Thursday, August 16, 2018

ಅಪ್ರಿಯ ಸತ್ಯ

ಅಪ್ರಿಯ ಸತ್ಯ ಮತ್ತು ನಾನು

ವಚನಶ್ರಾವಣ ಕಾರ್ಯಕ್ರಮ: ಸಿಂಧನೂರಿನ ಬಸವ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಂಬಾ ಅಪ್ರಿಯ ಸತ್ಯ ಸಂಗತಿಗಳನ್ನು ಪ್ರಸ್ತಾಪಿಸಿದ್ದು ಹಲವರಿಗೆ ತಳಮಳವಾಗಿದೆ.

ಬಹುಪಾಲು ಸಂಘಟಿಕರ ಆಶಯದಂತೆ ನಾವು ಮಾತನಾಡಲಾಗುವುದಿಲ್ಲ .
ತಮ್ಮ ಸೈದ್ಧಾಂತಿಕ ನಿಲುವುಗಳ ಜಾಡು ಹಿಡಿದೇ ಅತಿಥಿಗಳು ಮಾತನಾಡಲಿ ಎಂದು ಬಯಸುವುದು ಅಸಮಂಜಸ.

ಮೊನ್ನೆ ಅಂತಹ ಮಿತಿಗಳನ್ನು ದಾಟಿ ಮುಕ್ತವಾಗಿ ಮಾತನಾಡಿದೆ. ನನ್ನ ಮಾತುಗಳನ್ನು ಬಹುಪಾಲು ಜನ ಸಂಭ್ರಮಿಸಿದರು .

ಕೆಲವೇ ಕೆಲವು ಜನ ತಮ್ಮ ಅಸಮ್ಮತಿಯನ್ನು ಸೂಚ್ಯವಾಗಿ , ನಾಜೂಕಾಗಿ ಹೇಳಿದ್ದನ್ನು ನಾನೂ ಅಷ್ಟೇ ನಾಜೂಕಾಗಿ ಕೇಳಿಸಿಕೊಳ್ಳಲಿಲ್ಲ !

ಕಾಯಕ-ದಾಸೋಹ-ಇಷ್ಟಲಿಂಗ ತತ್ವ ಪರಿಪಾಲಕರೆಲ್ಲ ಲಿಂಗಾಯತರಾಗಿ ಪರಿವರ್ತನೆಯಾಗಬಹುದು ಎಂಬ ಸತ್ಯವನ್ನು ಮೂಲಭೂತವಾದಿ ಮನೋಧರ್ಮದ ಮೂಲ ಜಾತಿವಾದಿ ಲಿಂಗಾಯತರು ಒಪ್ಪುವುದಿಲ್ಲ.

ಇಷ್ಟಲಿಂಗಧಾರಣೆ ಕುರಿತು ಇದ್ದ ನನ್ನ ನಿಲುವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದು ಅವರಿಗೆ ಇಷ್ಟವಾಗಲಿಲ್ಲ. 

ಲಿಂಗಾಯತ -ವೀರಶೈವ ಇತ್ಯಾದಿ ಸಂಗತಿಗಳು ನಿರ್ಧಾರವಾಗುವ ಸಂಕ್ರಮಣದಲಿ ಇಂತಹ ಆತಂಕಗಳು ಸಹಜ. ಇಬ್ಬಗೆಯ ನೀತಿ ಬದಿಗಿರಿಸಿ ಲಿಂಗಾಯತ ವೈಶಾಲ್ಯತೆಯನ್ನ ಅರಿಯಬೇಕು.

ಆಚರಣೆಯ ಜೊತೆಗೆ ' ಬಸವಪ್ರಜ್ಞೆ ' ನೆಲೆಗೊಳ್ಳಲಿ ಎಂದು ಭಾವುಕನಾಗಿ ಹೇಳುವಾಗ ನನ್ನ ಗುರುಗಳಾದ ಡಾ.ಎಂ.ಎಂ.ಕಲಬುರ್ಗಿ ಅವರು ಒಳಸುಳಿದಂತಾಯಿತು.

ಇಂತಹ ಸಂಕಷ್ಟಗಳ ಸಂದರ್ಭದಲ್ಲಿ
ಅಕ್ಕ-ಅಣ್ಣ-ಅಲ್ಲಮ ನನ್ನ ನಾಲಿಗೆ ಹಾಗೂ ಲೇಖನಿ ಮೇಲೆ ನಿರಂತರ ನೆಲೆಗೊಳಲಿ ಎಂದು ಬೇಡುವೆ.

ನನಗೂ ಈ ಮುಖವಾಡಗಳಿಂದ ರೋಸಿ ಹೋಗಿದೆ. ಅನೇಕ ನಿಷ್ಠುರ ಸತ್ಯಗಳನ್ನು ಹೇಳುವ ಸಂದರ್ಭದಲ್ಲಿ ಮುಖವಾಡಗಳನ್ನು ಕಳಚಿದಕ್ಕೆ ಹಲವರಿಗೆ ಬೇಸರವಾಯಿತು.
ಮುಂದೆ ಇಂತಹ ಕೃತಕ ವಾತಾವರಣದಿಂದ ದೂರಾದರೂ ಚಿಂತೆಯಿಲ್ಲ. ಸತ್ಯವನ್ನೇ ಪ್ರತಿಪಾದಿಸಲು ನಿರ್ಧರಿಸಿದ್ದೇನೆ.

ಅಂದು ನನ್ನ ಮಾತುಗಳನ್ನು ಮೆಚ್ಚಿದ ಹಾಗೂ ಮೆಚ್ಚದವರೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಿ ಎಂಬ ನಿವೇದನೆ ನನ್ನದು.

---ಸಿದ್ದು ಯಾಪಲಪರವಿ

No comments:

Post a Comment