್ರಾಯಗಳು ಕೂಡಾ ಒಮ್ಮತವಾಗಿಲ್ಲ.
ಭಯಾನಕವೆನಿಸುವ ಕನಸುಗಳು ನಮ್ಮನ್ನು ಬೆಚ್ಚಿಬೀಳಿಸಿ ಎಚ್ಚರಗೊಳಿಸಿಬಿಡುತ್ತವೆ ಹಾಗೆ ಎಚ್ಚರವಾದಾಗೆಲ್ಲ ಕನಸುಗಳ ಕಾರಣ ಹುಡುಕುತ್ತಲೇ ಇದ್ದೇನೆ.
ನನಗೆ ಬೀಳುವ ಕನಸುಗಳು ಸುದೀರ್ಘವಾಗಿರಲು ಗಾಢ ನಿದ್ರೆ ಕಾರಣವಿರಬಹುದು ಎನಿಸುತ್ತದೆ. ಎಷ್ಟೋ ಬಾರಿ ಮತ್ತೆ ಮಲಗಿದಾಗ ಅದೇ ಕನಸು ಮುಂದುವರೆದು ಬೆರಗುಂಟಾಗಿದೆ.
ಎಚ್ಚರಗೊಂಡ ನಂತರ ಅವುಗಳನ್ನು ಪರಾಮರ್ಶೆ ಮಾಡಿದ್ದೇನೆ ಆದರೆ ಉತ್ತರ ಸಿಗುತ್ತಲೇ ಇಲ್ಲ.
ಅಲ್ಲಿ ಬರುವ ವ್ಯಕ್ತಿಗಳು , ಸ್ಥಳಗಳು , ಘಟನೆಗಳು ವಿಚಿತ್ರ ಹಾಗೂ ಅಪರಿಚಿತವಾಗಿರುತ್ತವೆ.
Link less ಆಗಿ ಏನೇನೋ ಸಂಭವಿಸಿಬಿಡುತ್ತದೆ. ಕನಸಲಿ ಸತ್ತರೆ ಒಳ್ಳೆಯದು , ಹಬ್ಬದೂಟ ಮಾಡಬಾರದು ಇತ್ಯಾದಿ ಇತ್ಯಾದಿ ನಂಬಿಕೆಗಳಿವೆ.
ಶೇಕ್ಷಪಿಯರ್ ನಂತಹ ಮೇಧಾವಿ ಕನಸುಗಳ ಮಹತ್ವವನ್ನು ತನ್ನ ಕೃತಿಗಳಲ್ಲಿ ಬಳಸಿ ನನ್ನ ಕುತೂಹಲ ಹೆಚ್ಚಿಸಿದ್ದಾನೆ.
ಸ್ವಪ್ನಸ್ಖಲನದ ದಾಳಿಗೆ ತುತ್ತಾದಾಗ ಮನಸು ಕಸಿವಿಸಿಗೊಳ್ಳುವುದುಂಟು.
ಕನಸು ಬಿದ್ದು ಹೋಗುವ ಗಂಭೀರ ಸಂಗತಿ ಅಲ್ಲವಾದರೂ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ...
----ಸಿದ್ದು ಯಾಪಲಪರವಿ
No comments:
Post a Comment